ಮಹಾಪ್ರಸಾದ ಸೇವೆಗೆ ಚಾಲನೆ ನೀಡಿ ಸ್ವತಃ ಉಣಬಡಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ

Monday, September 11th, 2023
laxmi Hebbalkar

ಬೆಳಗಾವಿ: ತಾಲೂಕಿನ ಬಾಳೇಕುಂದ್ರಿ ಬಿ ಕೆ ಗ್ರಾಮದ ಶ್ರೀ ರಾಮೇಶ್ವರ ಮಂದಿರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಭೇಟಿ ನೀಡಿ ದರ್ಶನ ಆಶೀರ್ವಾದ ಪಡೆದರು. ಶ್ರಾವಣದ ಕೊನೆಯ ಸೋಮವಾರದ ಪ್ರಯುಕ್ತ ಮಹಾಪ್ರಸಾದ ಸೇವೆಗೆ ಚಾಲನೆ ನೀಡಿದ ಅವರು, ಸ್ವತಃ ಭಕ್ತಾದಿಗಳಿಗೆ ಪ್ರಸಾದವನ್ನು ಉಣಬಡಿಸಿದರು. ಗ್ರಾಮದ ಹಿರಿಯರು, ಯುವರಾಜ ಕದಂ, ಶಂಕರಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಕೋಲಕಾರ, ಉಮೇಶರಾವ್ ಜಾಧವ್, ಅಪ್ಸರ್ ಜಮಾದಾರ, […]

ವಿಕಲಚೇತನರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ ಪತ್ರಕರ್ತ ಬಿ.ಎನ್. ಅಶೋಕ್ ಶೆಟ್ಟಿಗೆ ರಾಜ್ಯ ಪ್ರಶಸ್ತಿ

Thursday, February 11th, 2021
Ashok Shetty

ಮಂಗಳೂರು:   ವಿಕಲಚೇತನರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ “ವಿಶ್ವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ದಿನಾಚರಣೆ” ಸಮಾರಂಭದಲ್ಲಿ ಪತ್ರಕರ್ತ ಡಾ| ಅಶೋಕ್ ಶೆಟ್ಟಿ ಬಿ.ಎನ್. ಅವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ 11 , ಗುರುವಾರ ರಾಜ್ಯ ಪ್ರಶಸ್ತಿ (ವೈಯಕ್ತಿಕ ಪ್ರಶಸ್ತಿ)  ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಹಿಳೆಯರು, ಮಕ್ಕಳು ಹಾಗೂ ವಿಕಲಚೇತನರ ಕಲ್ಯಾಣಕ್ಕಾಗಿ 2021-22ನೇ ಸಾಲಿನ ಆಯವ್ಯಯದಲ್ಲಿ ಸುಮಾರು 500 ಕೋಟಿ ರೂ.ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದಿದ್ದಾರೆ. […]

ಕುಲಾಲ ಸಂಘ ಮುಂಬಯಿ ವತಿಯಿಂದ ವಿಕಲಚೇತನ ಭಾಗ್ಯಶ್ರೀ ವಿದ್ಯಾಭ್ಯಾಸಕ್ಕೆ ನೆರವು

Wednesday, August 19th, 2020
ಕುಲಾಲ ಸಂಘ ಮುಂಬಯಿ ವತಿಯಿಂದ ವಿಕಲಚೇತನ  ಭಾಗ್ಯಶ್ರೀ ವಿದ್ಯಾಭ್ಯಾಸಕ್ಕೆ ನೆರವು

ಮುಂಬಯಿ : ಬಡತನ, ಅಂಗ ವೈಕಲ್ಯ ವನ್ನೂ ಮೀರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 467 ಅಂಕ ಪಡೆದಿರುವುದು, ಮನಸ್ಸಿದ್ರೆ ಏನೂ ಬೇಕಾದರೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟ ಬಂಟ್ವಾಳದ ಭಾಗ್ಯಶ್ರೀ. ಗೆ ಮುಂಬಯಿ ಕುಲಾಲ ಸಂಘದ ಸದಸ್ಯರ ಸಹಕಾರದಿಂದ 50000 ವಿದ್ಯಾಭ್ಯಾಸಕ್ಕಾಗಿ ನೀಡಲಾಯಿತು ಭಾಗ್ಯಶ್ರೀ ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಇವರ ಸುಪುತ್ರಿ. ತಂದೆ ಕೇಶವರು ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾಗಿದ್ದು ಮನೆಯ ಪಕ್ಕದಲ್ಲಿಯೇ ಒಂದು ಗೂಡಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇಬ್ಬರು ಹೆಣ್ಣು […]

ವಿಕಲಚೇತನ ಮಕ್ಕಳ ಫಿಸಿಯೋಥೆರಪಿ ಕೇಂದ್ರ ಉದ್ಘಾಟನೆ..!

Friday, June 29th, 2018
udupi

ಉಡುಪಿ: ನವ್ಯಚೇತನ ಶಿಕ್ಷಣ ಸಂಶೋಧನೆ ಮತ್ತು ಕಲ್ಯಾಣ ಟ್ರಸ್ಟ್ ಉಡುಪಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ವಿಶೇಷ ಅಗತ್ಯತೆ ಇರುವ ವಿಕಲಚೇತನ ಮಕ್ಕಳ ಫಿಸಿಯೋಥೆರಪಿ ಕೇಂದ್ರವನ್ನು ಗುರುವಾರ ಉಡುಪಿ ಸಿಟಿ ಬಸ್ ನಿಲ್ದಾಣ ಬಳಿ ಇರುವ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಲಾಯಿತು. ಕೇಂದ್ರವನ್ನು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಕೇಂದ್ರದಿಂದ ವಿಕಲಚೇತನ ಮಕ್ಕಳ ಪೋಷಕರಿಗೆ ಹೆಚ್ಚಿನ ಅನುಕೂಲ ಸಿಗುವಂತಾಗಲಿ […]

ದೈಹಿಕ ಅಸಾಮರ್ಥ್ಯ ಕುರಿತು ಕೊರಗುತ್ತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ: ಸಬಿತಾ ಮೊನಿಸ್

Friday, March 9th, 2018
alwas-student

ಮಂಗಳೂರು: `ಹುಟ್ಟಿನಿಂದಲೇ ಎರಡೂ ಕೈಗಳಿಲ್ಲದೆ ಬೆಳೆದು ಬಂದವಳು ನಾನು. ಶಾಲೆಗೆ ಸೇರಲು ಕೂಡ ಹರಸಾಹಸ ಪಡಬೇಕಾಯಿತು. ಈ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿದೆ ಎಂದು ಮೂಡಬಿದಿರೆ ಆಳ್ವಾಸ್ ಮಹಾ ವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸಬಿತಾ ಮೊನಿಸ್ ಹೇಳಿಕೊಂಡಿದ್ದಾರೆ. ಏಳನೇ ತರಗತಿಯಿಂದ ಕಾಲಿನಲ್ಲಿ ಬರೆಯಲು ಆರಂಭಿಸಿದೆ. ಅದರಲ್ಲೂ ಯಶಸ್ವಿಯಾದೆ. ಸಮಾಜ ನನ್ನನ್ನು ಗುರುತಿಸಿ ನನ್ನ ಸಾಧನೆಗೆ ಮಾನ್ಯತೆ ನೀಡಿತು. ನಾನು ಒಂದು ವೇಳೆ ನನ್ನ ದೈಹಿಕ ಅಸಾಮರ್ಥ್ಯದ ಬಗ್ಗೆ ಕೊರಗುತ್ತಾ ಕೂತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ’ ಸಬಿತಾ ಮೊನಿಸ್ ಹೇಳಿದರು. […]