ಅಕ್ಕಿ ಸಾಗಾಟದ ಲಾರಿ ಮೂಡುಬಿದಿರೆ ಬಳಿ ದಂಡೆಗೆ ಢಿಕ್ಕಿ

Thursday, June 17th, 2021
raise-lorry

ಬಂಟ್ವಾಳ : ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬಂಟ್ವಾಳ- ಮೂಡುಬಿದಿರೆ ರಸ್ತೆಯ ವಿದ್ಯಾಗಿರಿ ಬಳಿ ರಸ್ತೆ ಬದಿಯ ದಂಡೆಗೆ ಢಿಕ್ಕಿ ಹೊಡೆದ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಲಾರಿಯ ಚಾಲಕ ಹಾಗೂ ನಿರ್ವಾಹಕ ಗಾಯಗೊಂಡಿದ್ದಾರೆ. ಲಾರಿಯು ಶಿವಮೊಗ್ಗದಿಂದ ಪುತ್ತೂರಿಗೆ ಅಕ್ಕಿ ಸಾಗಾಟ ಮಾಡುತ್ತಿತ್ತು. ಲಾರಿಯನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.

ಮೂಡುಬಿದಿರೆ : ಮೋರಿಗೆ ಬೈಕ್ ಬಿದ್ದು ಯುವಕ ಮೃತ್ಯು

Monday, November 4th, 2019
Prajwal-Acharya

ಮೂಡುಬಿದಿರೆ : ಇಲ್ಲಿನ ವಿದ್ಯಾಗಿರಿಯ ಗಾಂಧಿನಗರ ಬಳಿ ಕಾಮಗಾರಿ ಹಂತದಲ್ಲಿದ್ದ ಮೋರಿಗೆ ಶನಿವಾರ ತಡರಾತ್ರಿ ಬೈಕ್ ಬಿದ್ದು   ಸವಾರನೋರ್ವ ಮೃತಪಟ್ಟ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ. ಬಜ್ಪೆ ನಿವಾಸಿ ಪುರುಷೋತ್ತಮ ಆಚಾರ್ಯ ಅವರ ಪುತ್ರ, ಎಡಪದವಿನ ಚಿಕನ್ ಪಾಸೆಸಿಂಗ್ ಸೆಂಟರ್‌ನ ಕಾರ್ಮಿಕ ಪ್ರಜ್ವಲ್ ಆಚಾರ್ಯ (22) ಮೃತಮಟ್ಟಿದ್ದಾನೆ. ಇರ್ವತ್ತೂರಿನಲ್ಲಿ ಸ್ನೇಹಿತನೊಬ್ಬನ ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಮೂಡುಬಿದಿರೆ ಕಡೆಯಿಂದ ಬಜ್ಪೆಗೆ ಬೈಕ್ ಸವಾರ ಇರ್ವತ್ತೂರಿನ ದೀಕ್ಷಾನ್ ಎಂಬಾತನೊಂದಿಗೆ ಹಿಂತಿರುಗುತ್ತಿದ್ದ ವೇಳೆ ಮೂಡುಬಿದಿರೆ – ಮಂಗಳೂರು ಹೆದ್ದಾರಿಯ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ […]

ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಾಟಕ ”ಮಹಾಮಾಯಿ” ಪ್ರದರ್ಶನ

Thursday, October 6th, 2016
alwas-ranga-adyayana

ಮೂಡಬಿದಿರೆ:ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಆಭಿನಯಿಸಿರುವ ಜಾನಪದ ನಾಟಕ ”ಮಹಾಮಾಹಿ” ಅಕ್ಟೋಬರ್ 04 ರಿಂದ 5,6,8,9 ರ ತನಕ, ಸಂಜೆ 2.45ಕ್ಕೆ ನುಡಿಸಿರಿ ವೇದಿಕೆ, ವಿದ್ಯಾಗಿರಿಯಲ್ಲಿ ಐದು ಪ್ರದರ್ಶನವನ್ನು ನೀಡಲಿದೆ. ಈಗಾಗಲೇ ಎರಡು ಪ್ರದರ್ಶನವನ್ನು ಅದ್ದೂರಿ ರಂಗಸಕ್ತರ ಸಮ್ಮುಖದಲ್ಲಿ ಪೂರೈಸಿದ್ದು ,ಇನ್ನೂ ಮೂರು ಪ್ರದರ್ಶನ ನಡೆಯಲಿದೆ. ಡಾ ಚಂದ್ರಶೇಖರ ಕಂಬಾರ ರಚನೆಯ , ಜೀವರಾಂ ಸುಳ್ಯ ನಿರ್ದೇಶನ, ಸಂಗೀತ, ರಂಗತಂತ್ರ, ರಂಗವಿನ್ಯಾಸ, ಬೆಳಕು ವಸ್ತ್ರವಿನ್ಯಾಸವನ್ನು ನೀಡಿದ್ದಾರೆ. ನಾಟಕ ವೀಕ್ಷಿಸಲು ಹೆಚ್ಚನ ಸಂಖ್ಯೆಯಲ್ಲಿ ರಂಗಸಕ್ತರು ಆಗಮಿಸಬೇಕು ಎಂದು ಆಯೋಜಕರು […]

ವಿದ್ಯಾಗಿರಿಯಲ್ಲಿ ಎಂಟನೇ ಆಳ್ವಾಸ್‌ ನುಡಿಸಿರಿಯ ಉದ್ಘಾಟನೆ

Saturday, November 12th, 2011
Alvas Nudi Siri

ಮೂಡಬಿದ್ರೆ : ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಡಾ| ಎಂ. ಮೋಹನ್‌ ಆಳ್ವ ಅವರ ಸಾರಥ್ಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳಕಾಲ ನಡೆಯಲಿರುವ ಎಂಟನೇ ಆಳ್ವಾಸ್‌ ನುಡಿಸಿರಿಯ ಉದ್ಘಾಟನೆಯನ್ನು ಶುಕ್ರವಾರ ಡಾ| ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು. ನುಡಿಸಿರಿಯ ಉದ್ಘಾಟನೆಗೂ ಮುನ್ನ ವೈಭವದ ಮೆರವಣಿಯನ್ನು ಎತ್ತರದ ವೇದಿಕೆಯ ಮೇಲಿರಿಸಿದ್ದ ತುಳುನಾಡಿನ ಆರಾಧನೆ ದೈವದ ಪ್ರತಿರೂಪದ ಎದುರಿಗಿದ್ದ ದೀವಟಿಗೆ ಬೆಂಕಿ ಹಚ್ಚುವ ಮೂಲಕ ಮೂಡಬಿದರೆಯ ಶಾಸಕ ಅಭಯಚಂದ್ರ ಜೈನ್ ಅವರು ಚಾಲನೆ ನೀಡಿದರು. ಸಮ್ಮೇಳನಾಧ್ಯಕ್ಷರು, ಉದ್ಘಾಟಕರು, ಸಂಸದರು, ಶಾಸಕರು ಸೇರಿದಂತೆ […]