ತಮಿಳುನಾಡು ವಿಧಾನಸಭೆ ಚುನಾವಣೆ : ಅಣ್ಣಾಮಲೈ ಹಾಗೂ ನಟಿ ಖುಷ್ಬೂ ಸುಂದರ್ ಅವರಿಗೆ ಟಿಕೆಟ್

Sunday, March 14th, 2021
Annamalai

ಚೆನ್ನೈ:  ತಮಿಳುನಾಡು ವಿಧಾನಸಭೆ ಚುನಾವಣೆಯ 20 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದೆ. ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಾಗೂ ನಟಿ ಖುಷ್ಬೂ ಸುಂದರ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಇದೀಗ ಒಟ್ಟೂ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. ಅಣ್ಣಾಮಲೈ ಅವರು ಅರವಕುರಿಚಿ ಕ್ಷೇತ್ರದಿಂದಲೂ ಖುಷ್ಬೂ ಥೌಸಂಡ್ ಲೈಟ್ಸ್ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ. ಇನ್ನೊಂದೆಡೆ ಕಾರೈಕುಡಿ […]

ಧಾರ್ಮಿಕ ಭಾವನೆಗಳೊಂದಿಗೆ ಆಟ ಆಡುತ್ತಿರುವ ಟಿಎಂಸಿ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ : ಯೋಗಿ ಆದಿತ್ಯನಾಥ್

Tuesday, March 2nd, 2021
Adityanath

ಮಾಲ್ಡಾ: ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವುದಕ್ಕೆ ನಿರ್ಬಂಧ ಇದೆ. ಧಾರ್ಮಿಕ ಭಾವನೆಗಳೊಂದಿಗೆ ಆಟ ಆಡುತ್ತಿರುವ ಟಿಎಂಸಿ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಓಲೈಕೆ ರಾಜಕಾರಣ ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವಂತಹ ಕೆಲಸಗಳಲ್ಲಿ ತೊಡಗಿದ್ದಾರೆ ಎಂದು ಆದಿತ್ಯನಾಥ್  ಆರೋಪಿಸಿದ್ದಾರೆ. ವಿಧಾನಸಭೆ ಚುನಾವಣೆ ಪ್ರಚಾರದ ಅಂಗವಾಗಿ ಮಾ.02 ರಂದು ಮಾಲ್ಡಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಮಮತಾ ಬ್ಯಾನರ್ಜಿ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ವಲಸಿಗರನ್ನು […]

ಬಿಹಾರ ವಿಧಾನಸಭೆ ಚುನಾವಣೆ, ಬಿಜೆಪಿ ಮೊದಲ ಗೆಲುವು

Tuesday, November 10th, 2020
Murari

ಪಟ್ನಾ : ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ  ಹೊರಬೀಳುತ್ತಿದ್ದು, ಬಿಜೆಪಿ ಮೊದಲ ಗೆಲುವು ಕಂಡಿದೆ. ಕೆಯೊಟಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುರಾರಿ ಮೋಹನ್ ಝಾ ಗೆಲುವು ಸಾಧಿಸಿದ್ದಾರೆ. ಆರ್‌ಜೆಡಿ ಅಭ್ಯರ್ಥಿ ಅಬ್ದುಲ್ ಬಾರಿ ಸಿದ್ದಿಕಿ ಅವರನ್ನು ಮುರಾರಿ ಸುಮಾರು 8,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಹಿರಿಯ ಮುಖಂಡರಾಗಿರುವ ಸಿದ್ದಿಕಿ, 2015ರಲ್ಲಿ ಆರ್‌ಜೆಡಿ-ಜೆಡಿಯು ಸರ್ಕಾರದಲ್ಲಿ ಸಚಿವರಾಗಿದ್ದರು. ದರ್ಭಾಂಗಾ ಗ್ರಾಮೀಣ ಕ್ಷೇತ್ರದಲ್ಲಿ ಆರ್‌ಜೆಡಿಯ ಲಲಿತ್ ಕುಮಾರ್ ಯಾದವ್, ತಮ್ಮ ಎದುರಾಳಿ ಜೆಡಿಯುದ ಫರಾಜ್ ಫತ್ಮಿ ಅವರನ್ನು ಸೋಲಿಸಿದ್ದಾರೆ. ದರ್ಭಾಂಗಾ ಕ್ಷೇತ್ರದಲ್ಲಿ […]

ಹರ್ಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ

Friday, October 25th, 2019
maharashtra

ನವದೆಹಲಿ : ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಮಧ್ಯರಾತ್ರಿ ಹೊರಬಿದ್ದಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಗುರುವಾರ ರಾತ್ರಿ 11.15ರ ಸುಮಾರಿಗೆ ಹರ್ಯಾಣ ವಿಧಾನಸಭೆಯ ಫಲಿತಾಂಶವನ್ನು ಚುನಾವಣಾ ಆಯೋಗ ಅಂತಿಮಗೊಳಿಸಿದೆ. ಒಟ್ಟು ವಿಧಾನಸಭಾ ಚುನಾವಣೆಯ ಒಟ್ಟು 90 ಕ್ಷೇತ್ರಗಳ ಪೈಕಿ ಆಡಳಿತಾರೂಢ ಬಿಜೆಪಿ 40 ಸ್ಥಾನವನ್ನಷ್ಟೇ ಗೆದ್ದುಕೊಳ್ಳಲು ಶಕ್ತವಾಗಿದೆ. ಉಳಿದಂತೆ ಕಾಂಗ್ರೆಸ್ 31, ಜೆಜೆಪಿ 10, ಹರ್ಯಾಣ ಲೋಕಹಿತ ಪಕ್ಷ ಒಂದು, […]

ಹಾಡಿನ ಮೂಲಕ ರಂಜಿಸಿದ ಮಾಜಿ ಸಚಿವ ರಮಾನಾಥ್ ರೈ..!

Monday, September 17th, 2018
ramanath-rai

ಮಂಗಳೂರು: ಸದಾ ಸಕ್ರೀಯ ರಾಜಕೀಯ ಚಟುವಟಿಕೆ, ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಮಾಜಿ ಸಚಿವ ರಮಾನಾಥ್ ರೈ ಈ ಬಾರಿ ಕಾರ್ಯಕ್ರಮವೊಂದರಲ್ಲಿ ಸುಶ್ರಾವ್ಯವಾಗಿ ಹಳೆ ಹಿಂದಿ ಚಿತ್ರಗೀತೆಯೊಂದನ್ನು ಹಾಡಿ ಜನರನ್ನು ರಂಜಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ರಮಾನಾಥ್ ರೈ ರಾಜಕಾರಣದಿಂದ ಬಿಡುವು ಪಡೆದುಕೊಳ್ಳುವುದು ಬಲು ಅಪರೂಪ ಅಂತಾನೇ ಹೇಳಬಹುದು. ವಿದ್ಯಾರ್ಥಿ ಜೀವನದ ದಿನಗಳಲ್ಲಿ ರೈ ಖ್ಯಾತ ಕ್ರೀಡಾಪಟು ಆಗಿದ್ದರು. ಅದಲ್ಲದೇ ಸಂಗೀತ ಪ್ರೇಮಿ ಕೂಡ. ಕಾಲೇಜು ದಿನಗಳಲ್ಲಿ ಸ್ಟೇಜ್ ಮೇಲೆ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಬಂಟ್ವಾಳದಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಒಂದರಲ್ಲಿ […]

ಯಾರಿಗೂ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ: ಆನಂದ್‌ ಸಿಂಗ್‌ಗೆ ಡಿಕೆಶಿ ಮನವರಿಕೆ?

Tuesday, May 22nd, 2018
anand-singh

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೂ ಮೂರು ತಿಂಗಳ ಮೊದಲು ಬಿಜೆಪಿ ಬಿಟ್ಟು ಕಾಂಗ್ರೆಸ್‌‌ ಸೇರಿಕೊಂಡು, ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಹೊಸಪೇಟೆ ಶಾಸಕ ಆನಂದ್ ಸಿಂಗ್‌ಗೆ ಕಾಂಗ್ರೆಸ್‌ ಮುಖಂಡ ಡಿಕೆಶಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಹಿಲ್ಟನ್‌ ಹೋಟೆಲ್‌ನಲ್ಲಿ ತಂಗಿರುವ ಕಾಂಗ್ರೆಸ್‌ ನಾಯಕರ ಭೇಟಿಗೆ ತೆರಳಿದ್ದ ಡಿಕೆಶಿ, ಶಾಸಕ ಆನಂದ್‌ ಸಿಂಗ್‌ ಜತೆಗೆ ಪ್ರತ್ಯೇಕ ಮಾತುಕತೆ ನಡೆಸಿದರು. ನಿಮಗೆ ಯಾವುದೇ ಬೆದರಿಕೆ ಬಂದರೂ ನಿಮ್ಮ ಬೆಂಬಲಕ್ಕೆ ಇರುತ್ತೇವೆ. ನೀವು ಭಯಪಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಆನಂದ್‌ […]

ಮತಬೇಟೆಗೆ ಭರವಸೆಗಳ ಮಹಾಪೂರ…ಪ್ರದೇಶವಾರು ಮತ ಸೆಳೆಯಲು ‘ಕೈ’ ಮಾಸ್ಟರ್ ಪ್ಲಾನ್!

Friday, April 27th, 2018
congress

ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್‌ ಪಕ್ಷ ಎದುರಾಳಿಗಳಿಗಿಂತಲೂ ಮುಂಚಿತವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ಮತದಾರರನ್ನ ಸೆಳೆಯಲು ಮಾಸ್ಟರ್‌ ಪ್ಲಾನ್‌ ರೂಪಿಸಿದೆ. ಪ್ರಮುಖವಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದೆ. ಅಲ್ಲದೇ ಪ್ರತಿ ವರ್ಷ 15-20 ಲಕ್ಷ ಉದ್ಯೋಗ ಸೃಷ್ಠಿ ಮಾಡುವ ವಾಗ್ದಾನ ನೀಡಿದ್ದು, ಪ್ರತಿಯೊಂದು ಹಳ್ಳಿಗೂ ವಿದ್ಯುತ್‌ ನೀಡುವ ಭರವಸೆಯನ್ನ ಮತದಾರರಿಗೆ ನೀಡಿದೆ. ಮಹಿಳಾ ಸಬಲೀಕರಣ, ಕೃಷಿಗೆ ವಿಶೇಷ ವಲಯ, […]

ಕರ್ನಾಟಕ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆ

Thursday, December 21st, 2017
Aam-aadmi

ಬೆಂಗಳೂರು: ‘2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ಕುರಿತು ಶೀಘ್ರದಲ್ಲಿಯೇ ಅಧಿಕೃತ ಘೋಷಣೆ ಮಾಡಲಾಗುತ್ತದೆ’ ಎಂದು ಸಂಜಯ್ ಸಿಂಗ್ ಹೇಳಿದರು. ಬೆಂಗಳೂರಿನಲ್ಲಿ ಗುರುವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರು ಹಾಗೂ ರಾಜಕೀಯ ಸಮಿತಿ ಸದಸ್ಯರಾದ ಸಂಜಯ್ ಸಿಂಗ್ ಪತ್ರಿಕಾಗೋಷ್ಠಿ ನಡೆಸಿದರು. ‘ಆಮ್ ಆದ್ಮಿ ಪಕ್ಷ ದೇಶದಲ್ಲಿ ಹೆಚ್ಚಿನ ಜನಬೆಂಬಲ ಸಿಗುತ್ತಿದೆ’ ಎಂದರು. ‘ಕಳೆದ ಐದು ವರ್ಷಗಳಲ್ಲಿ ದೆಹಲಿಯಲ್ಲಿ ನಾವು ಎರಡು ಬಾರಿ ಸರ್ಕಾರ ಮಾಡಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಸ್ಥಾನಗಳನ್ನು […]

ಮಂಗಳೂರಿನಲ್ಲಿ 2ನೇ ಸುತ್ತಿನ ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ

Tuesday, November 7th, 2017
mane manege congress

ಮಂಗಳೂರು:ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ  ಚಟುವಟಿಕೆ ಬಿರುಸುಗೊಳಿಸಿವೆ. ಇನ್ನೊಂದೆಡೆ ಜೆಡಿಎಸ್ ಕರ್ನಾಟಕ ವಿಕಾಸ ವಾಹಿನಿ ಯಾತ್ರೆ ಆರಂಭಿಸಲಿದೆ. ಬಿಜೆಪಿ ಒಂದೆಡೆ ಪರಿವರ್ತನಾ ಯಾತ್ರೆ ಆರಂಭಿಸಿದರೆ. ಕಾಂಗ್ರೆಸ್ ಈಗಾಗಲೇ ರಾಜ್ಯದೆಲ್ಲೆಡೆ ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನಕ್ಕೆ ಚಾಲನೆ ನೀಡಿ ಚುನಾವಣಾ ಸಿದ್ದತೆ ಆರಂಭಿಸಿದೆ. ಮನೆ ಮನೆ ಕಾಂಗ್ರೆಸ್ ಅಭಿಯಾನದ ಅಂಗವಾಗಿ ಮಂಗಳೂರಿನಲ್ಲಿ 2ನೇ ಸುತ್ತಿನ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ. ನಗರದ ಆಕಾಶ ಭವನ ಪ್ರದೇಶದಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ರಾಜ್ಯ ಉಸ್ತುವಾರಿ […]

ಪ್ರಮೋದ್‌ ಮುತಾಲಿಕ್‌ ಶಿವಸೇನೆಯಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ

Thursday, November 2nd, 2017
pramod muthalik

ಮಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ, ರಾಜ್ಯದ ಗಡಿ ವಿಚಾರದಲ್ಲಿ ಪದೇಪದೇ ತಗಾದೆ ತೆಗೆದು ಮಹಾರಾಷ್ಟ್ರ ಪರ ದನಿ ಎತ್ತುವ ಶಿವಸೇನೆ ಪಕ್ಷದ ಟಿಕೆಟ್‌ನಿಂದಲೇ ಸ್ಪರ್ಧಿಸಲು ಇದೀಗ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಮುಂದಾಗಿದ್ದಾರೆ! ಈ ವಿಚಾರವನ್ನು ಖುದ್ದು ಮುತಾಲಿಕ್‌ ಅವರೇ ತಿಳಿಸಿದ್ದಾರೆ. ಮಂಗಳೂರಿಗೆ ಸೋಮವಾರ ಭೇಟಿ ನೀಡಿದ್ದ ವೇಳೆ ಉದಯವಾಣಿಯೊಂದಿಗೆ ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲಿ ತಮ್ಮ ಸಂಘಟನೆ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ಹೇಳಿದ್ದಿಷ್ಟು: “ಶಿವಸೇನೆಯನ್ನು ಕರ್ನಾಟಕದಲ್ಲಿ ಕಟ್ಟುವ ನೆಲೆಯಲ್ಲಿ ಹಾಗೂ […]