ಅಕ್ರಮ ಜಾನುವಾರು ಸಾಗಾಟ: ಮೂವರು ಆರೋಪಿಗಳ ಬಂಧನ

Thursday, November 15th, 2018
trnsfer

ಮಂಗಳೂರು: ಕೇರಳದ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೆರ್ನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಪೊಲೀಸರು ಬಂಧಿಸಿ, 6 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡಿನ ಬದಿಯಡ್ಕ ಗ್ರಾಮದ ಕಂಗನ್ನಾರಿನ ವಿನಯ್ ಕುಮಾರ್(38), ಕಣ್ಣೂರು ಜಿಲ್ಲೆಯ ತಲ್ಲೇರಿವೆಲ್ ತಾಲೂಕಿನ ಪುನೂರಿನ ಸುನಿಲ್ ಕುಮಾರ್(45), ಕಾಸರಗೋಡು ತಾಲೂಕಿನ ನೆಕ್ಕರಾಜೆ ಗ್ರಾಮದ ಚೆಂಗಳದ ಸುರೇಶ್ ಸಿ.ಎಚ್.(38) ಬಂಧಿತ ಆರೋಪಿಗಳು. ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಪೆರ್ನೆ ಕಡೆಯಿಂದ ವಿಟ್ಲದ ಕಡೆಗೆ 407 ಗೂಡ್ಸ್ ಟೆಂಪೊದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ […]

ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವಷ್ಟು ಸಲುಗೆ ಸಿದ್ದರಾಮಯ್ಯ ಜೊತೆಗಿಲ್ಲ: ಹಾಲಾಡಿ ಶ್ರೀನಿವಾಸ ಶೆಟ್ಟಿ

Saturday, October 27th, 2018
srinivas-shetty

ಕುಂದಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬೈಂದೂರಿನ ನಾಗೂರಿನಲ್ಲಿ ನಡೆದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಖವನ್ನೇ ನೋಡಿಲ್ಲ ಎಂದು ಏಕವಚನದಲ್ಲಿ ಮಾತನಾಡಿದ್ದಕ್ಕೆ ಶುಕ್ರವಾರ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಮುಖ್ಯಮಂತ್ರಿಯಾಗಿದ್ದುಕೊಂಡು ಒರ್ವ ಶಾಸಕನ ಬಗ್ಗೆ ಏಕವಚನದಲ್ಲಿ ಮಾತನಾಡುವಷ್ಟು ಸಲುಗೆ ನಮಗೆ ಅವರೊಂದಿಗಿಲ್ಲ. ಸಲುಗೆ ಇದ್ದವರ ಜೊತೆ ಬೇಕಾದರೆ ಅವರು ಮಾತನಾಡಲಿ ನಮ್ಮ ಅಭ್ಯಂತರವೇನು ಇಲ್ಲ. ಅವರು ಯಾವ ಉದ್ದೇಶದಿಂದ ಹಾಗೆ ಮಾತನಾಡಿದರು ಎಂಬುದು ನನಗೆ ತಿಳಿದಿಲ್ಲ. ಅವರೇ […]

ಬಲೇ ಪುದರ್ ದೀಕ ಈ ಪ್ರೀತಿಗ್ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

Friday, February 16th, 2018
tulu-film

ಮಂಗಳೂರು : ಜೆ.ವಿ ಪ್ರೊಡಕ್ಷನ್ ಲಾಂಛನದಲ್ಲಿ ವಿ. ಹೃದಯ್ ಅರ್ಪಿಸುವ ಜೆ.ವಿ ಮನೋರಂಜನ್ ನಿರ್ದೇಶನದಲ್ಲಿ ವಿನಯ್ ಕುಮಾರ್ ಜೆವಿ ಮತ್ತು ಸುದರ್ಶನ್ ಜೆ.ವಿ ನಿರ್ಮಾಣದಲ್ಲಿ ತಯಾರಾದ ತುಳುವಿನ 87ನೇ ಸಿನಿಮಾ ಬಲೇ ಪುದರ್ ದೀಕ ಈ ಪ್ರೀತಿಗ್ ಮಂಗಳೂರಿನ ಜ್ಯೋತಿ ಚಿತ್ರ ಮಂದಿರದಲ್ಲಿ ತೆರೆ ಕಂಡಿದೆ. ಎಸ್‌ಡಿಎಂ ಕಾಲೇಜ್‌ನ ಪ್ರಿನ್ಸಿಪಾಲ್ ದೇವದಾಸ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತುಳುವಿನಲ್ಲಿ ಪ್ರೇಕ್ಷಕರು ಬಯಸುವ ಹಾಸ್ಯ ಸಿನಿಮಾಗಳ ಜತೆಗೆ ಸಮಾಜಕ್ಕೆ ಸಂದೇಶ ನೀಡುವಂತಹ ಸದಭಿರುಚಿಯ ಸಿನಿಮಾಗಳು ಬರಲಿ ಎಂದು […]

ಉಡುಪಿ ಪೇಜಾವರ ಹಿರಿಯ ಶ್ರೀಗಳಿಗೆ ‘ಯತಿಕುಲ ಚಕ್ರವರ್ತಿ’ ಬಿರುದು

Thursday, January 18th, 2018
pejavara

ಉಡುಪಿ: ವಾದಿರಾಜ ಗುರುಗಳ ನಂತರ, ಐದು ಪರ್ಯಾಯವನ್ನು ಯಶಸ್ವಿಯಾಗಿ ಮುಗಿಸಿದ ಉಡುಪಿ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಗಳಿಗೆ ‘ ಯತಿಕುಲ ಚಕ್ರವರ್ತಿ’ ಬಿರುದು ಪ್ರಧಾನ ಮಾಡಿ ಗೌರವಿಸಲಾಗಿದೆ. ಪರ್ಯಾಯಕ್ಕೆ ಮುನ್ನಾದಿನವಾದ ಬುಧವಾರ (ಜ 17) ರಥಬೀದಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು ಪೇಜಾವರ ಶ್ರೀಗಳಿಗೆ ಬಿರುದನ್ನು ಪ್ರಧಾನ ಮಾಡಿದರು. 2ನೇ ಬಾರಿ ಸರ್ವಜ್ಞ ಪೀಠವನ್ನೇರಿದ ಪಲಿಮಾರು ಶ್ರೀಗಳು ಬಿರುದು ಸ್ವೀಕರಿಸಿ ಆಶೀರ್ವಚನ ನೀಡುತ್ತಾ ಪೇಜಾವರ ಶ್ರೀಗಳು, ಕೃಷ್ಣನನ್ನು ಐದು […]