ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿಸಲು ವಿಹೆಚ್ ಪಿ ಮನವಿ

Friday, September 3rd, 2021
cow

ಮಂಗಳೂರು  : ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಅವುಗಳ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕನ್ನಾಗಿ ಮಾಡಿ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ಸೂಚನೆಗೆ ಸ್ವಾಗತಿಸುತ್ತೇವೆ ಎಂದು  ವಿಶ್ವ ಹಿಂದು ಪರಿಷತ್ ಹೇಳಿದೆ. ಗೋಹತ್ಯೆ ಆರೋಪದಲ್ಲಿ ಜಾವೇದ್ ಎಂಬಾತನಿಗೆ ಜಾಮೀನು ನಿರಾಕರಿಸುವ ವೇಳೆ ಅಲಹಾಬಾದ್ ಹೈಕೋರ್ಟ್ ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಅವುಗಳ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕನ್ನಾಗಿ ಮಾಡಿ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದೆ ಅಲ್ಲದೆ ದೇಶದ ಸಂಸ್ಕೃತಿ ಮತ್ತು ನಂಬಿಕೆಗೆ ಧಕ್ಕೆಯಾದಾಗ ಇಡೀ ದೇಶ ದುರ್ಭಲವಾಗುತ್ತದೆ. […]

ಅಕ್ರಮವಾಗಿ ದನ ಕರುಗಳನ್ನು ವಧೆಗೆ ಸಾಗಿಸುತ್ತಿದ್ದಾಗ ರಸ್ತೆಗೆ ಬಿದ್ದ ಆರು ಕರುಗಳು, ಬೆನ್ನಟ್ಟಿದ ವಿಹೆಚ್ ಪಿ ಕಾರ್ಯಕರ್ತರು

Sunday, October 4th, 2020
vhp-protest

  ಮಂಗಳೂರು: ಅಕ್ರಮವಾಗಿ 30-35 ದನದ ಕರುಗಳನ್ನು 407 ವಾಹನವೊಂದರಲ್ಲಿ ಕುದ್ರೋಳಿಯ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಆರು ಕರುಗಳು ವಾಹನದಿಂದ ಬಿದ್ದು  ಗಂಭೀರ ಗಾಯಗೊಂಡ ಘಟನೆಯನ್ನು ಖಂಡಿಸಿ ನಗರದ ಮಣ್ಣಗುಡ್ಡ ಗುರ್ಜಿ ಬಳಿ ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನೇತ್ರಾವತಿ ಎಂಬ ಹೆಸರಿನ 407 ವಾಹನವೊಂದರಲ್ಲಿ ನಸುಕಿನ ಜಾವದಲ್ಲಿ 30-35 ದನದ ಕರುಗಳನ್ನು ಅಮಾನವೀಯವಾಗಿ ತುಂಬಿಸಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಕೆಎಸ್ಆರ್ ಟಿಸಿ ಬಳಿ ಹಂಪ್ಸ್ ನಲ್ಲಿ ವಾಹನದಿಂದ 2 ದನದ ಕರುಗಳು ಬಿದ್ದಿವೆ. […]