ಫೆಬ್ರುವರಿ 24ರಂದು ರಾಜ್ಯದ ಮುಂಗಡ ಪತ್ರ ಮಂಡನೆ

Thursday, February 3rd, 2011
VS Acharya

ಬೆಂಗಳೂರು : ಇಂದು ನಡೆದ  ಸಚಿವ ಸಂಪುಟದ ಸಭೆಯಲ್ಲಿ ಪ್ರಸಕ್ತ ಸಾಲಿನ ಮುಂಗಡ ಪತ್ರ ಮಂಡನೆಯ ಬಗ್ಗೆ ಚರ್ಚೆ ನಡೆದಿದ್ದು, ಅದರಂತೆ ಫೆಬ್ರುವರಿ 24ರ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಲಿದ್ದಾರೆ ಎಂದು ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ,  15 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಯಲಿದೆ.  ಲೋಕಾಯುಕ್ತ ಸಿಬ್ಬಂದಿ ವೇತನ ಶೇ.10ರಷ್ಟು ಏರಿಕೆ, ರಾಜ್ಯದಲ್ಲಿರುವ ಸುಮಾರು 1.5 ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ನಿರ್ಧರಿಸಲಾಗಿದೆ ಎಂದರು. ಗಡಿನಾಡ ಅಭಿವೃದ್ಧಿಗೆ […]

ಉಳ್ಳಾಲದ ರಾಣಿ ಅಬ್ಬಕ ಉತ್ಸವಕ್ಕೆ ಅದ್ದೂರಿ ಚಾಲನೆ

Saturday, January 29th, 2011
ವೀರ ರಾಣಿ ಅಬ್ಬಕ ಉತ್ಸವ

ಕೋಣಾಜೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವೀರ ರಾಣಿ ಅಬ್ಬಕ ಉತ್ಸವ ಸಮಿತಿ ವತಿಯಿಂದ ಮಂಗಳೂರು ಹೊರವಲಯ ಅಸೈಗೋಳಿಯ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಮೇಯರ್ ರಜನಿ ದುಗ್ಗಣ್ಣ ದೀಪ ಬೆಳಗಿಸುವುದರ ಮೂಲಕ ವೀರ ರಾಣಿ ಅಬ್ಬಕ್ಕ ಉತ್ಸವ 2011ಕ್ಕೆ ಚಾಲನೆ ನೀಡಿದರು. ಜನಪದ ದಿಬ್ಬಣದ ವಿಶೇಷ ಆಕರ್ಷಣೆಗಳಾದ ಪೂರ್ಣಕೊಂಭ, ಮಂಗಳವಾದ್ಯ, ಕೀಲುಕುದುರೆ, ಯಕ್ಷಗಾನ ಗೊಂಬೆ, ಕರಗನೃತ್ಯ, ಬ್ಯಾರಿ ಸಂಪ್ರದಾಯದ ದಫ್, ತಾಲೀಮು ಆಟ, ಕಳಂಜಿ, ಕಂಗೀಲು, ಬಣ್ಣದ ಕೊಡೆಗಳು, ಬ್ಯಾಂಡ್, ಚೆಂಡೆ ವಾದನ, ದೋಣಿಯೇರಿದ […]