ಕೊರೋನ ಪ್ರಕರಣ ಜುಲೈ 22 : ದಕ್ಷಿಣ ಕನ್ನಡ ಜಿಲ್ಲೆ162, ಉಡುಪಿ ಜಿಲ್ಲೆ281, ಕಾಸರಗೋಡು ಜಿಲ್ಲೆ101

Wednesday, July 22nd, 2020
Corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 162 ಹೊಸ ಕೊರೋನ ಪ್ರಕರಣಗಳು ಪತ್ತೆಯಾಗಿದ್ದು ಜಿಲ್ಲೆಯ ಒಟ್ಟು ಕೊರೋನ ಸೋಂಕು ಪೀಡಿತರ ಸಂಖ್ಯೆ 3,996ಕ್ಕೆ ಏರಿದೆ. ಕೋವಿಡ್‌ಗೆ ಮತ್ತೆ ಐವರು ಬಲಿಯಾಗಿದ್ದು, ಸಾವಿನ ಸಂಖ್ಯೆ 92ಕ್ಕೆ ಏರಿದೆ. ಜಿಲ್ಲೆಯಲ್ಲಿ ಬುಧವಾರ  ಪತ್ತೆಯಾದ ಪ್ರಕರಣಗಳಲ್ಲಿ ಶೀತ ಲಕ್ಷಣ ಹೊಂದಿರುವವರ ಸಂಖ್ಯೆಯೇ ಅಧಿಕ ಮಟ್ಟದಲ್ಲಿದೆ. ಶೀತ-70, ಸೋಂಕಿನ ಮೂಲ ಪತ್ತೆಯಾಗದ 60, ತೀವ್ರ ಉಸಿರಾಟ-18, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 13, ವಿದೇಶದಿಂದ ಆಗಮಿಸಿದ್ದ ಓರ್ವನಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಎಲ್ಲರನ್ನೂ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ […]

ಆಯುಷ್ಮಾನ್ ಭಾರತ ಯೋಜನೆ ಅಡಿ 9 ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರ ನೇಮಕ ನಕಲಿ -ವಿಡಿಯೋ

Tuesday, July 21st, 2020
ivan-d-souza

ಮಂಗಳೂರು  :  ಆಯುಷ್ಮಾನ್ ಭಾರತ ಯೋಜನೆ ಅಡಿ 9 ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರ ನೇಮಕ ನಕಲಿ.  ಅಸಲಿ ಆರೋಗ್ಯ ಮಿತ್ರರ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನೀಡಿ ಇಲ್ಲವೇ ಆಡಳಿತ ಬಿಟ್ಟು ತೊಲಗಿ ಎಂದು  ಜಿಲ್ಲಾಡಳಿತಕ್ಕೆ ಮತ್ತು  ಜನಪ್ರತಿನಿಧಿಗಳಿಗೆ ಐವನ್ ಡಿಸೋಜಾ ಸವಾಲು ಹಾಕಿದ್ದಾರೆ. ಇಂದು ಪತ್ರಿಕೆಗಳಲ್ಲಿ ಪ್ರಕಟಣೆಗೊಂಡ ಆರೋಗ್ಯ ಮಿತ್ರ ನೇಮಕ ಮತ್ತು ಅವರ ನೀಡಿದ ಮೊಬೈಲ್ ಸಂಖ್ಯೆಗೆ ಸಂಬಂಧವೇ ಇಲ್ಲ ಒಬ್ಬರು ಇನ್ಸೂರೆನ್ಸ್ ಏಜೆಂಟ್ ಇನ್ನೊಂದು ನಂಬರ್ ಆಸ್ಪತ್ರೆಯ ಕಾರ್ಮಿಕ, ಕೆಲವು ನಂಬರ್ ಗಳು ಹಿಂದಿ […]

ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆಗಾಗಿ ಅಮೆರಿಕಾದಿಂದ ಭಾರತಕ್ಕೆ 100 ವೆಂಟಿಲೇಟರ್

Wednesday, June 3rd, 2020
modi-trump

ವಾಷಿಂಗ್ಟನ್ :  ಮುಂದಿನ ವಾರ ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆಗಾಗಿ ಅಮೆರಿಕಾದಿಂದ ಭಾರತಕ್ಕೆ ಮೊದಲ ಹಂತದಲ್ಲಿ 100 ವೆಂಟಿಲೇಟರ್ ಗಳನ್ನು ರವಾನಿಸಲಾಗುವುದು, ಕಾನ್ಫೆರೆನ್ಸ್ ಕಾಲ್ ನಲ್ಲಿ ಡೊನಾಲ್ಡ್ ಟ್ರಂಪ್ ಮೋದಿಗೆ ಈ ವಿಷಯವನ್ನು ತಿಳಿಸಿದ್ದಾರೆ ಎಂದು ಶ್ವೇತ ಭವನ ಹೇಳಿದೆ. ಮಂಗಳವಾರ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಜಿ-7 ಶೃಂಗಸಭೆ, ಕೋವಿಡ್-19 ನಿರ್ವಹಣೆ, ಪ್ರಾದೇಶಿಕ ಭದ್ರತೆ ವಿಚಾರಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ವಾರ ಭಾರತಕ್ಕೆ ಮೊದಲ ಹಂತದಲ್ಲಿ […]

ಯುವಕರಿಗಾಗಿ ವೆಂಟಿಲೇಟರ್ ಬಿಟ್ಟುಕೊಟ್ಟು ಪ್ರಾಣ ಬಿಟ್ಟ 90 ವರ್ಷದ ಅಜ್ಜಿ

Sunday, April 5th, 2020
corona90

ಬೆಲ್ಜಿಯಂ : ಕೊರೋನಾ ವೈರಸ್  ಬಳಲುತ್ತಿದ್ದ ವೃದ್ಧೆಯೊಬ್ಬರು ಕೊರೋನಾದಿಂದ ಬಳಲುತ್ತಿದ್ದ ಯುವಕರಿಗಾಗಿ ವೆಂಟಿಲೇಟರ್ ಬಿಟ್ಟುಕೊಂಡು ಪ್ರಾಣ ಬಿಟ್ಟು ಅಪೂರ್ವ ತ್ಯಾಗ ಮೆರೆದಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ. ಐಸೋಲೇಷನ್ ವಾರ್ಡ್ ನಲ್ಲಿ 90 ವರ್ಷದ ವೃದ್ಧೆಯೊಬ್ಬರು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆಕೆಗೆ ವೆಂಟಿಲೇಟರ್ ಅಳವಡಿಸಲು ಮುಂದಾಗಿದ್ದಾರೆ. ಇದನ್ನು ಕಂಡ ವೃದ್ದೆ ನನಗೆ ವೆಂಟಿಲೇಟರ್ ಬಳಸುವುದು ಬೇಡ. ನಾನು ಈಗಾಗಲೇ ಅತ್ಯುತ್ತಮ ಜೀವನ ಅನುಭವಿಸಿದ್ದೇನೆ. ದೇಶದ ಯುವ ಕೊರೋನಾ ಪೀಡಿತರಿಗೆ ವೆಂಟಿಲೇಟರ್ ಬಳಸಿ ಎಂದು ಹೇಳಿದ್ದಾರೆ. ನನಗೆ […]

ಶೀರೂರು ಲಕ್ಷ್ಮೀವರ ತೀರ್ಥ ಶ್ರೀ ದೈವಾಧೀನ

Thursday, July 19th, 2018
Shiroor-Swami

ಉಡುಪಿ : ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು(55) ಗುರುವಾರ ಇಹಲೋಕ ತ್ಯಜಿಸಿದರು. ಬುಧವಾರ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಾಮೀಜಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವಿಪರೀತ ವಾಂತಿ ಮಾಡಿದ ಹಿನ್ನೆಲೆಯಲ್ಲಿ  ಬುಧವಾರ ಬೆಳಗ್ಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳ ಆರೋಗ್ಯ ತೀರಾ ಹದಗೆಟ್ಟಿತ್ತು. ಚಿಕಿತ್ಸೆಗೆ ಅವರ ದೇಹ ಸ್ಪಂದಿಸುತ್ತಿರಲಿಲ್ಲ. ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು ಎಂದು ತಿಳಿದುಬಂದಿದೆ. ಕಳೆದ ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ […]

ಅಂಬಿಗೆ ಇನ್ನೂ 2 ದಿನ ವೆಂಟಿಲೇಟರ್‌ನಲ್ಲೇ ಚಿಕಿತ್ಸೆ

Monday, February 24th, 2014
Ambarish

ಬೆಂಗಳೂರು: ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಅವರ ಅಭಿಮಾನಿಗಳು ರಾಜ್ಯಾದ್ಯಂತ ವಿಶೇಷ ಪೂಜೆ ಹಾಗೂ ಮೋಮ ನಡೆಸುತ್ತಿದ್ದಾರೆ. ನಗರದ ವಿಕ್ರಂ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಅಂಬಿಗೆ ಚಿಕಿತ್ಸೆ ಮುಂದುವರೆದಿದ್ದು, ಆಸ್ಪತ್ರೆಯ ಮುಂದೆ ಅವರ ಅಭಿಮಾನಿಗಳು ಇಂದು ಬೆಳಗ್ಗೆಯಿಂದ ಮೃತ್ಯುಂಜಯ ಹಾಗೂ ಧನ್ವಂತರಿ, ಮಹಾಗಣಪತಿ ಮತ್ತು ನವಗ್ರಹ ಹೋಮ ನಡೆಸುತ್ತಿದ್ದಾರೆ. ಅಂಬಿಗೆ ಇನ್ನೂ 2 ದಿನ ವೆಂಟಿಲೇಟರ್‌ನಲ್ಲೇ ಚಿಕಿತ್ಸೆ, ಅಂಬರೀಷ್ ಅವರಿಗೆ ಇನ್ನು […]