ದುಬಾಯಿಯಿಂದ ಮಂಗಳೂರಿಗೆ ಬರುವ ಪ್ರಯಾಣಿಕರನ್ನು ಭೇಟಿ ಮಾಡಲು ಸಾರ್ವಜನಿಕರಿಗೆ ಅವಕಾಶವಿಲ್ಲ

Monday, May 11th, 2020
Airport

ಮಂಗಳೂರು  : ಮೇ 12 ರಂದು (ಮಂಗಳವಾರ) ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ದುಬಾಯಿಯಿಂದ ಭಾರತೀಯರನ್ನು ಕರೆದುಕೊಂಡು ವಿಮಾನ ಬರಲಿದೆ. ಇದರಲ್ಲಿ ಬರುವ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆ ನಡೆಸಿ, ನಂತರ ಆಸ್ಪತ್ರೆ ಅಥವಾ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಜಿಲ್ಲಾಡಳಿತವೇ ವಾಹನದ ಮೂಲಕ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಥವಾ ಪ್ರಯಾಣಿಕರ ಕುಟುಂಬಸ್ಥರಿಗೆ ವಿಮಾನ ನಿಲ್ದಾಣಕ್ಕೆ ಬರಲು ಅವಕಾಶ ಇಲ್ಲ. ಅಲ್ಲದೇ, ಕ್ವಾರೆಂಟೈನ್ ಕೇಂದ್ರಗಳಿಗೂ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಿದೇಶಿ ಪ್ರವಾಸಿ ಹಡಗಿಗೆ ನವಮಂಗಳೂರು ಬಂದರು ಪ್ರವೇಶಿಸಲು ಅನುಮತಿ ನಿರಾಕರಣೆ

Saturday, March 7th, 2020
New-Mangalore-Port

ಮಂಗಳೂರು : ವಿದೇಶಿ ಪ್ರವಾಸಿ ಹಡಗಿಗೆ ನವಮಂಗಳೂರು ಬಂದರು ಪ್ರವೇಶಿಸಲು ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಲಾಗಿದೆ. ಪ್ರವಾಸಿಗರನ್ನು ಹೊತ್ತ ಹಡಗು ಶನಿವಾರ ಮುಂಜಾನೆ 6 ಗಂಟೆಗೆ ಬಂದರು ಪ್ರವೇಶಿಸಬೇಕಿತ್ತು. ಆದರೆ ಹಡಗು ಕೊರೋನಾ ಪೀಡಿತ ದೇಶಗಳ ಪ್ರದೇಶಗಳಿಗೆ ಭೇಟಿ ನೀಡಿ ಬರುತ್ತಿರುವುದರಿಂದ ಸರಕಾರ ಅನುಮತಿ ನಿರಾಕರಿಸಿದೆ. ಹಡಗಿನಲ್ಲಿರುವ ಪ್ರವಾಸಿಗರಲ್ಲಿ ಕೊರೊನಾ ಸೋಂಕು ಬಾಧಿತರು ಯಾರು ಇಲ್ಲ ಎಂದು ತಪಾಸಣೆಯಿಂದ ದೃಢಪಟ್ಟಿದೆ ಎಂದು ಹಡಗಿನ ನಿರ್ವಹಣೆ ತಂಡ ಸಮಜಾಯಿಷಿ ನೀಡಿದ್ದರೂ ಕೂಡಾ ಸರ್ಕಾರ ಅನುಮತಿ ನೀಡಿಲ್ಲ. ಹಡಗಿನಲ್ಲಿ ಆಗಮಿಸಲಿದ್ದ […]

ಚಿನ್ಮಯಾನಂದ ಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ : ವಿದ್ಯಾರ್ಥಿನಿಯ ಬಂಧನ

Wednesday, September 25th, 2019
shahajahan-pura

ಶಹಜಹಾನ್ ಪುರ್ : ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದ ಕಾನೂನು ವಿದ್ಯಾರ್ಥಿನಿಯನ್ನು ಸುಲಿಗೆ ಆರೋಪದಡಿ ಎಸ್ ಐಟಿ ಬುಧವಾರ ಬಂಧಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆ 23ವರ್ಷದ ಕಾನೂನು ವಿದ್ಯಾರ್ಥಿನಿಯನ್ನು ಉತ್ತರಪ್ರದೇಶದ ಮನೆಯಲ್ಲಿ ಆಕೆಯನ್ನು ವಿಶೇಷ ತನಿಖಾ ತಂಡ ಬಂಧಿಸಿದ್ದು, ವಿದ್ಯಾರ್ಥಿನಿಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದೆ ಎಂದು ವರದಿ ವಿವರಿಸಿದೆ. ಸ್ವಾಮಿ ಚಿನ್ಮಯಾನಂದ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ಕಾನೂನು ವಿದ್ಯಾರ್ಥಿನಿ ದೂರು ಆಧರಿಸಿ ಸ್ವಾಮಿ ಅವರನ್ನು […]