ಹಿಜಾಬ್ ವಿವಾದದ ನಂತರ, ಮುಸ್ಲಿಂ ವಿದ್ಯಾರ್ಥಿಗಳು ತರಗತಿಯೊಳಗೆ ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್

Saturday, February 12th, 2022
nawaz

ಮಂಗಳೂರು: ಹಿಜಾಬ್ ವಿವಾದದ ನಂತರ ಕಡಬ ತಾಲೂಕಿನ ಅಂಕತ್ತಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ತರಗತಿಯೊಳಗೆ ನಮಾಜ್ ಮಾಡುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 5 ಮತ್ತು 7 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಫೆಬ್ರುವರಿ 4 ರಂದು ತರಗತಿಯೊಳಗೆ ನಮಾಜ್ ಮಾಡಿದ್ದರು. ಆ ವಿಡಿಯೋ ಕ್ಲಿಪ್ ವೈರಲ್ ಆದ ನಂತರ ಸ್ಥಳೀಯ ನಿವಾಸಿಗಳು ಅದನ್ನು ವಿರೋಧಿಸಿದರು. ಮಾಹಿತಿ ತಿಳಿದ ತಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗಳು ಶುಕ್ರವಾರ ಶಾಲೆಗೆ ಭೇಟಿ […]

ಸವಾರನೇ ಇಲ್ಲದೇ ಮಧ್ಯರಾತ್ರಿ ಸುತ್ತು ಹಾಕಿದ ಬೈಕ್, ಭೂತ, ಪಿಶಾಚಿಯ ಕಾಟ ಎಂದು ವೈರಲ್

Thursday, January 28th, 2021
Bike Move

ಬಂಟ್ವಾಳ: ಮಧ್ಯರಾತ್ರಿ 1 ಗಂಟೆ ವೇಳೆ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಬೈಕ್ವೊಂದು ಸವಾರನೇ ಇಲ್ಲದೇ ಮಧ್ಯರಾತ್ರಿ ತನ್ನಷ್ಟಕ್ಕೆ ತಾನೇ ಚಲಿಸುತ್ತದೆ. ಬಂಟ್ವಾಳ ಸಮೀಪ ಪಾಣೆಮಂಗಳೂರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದು ಅದೇ ಪ್ರದೇಶದ್ದೇ ಬೈಕಾ ಎಂಬುದು ಇನ್ನೂ ಖಚಿತವಾಗಿಲ್ಲ. ಕಳೆದ ವರ್ಷ ಡಿಸೆಂಬರ್ 30ರಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವಿವರಗಳಿವೆ. ಊರಿನ ಹೆಸರು ಬದಲಾಯಿಸಿಕೊಂಡು ಈ ವಿಡಿಯೋ ಹರಿದಾಡುತ್ತಿದ್ದರೂ, ಇದರಲ್ಲಿ ಕಂಡುಬರುವ ದೃಶ್ಯ ಆಶ್ಚರ್ಯ ಹುಟ್ಟಿಸುತ್ತದೆ. ಈ ವಿಡಿಯೋ ಈಗ ಕಳೆದೆರಡು […]

ಉಡುಪಿ : ಹುಂಜದ ಜೊತೆ ನವಿಲಿನ ಫೈಟ್ ಸಖತ್ ವೈರಲ್

Thursday, July 23rd, 2020
peacock

ಉಡುಪಿ : ಕುಂದಾಪುರದಲ್ಲಿ ವ್ಯಕ್ತಿಯೊಬ್ಬರ‌ ಮನೆ‌ ಮುಂದೆ ನವಿಲು-ಕೋಳಿ ಕಾಳಗ ನಡೆದಿದ್ದು, ಸ್ಥಳೀಯರು ಆಶ್ಚರ್ಯಚಕಿತರಾಗಿ ಈ ದೃಶ್ಯವನ್ನುಸೆರೆ ಹಿಡಿದಿದ್ದಾರೆ.  ಟಗರು, ಬುಲ್, ಕೋಳಿ ಕಾಳಗ ಸಾಮಾನ್ಯ. ಆದರೆ ನವಿಲು ಹುಂಜದ ಜೊತೆ ಕಾಳಗ ಮಾಡಿರುವುದು ಅಲ್ಲಿದ್ದವರಿಗೆ ಆಶ್ಚರ್ಯ ಮೂಡಿಸಿದೆ. ಇನ್ನು ವಯ್ಯಾರಕ್ಕೆ ಹೆಸರಾದ ನವಿಲಿನ ಫೈಟ್ ಹುಂಜದ ಜತೆ ಈಗ ವೈರಲ್ ಆಗಿದೆ. ಹೆಣ್ಣುಕೋಳಿ ಸುತ್ತ ಗಿರಕಿ ಹೊಡೆಯುತ್ತಿದ್ದ ಹುಂಜಕ್ಕೂ ಬೋರ್ ಆಗಿರಬೇಕು. ಮತ್ತೊಂದು ಹುಂಜದ ಜೊತೆಗೆ ಫೈಟ್ ಮಾಡೋದನ್ನ ಬಿಟ್ಟು ನವಿಲಿನ ವಿರುದ್ಧ ಕಾದಟಕ್ಕಿಳಿದಿತ್ತು. ಮಳೆ ಬಂದ್ರೆ […]

ಉದ್ದೇಶ ಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ : ಡಿ.ಕೆ. ಶಿವಕುಮಾರ್​ ಸ್ಪಷ್ಟನೆ

Monday, October 28th, 2019
DKShi

ಬೆಂಗಳೂರು : ತಾವು ಉದ್ದೇಶಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯಕ್ಕೆ ವಾಪಸ್ ಬಂದ ದಿನ ಕನ್ನಡ ಬಾವುಟ ಸೇರಿದಂತೆ ಹಲವಾರು ಬಾವುಟಗಳನ್ನು ಕೊಟ್ಟಿದ್ದರು. ಅದನ್ನ ನಾನು ಹಿಡಿದುಕೊಂಡಿದ್ದೆ. ಉದ್ದೇಶಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ಹಿರಿಯ ನಾಯಕರು. ನನ್ನ ಹಿತೈಷಿ, ಅವರು ಆ ರೀತಿ ಮಾತನಾಡಿಲ್ಲ ಅನಿಸುತ್ತೆ. ಮಿಸ್ಟೇಕ್ ಮಾಡಿಕೊಂಡಿರಬೇಕು. ನಾನು ಹುಟ್ಟುತ್ತಲೇ ಕಾಂಗ್ರೆಸ್ ಮನುಷ್ಯ. […]