ತೌಡುಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ 50ನೇ ಶಬರಿಮಲೆ ಯಾತ್ರೆ ಮತ್ತು ಧಾರ್ಮಿಕ ಸಭೆ

Saturday, January 13th, 2024
Thoudugoli

ಮಂಗಳೂರು : ಶ್ರೀ ದುರ್ಗಾದೇವಿ ಕ್ಷೇತ್ರ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ತೌಡುಗೋಳಿ, ವರ್ಕಾಡಿ ಇಲ್ಲಿ ಶ್ರೀ ಗೋವಿಂದ ಗುರುಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಶಬರಿಮಲೆ ಯಾತ್ರೆಯ ಸುವರ್ಣ ಸಂಭ್ರಮದ ಕಾರ್ಯಕ್ರಮ ಜನವರಿ 12, ಶುಕ್ರವಾರ ನಡೆಯಿತು. ಕ್ಷೇತ್ರದ ತಂತ್ರಿಗಳಾದ ರಾಜೇಶ್ ತಳಿತ್ತಾಯರಿಂದ ಶ್ರೀ ದುರ್ಗಾ ದೇವಿಗೆ ಶುದ್ಧಕಲಶ ಮತ್ತು ಗಣಹೋಮ ನಡೆಯಿತು, ಬಳಿಕ ಸ್ವಾಮಿಗಳ ಇರುಮುಡಿಕಟ್ಟುವ ಕಾರ್ಯಕ್ರಮ ಶ್ರೀ ಗೋವಿಂದ ಗುರುಸ್ವಾಮಿಗಳ ದಿವ್ಯ ಹಸ್ತದಲ್ಲಿ ನೆರವೇರಿತು, ಬಳಿಕ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಗಳು ನಡೆದವು. ಧಾರ್ಮಿಕ […]

ರಾಜೀನಾಮೆಯ ಬಳಿಕ ಶಬರಿಮಲೆ ಯಾತ್ರೆ ಮಾಡಿದ ಅಣ್ಣಾಮಲೈ ಮುಂದಿನ ನಿಲುವೇನು ?

Monday, June 17th, 2019
Annamalai

ಕಾಸರಗೋಡು  : ರಾಜೀನಾಮೆ ನೀಡಿದ ಬಳಿಕ  ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಕಪ್ಪು ವಸ್ತ್ರ ಧರಿಸಿ ಇರುಮುಡಿ ಕಟ್ಟಿ  ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ರಾಜೀನಾಮೆಯ ನಂತರ ಅವರ ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ, “ಕಳೆದ ವರ್ಷ ಕೈಲಾಸ ಸರೋವರಕ್ಕೆ ನಾನು ನೀಡಿದ ಭೇಟಿ ನನ್ನ ಜೀವನದ ಆದ್ಯತೆಗಳನ್ನು ಉತ್ತಮಗೊಳಿಸಲು ನೆರವಾಗುವಂತೆ ಕಣ್ಣು ತೆರೆಸಿತು. ಮಧುಕರ್ ಶೆಟ್ಟಿ ಅವರ ಸಾವು ನನ್ನದೇ ಬದುಕನ್ನು ಮರು ಪರೀಕ್ಷೆಗೆ ಒಳಪಡಿಸುವಂತೆ ಮಾಡಿತು” ಎಂದು ಮಾರ್ಮಿಕವಾಗಿ ನುಡಿದಿದ್ದರು. ಇಷ್ಟು ದಿನ ಇಲಾಖೆಯ ಕೆಲಸದೊತ್ತಡದಲ್ಲಿದ್ದ ಅಣ್ಣಾಮಲೈ ಇದೀಗ ಖಾಕಿ […]

ಮಗಳೊಂದಿಗೆ ಶಬರಿಮಲೆ ಯಾತ್ರೆಗೆ ತೆರಳಿದ್ದ ವೀರಮಂಗಲದ ನಿವಾಸಿ ಸಾವು

Friday, May 17th, 2019
Janardhana Gowda

ಪುತ್ತೂರು :  ಶಬರಿಮಲೆ ಯಾತ್ರೆಗೆ ತೆರಳಿದ್ದ ಪುತ್ತೂರಿನ ಯುವ ಉದ್ಯಮಿಯೊಬ್ಬರು ಅಯ್ಯಪ್ಪ ಸನ್ನಿಧಾನದ ಸಮೀಪ ಹೃದಯಾಘಾತದಿಂದ ಮೇ 16 ರ ಗುರುವಾರ ಮೃತಪಟ್ಟಿದ್ದಾರೆ. ಮೃತರನ್ನು ಪುತ್ತೂರು ಹೊರ ವಲಯದ ನರಿಮೊಗರು ಎಂಬಲ್ಲಿನ ವೀರಮಂಗಲದ ಗುತ್ತು ನಿವಾಸಿ ಜನಾರ್ದನ ಗೌಡ (36) ಎಂದು ಗುರುತಿಸಲಾಗಿದೆ. ವಿಪರ್ಯಾಸ ಎಂದರೆ ಮೇ 16ರಂದು ಇವರ ವಿವಾಹ ವಾರ್ಷಿಕೋತ್ಸವ ದಿನವೂ ಆಗಿತ್ತು. ಮೇ 15ರಂದು ಅವರು ತಮ್ಮ ಪುತ್ರಿ ಭಾವ ಹಾಗೂ ಮತ್ತಿಬ್ಬರ ಜತೆ ಶಬರಿಮಲೆಯತ್ತ ಪ್ರಯಾಣ ಬೆಳೆಸಿದ್ದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ […]