ಬಿಜೆಪಿ, ಕಾಂಗ್ರೆಸ್‌ಗೆ ಪರ್ಯಾಯ ರಂಗ ಸ್ಥಾಪನೆ, ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿ ಇಲ್ಲ
Wednesday, February 26th, 2014ನವದೆಹಲಿ: ಕಾಂಗ್ರೆಸ್-ಬಿಜೆಪಿಯೇತರ, ಜೆಡಿಎಸ್ ಸೇರಿದಂತೆ ಪ್ರಮುಖ ಹನ್ನೊಂದು ಪಕ್ಷಗಳನ್ನೊಳಗೊಂಡ ತೃತೀಯ ರಂಗ ಮಂಗಳವಾರ ಅಸ್ವಿತ್ವಕ್ಕೆ ಬಂದಿದೆ. ಭ್ರಷ್ಟ ಕಾಂಗ್ರೆಸ್ ಹಾಗೂ ಕೋಮುವಾದಿ ಬಿಜೆಪಿಯನ್ನು ಕೇಂದ್ರದಿಂದ ದೂರ ಇಡಲು ತೃತೀಯ ರಂಗ ರಚಿಸಿರುವುದಾಗಿ ಘೋಷಿಸಿರುವ ನಾಯಕರು, ಒಗ್ಗೂಡಿ ಚುನಾವಣೆ ಎದುರಿಸಲಿದ್ದಾರೆ. ಆದರೆ, ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡದಿರಲು ಮಂಗಳವಾರ ತ್ರಿಪುರ ಭವನದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಹುತೇಕ ಪಕ್ಷಗಳು ಬೇರೆ ಬೇರೆ ರಾಜ್ಯಗಳನ್ನು ಪ್ರತಿನಿಧಿಸುವುದರಿಂದ ಆಯಾ ಪ್ರದೇಶದಲ್ಲಿ ಸೀಟು ಹಂಚಿಕೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. […]