18 ಸಾವಿರ ಬಾಡಿಗೆ ಕೊಟ್ಟಿಲ್ಲಎಂದು ಪುಟ್ ಪಾತ್ ಮೇಲೆ ಕೊರೋನ ರೋಗಿಯ ಶವ ಬಿಟ್ಟು ಹೋದ ಆಂಬ್ಯುಲೆನ್ಸ್ ಚಾಲಕ

Friday, May 28th, 2021
ambulance

ಬೆಂಗಳೂರು:  ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಇಳಿಸಲು ಆಂಬ್ಯುಲೆನ್ಸ್ ಚಾಲಕ ಕುಟುಂಬದವರ ಬಳಿ 18 ಸಾವಿರ ರೂಪಾಯಿ ಹಣ ಕೇಳಿ, ಹಣ ಕೊಟ್ಟಿಲ್ಲ ಎಂದು ಶವವನ್ನ ಪುಟ್ ಪಾತ್ ಮೇಲೆ ಇಳಿಸಿ ಹೋದ ಘಟನೆ ಹೆಬ್ಬಾಳ ದಲ್ಲಿ ನಡೆದಿದೆ. ಚಾಲಕನನ್ನು ಶರತ್ ಗೌಡ ಎಂದು ಗುರುತಿಸಲಾಗಿದೆ. ಹೆಬ್ಬಾಳ ಚಿತಾಗಾರಕ್ಕೆ ಸೋಂಕಿತ ಮೃತ ವ್ಯಕ್ತಿಯ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿತ್ತು. ಮೃತರ ಪತ್ನಿಯ ಬಳಿ ಚಾಲಕ ಶರತ್ ಗೌಡ 18 ಸಾವಿರ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದ. ಆಗ ಮೊದಲಿಗೆ 3 ಸಾವಿರ ರೂಪಾಯಿ […]

ಕೃಷಿ ಯಂತ್ರಧಾರಾ ಯೋಜನೆಯ ಮ್ಯಾನೇಜರ್ ಶವ ನಾಗಜೆ ಕೆರೆಯಲ್ಲಿ ಪತ್ತೆ

Friday, August 28th, 2020
Rakshith

ಬೆಳ್ತಂಗಡಿ : ನಾವೂರು ಗ್ರಾಮದ ನಾಗಜೆ ಎಂಬಲ್ಲಿ ಯುವಕನ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ನಾಗಜೆ ಎಂಬಲ್ಲಿ ಆ.28 ರಂದು ನಡೆದಿದೆ. ನಾವೂರು ಗ್ರಾಮದ ನಾಗಜೆ ನಿವಾಸಿ ರಕ್ಷಿತ್ (25) ಮೃತಪಟ್ಟ ವ್ಯಕ್ತಿ. ಕಳೆದ ಒಂಭತ್ತು ದಿನಗಳ ಹಿಂದೆ ಖಾಸಗಿ ಸಂಸ್ಥೆಯೊಂದರ ಕೃಷಿಯಂತ್ರಧಾರೆಯಲ್ಲಿ ಕೃಷಿ ಯಂತ್ರಧಾರಾ ಯೋಜನೆಯ ಮ್ಯಾನೇಜರ್ ಆಗಿ ಚನ್ನರಾಯಪಟ್ಟಣದಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದರು. ಆ.22 ರಂದು ಮನೆಗೆ ಬಂದು ಆ.24 ರಂದು ಕೆಲಸಕ್ಕೆ ತೆರಳಿದ್ದರು. ಬಳಿಕ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದರಿಂದ ಅನುಮಾನ […]

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ, ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದ, ಜೊತೆಗೆ ಇನ್ನೊಬ್ಬಳನ್ನೂ ಪ್ರೀತಿಸಿದ್ದ !

Saturday, August 8th, 2020
priyanka

ಹಾಸನ : ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸಾಲಗಾಮೆ ಹೋಬಳಿ ಗೌಡಗೆರೆ ಗ್ರಾಮದ ಪ್ರಿಯಾಂಕಾ (23) ಮೃತ ಗೃಹಿಣಿ. ಆಕೆಯ ಗಂಡ ಹಾಗೂ ಅತ್ತೆ-ಮಾವ ಸೇರಿಕೊಂಡು ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿ, ನೇಣು ಬಿಗಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಪ್ರಿಯಾಂಕಾ ಆಲೂರು ತಾಲೂಕಿನ ಪುರಬೈರವನಹಳ್ಳಿ ಗ್ರಾಮದ ಕಿರಣ್ ಜೊತೆ ಕಳೆದ ಮದುವೆಯಾಗಿದ್ದಳು. ನಮ್ಮ ಮಗಳಿಗೆ ಆಕೆಯ ಗಂಡ ಹಾಗೂ ಅತ್ತೆ, ಮಾವ […]

ಕಾಣೆಯಾಗಿದ್ದ ಭಾರತದ ಮೂಲದ ಯುವತಿ ಕಾರಿನಲ್ಲಿ ಶವವಾಗಿ ಪತ್ತೆ

Saturday, January 18th, 2020
suril

ವಾಷಿಂಗ್ಟನ್ : ಕಳೆದ ತಿಂಗಳು ಕಾಣೆಯಾಗಿದ್ದ ಭಾರತದ ಮೂಲದ ಅಮೆರಿಕದಲ್ಲಿ ತನ್ನದೇ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಅಮೆರಿಕದಲ್ಲಿ ನಡೆದಿದೆ. ಸುರೀಲ್ ದಾಬಾವಾಲಾ(34) ಕಾಣೆಯಾದ ಯುವತಿ. ಚಿಕಾಗೋದ ಲೊಯೊಲಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದ ಸುರೀಲ್ 2019, ಡಿ.30ರಂದು ಕಾಣೆಯಾಗಿದ್ದಳು. ಆಕೆಗಾಗಿ ಪೋಷಕರು ಹುಡುಕಾಟ ನಡೆಸಲು ಶುರು ಮಾಡಿದ್ದರು. ಹಲವು ದಿನ ಹುಡುಕಾಟ ನಡೆಸಿದ ನಂತರ ಸುರೀಲ್‍ಳ ಮೃತದೇಹ ಬೆಡ್‍ಶೀಟ್‍ನಲ್ಲಿ ಸುತ್ತ ಸ್ಥಿತಿಯಲ್ಲಿ ಆಕೆಯ ಕಾರಿನಲ್ಲಿ ಪತ್ತೆಯಾಗಿತ್ತು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಈ […]

ನವವಿವಾಹಿತೆಯ ಶವ ಮನೆಯ ಬಾವಿಯಲ್ಲಿ ಪತ್ತೆ

Saturday, October 4th, 2014
Safida

ಕಾಸರಗೋಡು : ನವವಿವಾಹಿತೆಯ ಶವ ಕಾಸರಗೋಡು ಜಿಲ್ಲೆಯ ಅಂಬಲಟ್ಟರ ಎಂಬಲ್ಲಿ ಬಾವಿಯಲ್ಲಿ ಪತ್ತೆಯಾದ ಬಗ್ಗೆ ಶುಕ್ರವಾರ ವರದಿಯಾಗಿದೆ. ಮೃತ ವಿವಾಹಿತ ಯುವತಿಯನ್ನು ಸಫೀದಾ (19) ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಸಫೀದಾ ನಾಪತ್ತೆಯಾಗಿದ್ದರು. ಮನೆಯವರು ಸಫೀದಾಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಬಾವಿಯಲ್ಲಿ ಶವ ಪತ್ತೆಯಾಗಿದೆ. ಅಗ್ನಿ ಶಾಮುಕ ದಳದ ಸಿಬ್ಬಂದಿ ಶವವನ್ನು ಮೇಲಕ್ಕೆತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.