ಆಲಂಕಾರು ಶಾಲೆಯ ಬಳಿಯ ರಸ್ತೆಯಲ್ಲಿ ಸುತ್ತಾಡುತ್ತಿದ್ದ ಮೊಸಳೆ

Saturday, November 5th, 2022
ಆಲಂಕಾರು ಶಾಲೆಯ ಬಳಿಯ ರಸ್ತೆಯಲ್ಲಿ ಸುತ್ತಾಡುತ್ತಿದ್ದ ಮೊಸಳೆ

ಕಡಬ : ಆಲಂಕಾರು ಕೊಂಡಾಡಿ ಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ಮೊಸಳೆಯೊಂದು ಪತ್ತೆಯಾಗಿ ಜನರಲ್ಲಿ ಭೀತಿ ಮೂಡಿಸಿದೆ. ರಬ್ಬರ್‌ ಟ್ಯಾಪಿಂಗ್‌ಗೆ ಹೊರಟಿದ್ದ ಸ್ಥಳೀಯ ನಿವಾಸಿ ಶೀನಪ್ಪ ಕುಂಬಾರ ಅವರು ಮೊಸಳೆಯನ್ನು ರಸ್ತೆಯಲ್ಲಿ ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಸಿಬಂದಿಗಳಾದ ಬಾಲಚಂದ್ರ ಗೌಡ ಮತ್ತು ರವಿಕುಮಾರ್‌ ಕೂಡಲೇ ಸ್ಥಳಕ್ಕೆ ಅಗಮಿಸಿ, ಸ್ಥಳೀಯರಾದ ಶೀನಪ್ಪ ಕುಂಬಾರ, ಕಿರಣ್‌ ಕೊಂಡಾಡಿ ಮತ್ತು ಧರ್ಮಸ್ಥಳ ಶೌರ್ಯ ತಂಡದ ಕಾರ್ಯಕರ್ತರಾದ ಹರೀಶ್‌, ವಿನೋದ್‌ ಮುಂತಾದವರ […]

ಶಾಲೆಗೆ ಬಿಡುತ್ತೇನೆಂದು ಬಾಲಕಿಯನ್ನು ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ ಯುವಕ

Wednesday, June 8th, 2022
uppinangady Rape

ಉಪ್ಪಿನಂಗಡಿ: ಬಾಲಕಿಯೋರ್ವಳನ್ನು ಕಾರಿನಲ್ಲಿ ಶಾಲೆಗೆ ಬಿಡುವ ಆಮಿಷವೊಡ್ಡಿ, ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿರುವುದಾಗಿ ಆರೋಪಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಮುನಾಸೀರ್ ಎಂದು ಗುರುತಿಸಲಾಗಿದೆ. ಹದಿಮೂರು ವರ್ಷ ಹರೆಯದ ಬಾಲಕಿಯ ನೆರೆಮನೆಯವನಾದ ಯುವಕ ಮುನಾಸೀರ್ ಎಂಬಾತ ಮೇ 30 ರಂದು ಕಾರಿನಲ್ಲಿ ಶಾಲೆಗೆ ಬಿಟ್ಟು ಬರುತ್ತೇನೆಂದು ನೆಪ ಹೇಳಿ ಕಾರಿನಲ್ಲಿಯೇ ಉಪ್ಪಿನಂಗಡಿ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಮಂಗಳವಾರ ಕೂಡಾ ಬಾಲಕಿ ಮನೆಯಿಂದ ಹೊರಟು ಶಾಲೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ […]

ಧರ್ಮಸ್ಥಳದ ವತಿಯಿಂದ ಶಾಲೆಗಳಿಗೆ ಬೆಂಚು, ಡೆಸ್ಕ್ ವಿತರಣೆ

Tuesday, December 29th, 2020
Dharmasthala Bench

ಉಜಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 10,200 ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಒಂದು ಕೋಟಿ ಎಪ್ಪತ್ತೆಂಟು ಲಕ್ಷದ ಐವತ್ತು ಸಾವಿರ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಬೆಂಚು ಮತ್ತು ಡೆಸ್ಕ್ ಗಳನ್ನು ವಿತರಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ ಹೊಸಪೇಟೆ ಜಿಲ್ಲೆಗಳ 287 ಶಾಲೆಗಳಿಗೆ 255೦ ಬೆಂಚು ಮತ್ತು ಡೆಸ್ಕ್ ಗಳನ್ನು ಹಸ್ತಾಂತರಿಸಿ ಮಾತನಾಡಿದರು. ಕಳೆದ ಹತ್ತು ವರ್ಷಗಳಲ್ಲಿ 29 ಜಿಲ್ಲೆಗಳ 9213 ಶಾಲೆಗಳಿಗೆ […]

ಕುಕ್ಕೆ ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ

Monday, August 10th, 2020
anush

ಸುಬ್ರಹ್ಮಣ್ಯ: ಕಡಬ ತಾಲೂಕು ಕುಕ್ಕೆ ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅನುಷ್ ಎ.ಎಲ್. 2019-20ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದುಕೊಂಡಿದ್ದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ಕೈಬೆರಳು ರಹಸ್ಯ, ನಿಮ್ಮ ಯಾವ ಬೆರಳಿನಲ್ಲಿ ಅದೃಷ್ಟವಿದೆ ನೋಡಿ ! ಇವರು ಬಳ್ಪ ಗ್ರಾಮದ ಲೊಕೇಶ್ ಮತ್ತು ಉಷಾ ಎಣ್ಣೆಮಜಲು ದಂಪತಿಗಳ ಪುತ್ರ. ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ. 71.80 ಫಲಿತಾಂಶ ಬಂದಿದೆ. […]

ಜುಲೈ 1ರಿಂದ ಶಾಲೆಗಳನ್ನು ಆರಂಭಿಸಲು ರಾಜ್ಯದಲ್ಲಿ ಪೂರ್ವ ಸಿದ್ಧತೆ

Wednesday, June 3rd, 2020
school

ಬೆಂಗಳೂರು:   ಸರ್ಕಾರ ರಾಜ್ಯದಲ್ಲಿ ಶಾಲೆಗಳನ್ನು ಜುಲೈ 1ರಿಂದ ಆರಂಭಿಸಲು ಪೂರ್ವ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಪೂರ್ವ ಪ್ರಾಥಮಿಕ (ಪ್ರಿಕೆಜಿ, ಎಲ್’ಕೆಜಿ, ಯುಕೆಜಿ) ಹಂತವೂ ಸೇರಿದಂತೆ ಶಾಲೆಗಳ ಆರಂಭಕ್ಕೆ ಕರಡು ವೇಳಾಪಟ್ಟಿ ಕೂಡ ಪ್ರಕಟಿಸಿದ್ದು, ಈ ಪ್ರಕಾರ ಜುಲೈ.1ರಿಂದ ಜುಲೈ20ರವರೆಗೆ 3 ಹಂತಗಳಲ್ಲಿ ಮಕ್ಕಳಿಗೆ ಶಾಲೆ ಆರಂಭಿಸುವ ಚಿಂತನೆ ನಡೆಸಿದೆ. ಜುಲೈ.1ರಿಂದ 4-7 ತರಗತಿ, 1-3 ಜುಲೈ 15 ಮತ್ತು 8-10 ತರಗತಿ ಜುಲೈ 15ರಿಂದ, ಪೂರ್ವ ಪ್ರಾಥಮಿಕ ಶಾಲೆಯನ್ನು ಜುಲೈ 20ರಿಂದ ಆರಂಭಿಸಲು ನಿರ್ಧರಿಸಿದೆ. […]

ಶಾಲೆಗಳಲ್ಲಿ ವಾರಕ್ಕೆ ಒಂದು ದಿನ ಬ್ಯಾಗ್ ರಹಿತ : ಸಚಿವ ಸುರೇಶ್ ಕುಮಾರ್

Saturday, January 11th, 2020
bag

ಮೈಸೂರು : ಶಾಲೆಗಳಲ್ಲಿ ವಾರಕ್ಕೆ ಒಂದು ದಿನ ಬ್ಯಾಗ್ ರಹಿತ ದಿನ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬರುವ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು. ಶಿಕ್ಷಣ ತಜ್ಞರಿದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವ ದೃಷ್ಟಿಯಿಂದ ವಾರದಲ್ಲಿ ಒಂದು ದಿನ ಅಥವಾ ಹದಿನೈದು ದಿನಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಬ್ಯಾಗ್ ಲೇಸ್ ಡೇ ಮಾಡಲಾಗುವುದು. ನಾಟಕ, ಸ್ವಚ್ಛತೆ, ಹಾಡುಗಾರಿಕೆ ಹಾಗೂ ಸಾಂಸ್ಕೃತಿಕ […]

ದೇಶದ ನವೋದಯ ಶಾಲೆಗಳಲ್ಲಿ 5 ವರ್ಷಕ್ಕೆ 49 ವಿದ್ಯಾರ್ಥಿಗಳ ಆತ್ಮಹತ್ಯೆ… ದಲಿತ, ಬುಡಕಟ್ಟು ಮಕ್ಕಳೇ ಹೆಚ್ಚು

Monday, December 24th, 2018
navodaya

ದೆಹಲಿ: ಗ್ರಾಮಿಣ ಭಾಗದ ಪ್ರತಿಭಾನ್ವಿತ ಮಕ್ಕಳಿಗೆಂದು ಕೇಂದ್ರ ಸರ್ಕಾರದಿಂದ ನಿರ್ಮಿಸಲಾದ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (ಜೆಎನ್ವಿ) ಕೇವಲ ಐದು ವರ್ಷಗಳಲ್ಲಿ ಕಾಲೇಜು ಕ್ಯಾಂಪಸ್ನಲ್ಲಿ ಸುಮಾರು 49 ಆತ್ಮಹತ್ಯೆ ಪ್ರಕರಣಗಳು ನಡೆದಿದೆ ಎಂದು ಆರ್ಟಿಐ ಮಾಹಿತಿಯೊಂದು ಹೇಳಿದೆ. 2013 ರಿಂದ 2017 ರವರೆಗೆ ನಡೆದ 49 ಆತ್ಮಹತ್ಯೆ ಪ್ರಕರಣಗಳಲ್ಲಿ ಅರ್ಧದಷ್ಟು ದಲಿತ ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿರುವ ವಿದ್ಯಾರ್ಥಿಗಳೇ ಇದ್ದಾರೆ. ಇದರಲ್ಲಿ ಹೆಚ್ಚಿನವರು ಹುಡುಗರು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಇಂಗ್ಲಿಷ್ ದೈನಿಕವೊಂದು ಪಡೆದ ದಾಖಲೆಗಳಿಂದ ತಿಳಿದುಬಂದಿದೆ. ಸರ್ಕಾರದ […]

18 ಸಾವಿರ ಹಿಡಿದುಕೊಂಡು ಬಂಟ್ವಾಳದಿಂದ ಬಾಲಕ ಪರಾರಿ

Tuesday, March 10th, 2015
Anil

ಬಂಟ್ವಾಳ: ಬಾಲಕನೋರ್ವ ನಗದು ಸಹಿತ ಕಾಣೆಯಾದ ಪ್ರಕರಣ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಣೆಯಾದ ಬಾಲಕನನ್ನು 12 ವರ್ಷ ಪ್ರಾಯದ ಅನಿಲ್ ಎನ್ನಲಾಗಿದೆ. ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಕೊಳಕೆ ನಿವಾಸಿ ಸೋಮಪ್ಪ ಅವರ ಮಗ ಅನಿಲ್ ಎಂಬ ಹುಡುಗ ಶಾಲೆಗೆ ಹೋಗದೆ ಮನೆಯಲ್ಲಿ ಕುಳಿತುಕೊಂಡಿದ್ದ. ತಂದೆ ಮತ್ತು ತಾಯಿ ಕೆಲಸಕ್ಕೆ ಹೋದ ಸಂದರ್ಭ ಅನಿಲ್ ಮನೆಯ ಕಪಾಟಿನಲ್ಲಿ ಇಟ್ಟಿದ್ದ ರೂ 18 ಸಾವಿರ ಹಿಡಿದುಕೊಂಡು ಮನೆಯಿಂದ ಹೋದವನು ವಾಪಾಸು ಬರದೆ ಕಾಣೆಯಾಗಿದ್ದಾನೆ ಎಂದು ಬಾಲಕನ […]