ಮಂಗಳೂರಿನ ಶಿವ ದೇವಾಲಯಗಳಲ್ಲಿ ಭಕ್ತಿ, ಸಂಭ್ರಮದಿಂದ ಶಿವ ಪೂಜೆ, ಜಲಾಭಿಷೇಕ

Monday, March 4th, 2019
shivaratri

ಮಂಗಳೂರು :ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮಂಗಳೂರಿನ ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಗಳು ಭಕ್ತಿ, ಸಂಭ್ರಮದಿಂದ ನಡೆಯಿತು. ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಹಾಗೂ ಶಿವರಾತ್ರಿ ಮಹೋತ್ಸವ ನಡೆಯುತ್ತದೆ.ಇಂದು ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ಆರಂಭವಾಗಿವೆ.  ರುದ್ರ ಮಂತ್ರಗಳಿಂದ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ, ಶಿವತೀರ್ಥ ಸ್ವೀಕರಿ ಸಿ ಭಕ್ತರು ಪುನೀತರಾದರು. ಕದ್ರಿ […]

ಎಲ್ಲೆಡೆ ಭಕ್ತಿ ಸಂಭ್ರಮದ ಮಹಾಶಿವರಾತ್ರಿ ಆಚರಣೆ

Tuesday, February 17th, 2015
Shivaratri

ಮಂಗಳೂರು: ಶಿವರಾತ್ರಿ ಪ್ರಯುಕ್ತ ಶಿವ ದೇವಾಲಯದಲ್ಲಿ ಮಂಗಳವಾರ ಮುಂಜಾನೆಯಿಂದಲೇ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಷೇಕ, ಅರ್ಚನೆಗಳನ್ನು ಮಾಡಿದರು. ಮಹಾಶಿವರಾತ್ರಿಯು ಹಿಂದೂ ಕ್ಯಾಲೆಂಡರ್ ಪ್ರಕಾರ ಪಾಲ್ಗುಣ ಮಾಸದ ೧೪ ನೇ ದಿನ ಬರುತ್ತದೆ. ಈ ದಿನ ಭಕ್ತಾಧಿಗಳು ರಾತ್ರಿ ಹಗಲು ಭಕ್ತಿ ಶ್ರಧ್ದೆಯಿಂದ ಶಿವನ ಅರಾಧನೆಯಲ್ಲಿ ತೊಡಗುತ್ತಾರೆ. ಪುರಾಣಗಳಲ್ಲಿ ಮಹಾಶಿವರಾತ್ರಿಯನ್ನು ಶಿವನು ಪಾರ್ವತಿಯನ್ನು ವರಿಸಿದ ಮಹಾದಿನ ಎಂದು ಉಲ್ಲೇಖಿಸಲಾಗಿದೆ. ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು ಭಕ್ತಾಧಿಗಳು ಉಪಾವಾಸ, ವೃತಗಳಲ್ಲಿ ತೊಡಗಿ ಶಿವನ ಧ್ಯಾನ ಮಾಡುತ್ತಾರೆ. ಮಂಗಳೂರಿನ […]