ಮನೆಯಲ್ಲಿ ಪ್ರತ್ಯೇಕ ಕೊಠಡಿಯೊಂದಿಗೆ ಶೌಚಾಲಯ ವ್ಯವಸ್ಥೆ ಇದ್ದರಷ್ಟೇ ಹೋಂ ಐಸೊಲೇಶನ್‌ಗೆ ಅವಕಾಶ

Friday, July 17th, 2020
Kota Srinivas

ಮಂಗಳೂರು: ಕೋವಿಡ್ 19 ಸೋಂಕಿತರಿಗೆ ದ.ಕ. ಜಿಲ್ಲೆಯ 7 ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ಹಾಗೂ ನಿಗದಿತ ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್‌ ಯೋಜನೆಯಡಿ ಉಚಿತ ಚಿಕಿತ್ಸೆ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಪಾಸಿಟಿವ್‌ ಹೊಂದಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲದೇ ಇದ್ದವರಿಗೆ ಮನೆಯಲ್ಲೇ ಚಿಕಿತ್ಸೆಗೆ ಸೂಚನೆ ನೀಡಲಾಗಿದೆ. ಆದರೆ, ಮನೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭ ಇತರರಿಗೆ ತೊಂದರೆಯಾಗದಂತೆ ಇರಬೇಕಾಗಿದ್ದು, ಮನೆಯಲ್ಲಿ ಪ್ರತ್ಯೇಕ ಕೊಠಡಿ, ಅದರೊಂದಿಗೆ ಶೌಚಾಲಯ ವ್ಯವಸ್ಥೆ ಇದ್ದರಷ್ಟೇ […]

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ

Friday, July 3rd, 2020
Bihari

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಶೌಚಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ 25 ವರ್ಷ ವಯಸ್ಸಿನ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮದ್ಯಾಹ್ನದ ವೇಳೆಗೆ ಕೆಲಸಕ್ಕೆ ಆಗಮಿಸಿದ್ದ ಈ ಯುವಕ ಶೌಚಾಲಯದ ಒಳಗಡೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಶೌಚಾಲಯಕ್ಕೆ ಎಳೆದೊಯ್ದು 2 ವರ್ಷದ ಮಗುವಿನ ಚಿನ್ನ ಕಳ್ಳತನ

Friday, July 26th, 2019
burka thief

ಮಂಗಳೂರು : ಬುರ್ಖಾಧಾರಿ  ಮಹಿಳೆಯೊಬ್ಬಳು  2 ವರ್ಷದ ಮಗುವನ್ನು  ಶೌಚಾಲಯಕ್ಕೆ ಎಳೆದೊಯ್ದು ಎರಡೂವರೆ ಪವನ್ ಚಿನ್ನದ ಅಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 24 ರ ಬುಧವಾರ ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಾಹ ಸಮಾರಂಭದಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದು, ಮದುವೆಗೆ ಬಂದಿದ್ದ 2 ವರ್ಷದ ಮಗುವನ್ನು ಸುಮಾರು ಮಧ್ಯಾಹ್ನ 2.30 ರ ವೇಳೆಗೆ ಎಳೆದೊಯ್ದು ಬುರ್ಕಾಧಾರಿ ಮಹಿಳೆ ಮಗು ಧರಿಸಿದ್ದ ಒಂದು 1.5 ಪವನ್ ಚಿನ್ನದ ಸರ ಮತ್ತು […]

ಮಗಳ ಮಾತಿಗೆ ಚಿನ್ನ ಅಡವಿಟ್ಟು ಶೌಚಾಲಯ ಕಟ್ಟಿಸಿದ ಹೆತ್ತವರು

Wednesday, January 16th, 2019
Kavya

ಮೂಡುಬಿದಿರೆ: ಮನೆಯಲ್ಲಿ ಶೌಚಾಲಯವಿಲ್ಲ ಎಂಬ ಕೊರಗಿನಿಂದ ಹೆತ್ತವರನ್ನು ಕಾಡಿ ಬೇಡಿ ಅವರ ಮನವೊಲಿಸಿ ಕೊನೆಗೂ ಶೌಚಾಲಯ ಕಟ್ಟಿಸಿಕೊಳ್ಳುವಲ್ಲಿ ಶಿರ್ತಾಡಿ ಗ್ರಾ.ಪಂ.ನ ಮೂಡುಕೊಣಾಜೆಯ 8ರ ಹರೆಯದ ಕಾವ್ಯಾ ಯಶಸ್ವಿಯಾಗಿದ್ದಾಳೆ. ಕುದ್ರೆಲ್ ನಿವಾಸಿ ಶೀನ-ಲೀಲಾ ದಂಪತಿಯ ಇಬ್ಬರು ಮಕ್ಕಳಲ್ಲಿ ಕಾವ್ಯಾ ಕಿರಿಯವಳು. ಸರಕಾರಿ ಕಿ.ಪ್ರಾ. ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ. ಆರೋಗ್ಯ ಕಾರ್ಯಕರ್ತೆಯ ಸ್ವತ್ಛತೆಯ ಪಾಠದಿಂದ ಪ್ರೇರಿತಳಾದ ಕಾವ್ಯಾ ಶೌಚಾಲಯ ನಿರ್ಮಿಸಲು ಹೆತ್ತವರನ್ನು ಆಗ್ರಹಿಸಿದ್ದಳು. ಸೋಗೆ ಮಾಡಿನ ಸೂರಿನ ಮನೆಯನ್ನು ದುರಸ್ತಿ ಮಾಡಿದಾಗಲೇ 1.5 ಲಕ್ಷ ರೂ. ಸಾಲವಾಗಿತ್ತು. ಮತ್ತೆ […]

ಗುತ್ತಿಗೆದಾರರು ಸಿಗದೆ ಸಾರ್ವಜನಿಕ ಶೌಚಾಲಯಗಳಿಗೆ ಬೀಗ

Thursday, February 1st, 2018
toilet

ಮಂಗಳೂರು: ಇಲ್ಲಿಯ ಬಸ್‌ ನಿಲ್ದಾಣದ ಸಮೀಪ ಇಟ್ಟ ಇ-ಟಾಯ್ಲೆಟ್‌ ಗೆ ಹೋಗಲು ಮಹಿಳೆಯರು, ವಿದ್ಯಾರ್ಥಿಗಳು ಮುಜುಗರ ಪಡುತ್ತಾರೆ. ಕಾರಣ ಎಲ್ಲರಿಗೂ ಕಾಣುವಂತೆ ಒಳಹೋಗಲು ಸಾರ್ವಜನಿಕರು ಅದರಲ್ಲಿಯೂ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಸುರತ್ಕಲ್‌ ಬಸ್‌ ನಿಲ್ದಾಣದ ಬಳಿ ಇಡಲಾದ ಇ-ಟಾಯ್ಲೆಟ್‌ ಎತ್ತರದಲ್ಲಿದ್ದು, ವಯೋವೃದ್ಧರು ಹತ್ತಲಾರದ ಸ್ಥಿತಿಯಲ್ಲಿದೆ. ಇನ್ನು ಇದಕ್ಕೆ ಎದುರು ಬದಿ ತಡೆಯಿಲ್ಲದ ಕಾರಣ ಎಲ್ಲರ ಮುಂಭಾಗದಲ್ಲಿ ಶೌಚಕ್ಕೆ ಒಳ ಹೋಗಲು ಸಾರ್ವಜನಿಕರು ಮುಜುಗರವಾಗುತ್ತದೆ. ಸುರತ್ಕಲ್‌, ಬೈಕಂಪಾಡಿ ಮತ್ತಿತರೆಡೆ ಲಕ್ಷ ಲಕ್ಷ ಖರ್ಚು ಮಾಡಿ ಸಾರ್ವಜನಿಕ ಶೌಚಾಲಯ ಕಟ್ಟಿದರೂ […]

ಮನೆಯಲ್ಲೇ ಕಸವಿಭಜನೆಯಿಂದ ತ್ಯಾಜ್ಯ ವಿಲೇ ಸುಲಲಿತ: ಸಿಇಒ

Friday, August 9th, 2013
Tulasi-Maddineni

ಮಂಗಳೂರು : ಸುಶಿಕ್ಷಿತ ಜಿಲ್ಲೆ ದಕ್ಷಿಣ ಕನ್ನಡ; ಇಲ್ಲಿನ ಸುಶಿಕ್ಷಿತರಿಗೆ ಕಸವಿಭಜನೆ ಮೂಲಕ ಕಸ ವಿಲೇ ಹಾಗೂ ತ್ಯಾಜ್ಯದ ಬಳಕೆ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಅರಿವಿನ ಶಿಕ್ಷಣ ಶಾಲೆಯ ಮೂಲಕವೇ ಆರಂಭವಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ಹೇಳಿದರು. ಇಂದು ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ಸಭೆಯ ಅನುಪಾಲನಾ ವರದಿ ಪರಿಶೀಲಿಸಿದರು. ಸ್ವಚ್ಛತೆಗಾಗಿ ಸಾಕಷ್ಟು ಬಹುಮಾನ ಪಡೆದಿರುವ […]

ದಲಿತರಿಂದ ಮಲ ತೆಗೆಸುವ ಪದ್ಧತಿಯನ್ನು ನಿಷೇಧಿಸಬೇಕು :ದ.ಸಂ.ಸ

Thursday, November 17th, 2011
Dalit Protest

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ| ಕೃಷ್ಣಪ್ಪ ಸ್ಥಾಪಿತ) ಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯದಲ್ಲಿ ಮಾನವ ಕೈಗಳಿಂದ ಮಲ ತೆಗೆಸುವ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಬೇಕು ಹಾಗೂ ಐ.ಪಿ.ಡಿ. ಸಾಲಪ್ಪ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಇತ್ತೀಚೆಗೆ ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ ಕೃಷ್ಣ ಕೊರಗ ಮತ್ತು ಕೋಲಾರ ಜಿಲ್ಲೆಯ ಕೆ.ಜಿ.ಎಫ್‌. ನಲ್ಲಿ ಓರ್ವ ಪೌರ ಕಾರ್ಮಿಕ ಶೌಚಾಲಯ ಗುಂಡಿಯಲ್ಲಿ ಸಾವನ್ನಪ್ಪಿರುವುದರ ಪ್ರತಿಭಟನಾರ್ಥ ಈ […]