ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ತಿರುವಾಂಕೂರು ರಾಜನಮನೆತನಕ್ಕೆ ಸೇರಿದ್ದು ಸುಪ್ರೀಂ ಕೋರ್ಟ್ ತೀರ್ಪು

Monday, July 13th, 2020
Triuvankuru

ಹೊಸದಿಲ್ಲಿ: 18ನೇ ಶತಮಾನದ ಕೇರಳದ ಐತಿಹಾಸಿಕ, ಶ್ರೀಮಂತ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಸಂಪತ್ತು ಮತ್ತು ಆಡಳಿತದ ಹಕ್ಕು ತಿರುವಾಂಕೂರು ರಾಜನಮನೆತನಕ್ಕೆ ಸೇರಿದ್ದು ಎಂಬುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ಮಹತ್ವದ ತೀರ್ಪುನೀಡಿದೆ. ಕೇರಳ ಹೈಕೋರ್ಟ್‌ 2011ರಲ್ಲಿ ದೇವಸ್ಥಾನದ ಆಡಳಿತ ಮತ್ತು ಸಂಪತ್ತಿನ ನಿರ್ವಹಣೆಗಾಗಿ ಟ್ರಸ್ಟ್‌ ಸ್ಥಾಪಿಸುವಂತೆ ರಾಜ್ಯ ಸರಕಾರಕ್ಕೆ ನೀಡಿದ್ದ ನಿರ್ದೇಶನವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ಪದ್ಮನಾಭಸ್ವಾಮಿ ದೇವಸ್ಥಾನ ವಿಶ್ವದಲ್ಲಿಯೇ ಅತೀ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆ ಹೊಂದಿದ್ದು, ಕೆಲವು ವರ್ಷಗಳ ಹಿಂದೆ ಲೆಕ್ಕ ಹಾಕಿದಾಗ ಸುಮಾರು 90 ಸಾವಿರ […]