ಬಯಸಿದ್ದು ವೈದ್ಯ ವೃತ್ತಿ, ಆಯ್ಕೆ ಮಾಡಿದ್ದು ರಾಷ್ಟ್ರ ಸೇವೆ

Thursday, February 1st, 2018
subramanya

ಸುಬ್ರಹ್ಮಣ್ಯ : ಆಗ ಕಾರ್ಗಿಲ್‌ ಯುದ್ಧದ ಸಮಯ. 1999ನೇ ಇಸವಿ. ಮೂರನೇ ತರಗತಿ ಕಲಿಯುತ್ತಿದ್ದ ಬಾಲಕ ದೂರದರ್ಶನದಲ್ಲಿ ಬರುತ್ತಿದ್ದ ಯುದ್ಧದ ಸನ್ನಿವೇಶಗಳನ್ನು, ಬಂದೂಕು ಹಿಡಿದ ಸೈನಿಕರ ದೃಶ್ಯಗಳನ್ನು ನೋಡುತ್ತಿದ್ದ. ಶಾಲೆಯಿಂದ ಬಂದು ಮನೆಯಲ್ಲಿ ತಲೆದಿಂಬು ಬಂಕರಾಗಿಸಿ, ಆಟಿಕೆ ಗನ್‌ನಿಂದ ಡಿಶುಂ ಡಿಶುಂ ಎಂದು ಮಾಡುವುದು ಸಾಮಾನ್ಯವಾಗಿತ್ತು. ಈಗ ಅದೇ ಬಾಲಕ ಸೇನೆಯಲ್ಲಿ ಕ್ಯಾಪ್ಟನ್‌ ಹುದ್ದೆಗೇರಿದ್ದಾರೆ. ಅವರೇ ಕಲ್ಮಡ್ಕ ಗ್ರಾಮದ ಕ್ಯಾ.ಪ್ರಶಾಂತ ಜಿ ಕಶ್ಯಪ್‌. ಜಮ್ಮು ಮತ್ತು ಕಾಶ್ಮಿರದ 20ನೇ ಇನ್‌ಫೆಂಟ್ರಿಯ ಕುಮೌನ್‌ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಶಾಂತ್‌ […]