ಕರಾವಳಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

Friday, August 23rd, 2019
Udupi

ಮಂಗಳೂರು : ಕರಾವಳಿಯ ಎಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ. ಇಂದು ಕೃಷ್ಣ ಜನ್ಮಾಷ್ಟಮಿ. ನಾಡಿನಾದ್ಯಂತ ಕೃಷ್ಣ ಭಕ್ತರು ಸಂಭ್ರಮದಲ್ಲಿದ್ದಾರೆ. ಎಲ್ಲೆಡೆ ಮಾಧವ, ಮುಕುಂದ, ಮುರಳಿಲೋಲ, ಗೋವರ್ಧನ, ಗಿರಿಧರ ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುವ ಶ್ರೀ ಕೃಷ್ಣನ ನಾಮ ಜಪ ನಡೆಯುತ್ತಿದೆ. ಕಡೆಗೋಲು ಕೃಷ್ಣನ ನಾಡು ಉಡುಪಿಯಲ್ಲಿ ಭಗವಾನ್ ಕೃಷ್ಣನ ಆರಾಧನೆ ಆರಂಭವಾಗಿದೆ. ಕೃಷ್ಣನ ನಾಡು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ಮುಂಜಾನೆಯಿಂದಲೇ ಕೃಷ್ಣಮಠಕ್ಕೆ ಭಕ್ತರು ಭೇಟಿಕೊಟ್ಟು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆ ಮಾಡುತ್ತಿದ್ದಾರೆ. ಕೃಷ್ಣಮಠವನ್ನು […]

ಆಗಸ್ಟ್ 14 ರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಖರೀದಿಯಲ್ಲಿ ಮಂಗಳೂರು ಮಾರುಕಟ್ಟೆಯಲ್ಲಿ ಜನ ಜಂಗುಳಿ

Sunday, August 13th, 2017
Krishna Janmashtami

ಮಂಗಳೂರು: ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಸಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಆಗಸ್ಟ್ 14 ಆಷಾಡ ಮತ್ತು ಭರಣಿ ನಕ್ಷತ್ರ ಬಂದಿರುವುದರಿಂದ ಕೃಷ್ಣ ಜನ್ಮಾಷ್ಟಮಿ ಶಾಸ್ತ್ರೋಕ್ತವಾಗಿ ಸಪ್ಟೆಂಬರ್ 13 ರಂದು ಶ್ರೀ ಕೃಷ್ಣ ಜನಿಸಿದ ರೋಹಿಣಿ ನಕ್ಷತ್ರದಲ್ಲಿ ಆಚರಿಸಲಾಗುವುದು ಎಂದು ತೀರ್ಮಾನಿಸಲಾಗಿದೆ. ಆದರೆ ಮಂಗಳೂರಿನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಎರಡೆರಡು ಭಾರಿ ಆಚರಿಸಲಾಗುತ್ತಿದೆ. ಆಗಸ್ಟ್ 14 ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಿಸಲು ಭಾನುವಾರ ಎಲ್ಲೆಡೆ ಜನರು  ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿಯೂ ಮಂಗಳೂರಿನಲ್ಲಿ […]