ಶ್ರೀ ದುರ್ಗಾಪರಮೇಶ್ವರಿ ಕಟೀಲಿನಲ್ಲಿ ಪವಿತ್ರ ಬ್ರಹ್ಮಕಲಶಾಭಿಷೇಕದ ವೈಭವ

Friday, January 31st, 2020
kateel

ಮಂಗಳೂರು : ಭಕ್ತರ ಇಷ್ಟಾರ್ಥ ಗಳನ್ನು ಕರುಣಿಸುವ ಮಹಾಮಾತೆ, ನಂದಿನಿ ನದಿಯ ಮಡಿಲಲ್ಲಿ ಪವಡಿಸಿದ ಸಾವಿರ ಸೀಮೆಯ ಆದಿಮಾಯೆ, ಭ್ರಾಮರಿ ಅವತಾರಿಣಿ ಶ್ರೀ ದುರ್ಗಾಪರಮೇಶ್ವರಿಗೆ ಗುರುವಾರ ಪರಮ ಪವಿತ್ರ ಬ್ರಹ್ಮ ಕಲಶೋತ್ಸವ ವೈಭವದಿಂದ ನೆರವೇರಿತು. ಈ ಪುಣ್ಯ ಸಂಭ್ರಮವನ್ನು ಸಹಸ್ರಾರು ಭಕ್ತರು ಕಣ್ತುಂಬಿ ಕೊಂಡು ಭಕ್ತಿಭಾವದಿಂದ ಪುನೀತರಾದರು. ಸೂರ್ಯೋದಯಕ್ಕೆ ಮುನ್ನವೇ ವೈದಿಕ ವಿಧಿ ವಿಧಾನಗಳು ಆರಂಭವಾದವು. ಹಲವು ಭಕ್ತರು ನೇರವಾಗಿ ವೀಕ್ಷಿಸಿದರೆ, ಲಕ್ಷಾಂತರ ಮಂದಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆ ಮತ್ತು ಸ್ಥಳೀಯ ವಾಹಿನಿಗಳ ನೇರಪ್ರಸಾರದ […]

ಕಟೀಲು : ಲಲಿತಾ ಪಂಚಮಿ ಪ್ರಯುಕ್ತ 18 ಸಾವಿರ ಶೇಷವಸ್ತ್ರ ವಿತರಣೆ

Friday, October 4th, 2019
kateel

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಲಲಿತಾ ಪಂಚಮಿ ಪ್ರಯುಕ್ತ ಗುರುವಾರ ರಾತ್ರಿ ಅನ್ನಪ್ರಸಾದ ಸ್ವೀಕರಿಸಿದ ಮಹಿಳಾ ಭಕ್ತರಿಗೆ ದೇವರ ಶೇಷ ವಸ್ತ್ರ ನೀಡಲಾಯಿತು. ಸಂಜೆ 6.30ಕ್ಕೆ ಅನ್ನಪ್ರಸಾದ ವಿತರಣೆ ಪ್ರಾರಂಭವಾಗಿದ್ದು, ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 18 ಸಾವಿರ ಶೇಷವಸ್ತ್ರ ಸಿದ್ಧಪಡಿಸಲಾಗಿದ್ದು, ತಡರಾತ್ರಿಯವರೆಗೂ ವಿತರಣೆ ಕಾರ್ಯ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಸುಮಾರು 30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ […]

ಕಚಡಾ ನನ್ ಮಕ್ಳು..” ಎಂದು ಪತ್ರಕರ್ತರನ್ನು ನಿಂದಿಸಿದ ಎಚ್.ಡಿ.ರೇವಣ್ಣ

Monday, July 15th, 2019
HD-Revanna

ಮಂಗಳೂರು  : ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರಕಾರ ಉಳಿಸಿಕೊಳ್ಳಲು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು  ದೇವಸ್ಥಾನ ಸುತ್ತುವುದನ್ನು ಕವರೇಜ್ ಮಾಡಲು ಹೋದ  ಪತ್ರಕರ್ತರನ್ನು ಮತ್ತು ಛಾಯಾಗ್ರಾಹಕರನ್ನು ಕಚಡಾ ನನ್ ಮಕ್ಳು..”  ಎಂದು ನಿಂದಿಸಿ ಪತ್ರಕರ್ತರಲ್ಲಿದ್ದ ಆ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಭದ್ರತಾ ಸಿಬ್ಬಂದಿಗಳ ಮೂಲಕ ಡಿಲೀಟ್ ಮಾಡಿಸಿದ  ಘಟನೆ  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಭಾನುವಾರ ನಡೆದಿದೆ ಭಾನುವಾರ ಕೊಲ್ಲೂರು, ಆನೆಗುಡ್ಡೆ, ಹಟ್ಟಿಯಂಗಡಿ ಸೇರಿದಂತೆ ಕಟೀಲು ದೇವಳಗಳಿಗೆ ಭೇಟಿ ನೀಡಿದ್ದಾರೆ.  ಸಂಜೆ 03.20 ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ […]