ನೆಲ್ಲಿತೀರ್ಥ ಗುಹಾ ದೇವಾಲಯ… ಆಸ್ತಿಕರು ಭೇಟಿ ಕೊಡಲೇಬೇಕಾದ ಸ್ಥಳ
Tuesday, January 2nd, 2018ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವೈಶಿಷ್ಟ್ಯಪೂರ್ಣ ದೇವಾಲಯಗಳಲ್ಲಿ ಬಡಗ ಎಕ್ಕಾರು ಗ್ರಾಮದ ‘ನೆಲ್ಲಿತೀರ್ಥ’ ಸೋಮನಾಥೇಶ್ವರ ಗುಹಾ ದೇವಾಲಯವೂ ಒಂದು. ಭಕ್ತರ ಪಾಲಿಗೆ ಅತ್ಯಂತ ಕಾರ್ಣಿಕದ ದೇವಾಲಯವಾಗಿರುವ ಇಲ್ಲಿ ವರ್ಷದ ಆರು ತಿಂಗಳ ಕಾಲ ಮಾತ್ರವೇ ಶಿವನಿಗೆ ಪೂಜೆ ಸಲ್ಲುತ್ತದೆ. ಉಳಿದ ಆರು ತಿಂಗಳು ದೇವತೆಗಳು, ಮುನಿಗಳು ಶಿವನ ಆರಾಧನೆಯಲ್ಲಿ ತೊಡಗಿರುತ್ತಾರೆ ಎಂಬುದು ಪ್ರತೀತಿ. ಜನರ ಪ್ರಕಾರ ನೆಲ್ಲಿತೀರ್ಥ ದೇವಾಲಯವು ಅಸ್ತಿತ್ವಕ್ಕೆ ಬಂದಿದ್ದು ಕ್ರಿ.ಶ. 1487ರಲ್ಲಿ. ಅದಕ್ಕಿಂತಲೂ ಅದೆಷ್ಟೋ ವರ್ಷಗಳ ಹಿಂದೆಯೇ ಈ ಗುಹಾಲಯವಿತ್ತೆನ್ನುತ್ತವೆ ಪುರಾಣಗಳು. ಮಂಗಳೂರು ತಾಲೂಕಿನಿಂದ […]