ಕರಾವಳಿ ಕರ್ನಾಟಕದ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಚಾರ ಅಗತ್ಯ: ಸಂಧ್ಯಾ ರಾವ್
Thursday, March 1st, 2018ಮೂಡುಬಿದಿರ: ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರಿಸರ ಪ್ರವಾಸೋದ್ಯಮದ ಪ್ರಗತಿಗೆ ವಿಫುಲ ಅವಕಾಶಗಳಿವೆ. ಆದರೆ ಈ ಅವಕಾಶಗಳಿಗೆ ಇನ್ನೂ ಹೆಚ್ಚಿನ ಪ್ರಚಾರ ಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯ ಪ್ರವೃತ್ತವಾದರೆ ಸರ್ಕಾರಕ್ಕೆ ಹೇರಳ ಆದಾಯ ಬರುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಎಂದು ನಿಟ್ಟೆ ಉದ್ಯಮಾಡಳಿತ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಕೆ.ಪಿ.ಸಂಧ್ಯಾ ರಾವ್ ಹೇಳಿದರು. ಇಲ್ಲಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದಲ್ಲಿ ಅವರು ಬುಧವಾರ ವಿಶೇಷ ಉಪನ್ಯಾಸ ನೀಡಿದರು. ಪರಿಸರ ಪ್ರವಾಸದಲ್ಲಿ ಆಸಕ್ತಿಯುಳ್ಳವರು […]