ಸುಳ್ಯದಲ್ಲಿ ಜಲಸ್ಪೋಟ, ದುರಂತಮಯ ಪ್ರವಾಹ ಸಚಿವ ಎಸ್.ಅಂಗಾರ ಭೇಟಿ
Tuesday, August 2nd, 2022
ಸುಳ್ಯ : ತಾಲೂಕಿನ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರ, ಕಲ್ಮಕಾರು, ಸಂಪಾಜೆ ಹಾಗೂ ಕಲ್ಲುಗುಂಡಿ ಭಾಗಗಳಲ್ಲಿ ನಿನ್ನೆ ಸಂಭವಿಸಿದ ಜಲಸ್ಪೋಟದಿಂದ ಉಂಟಾದ ದುರಂತಮಯ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ಭೇಟಿ ನೀಡಿ ತೊಂದರೆಗೀಡಾದ ಜನರಿಗೆ ಸಾಂತ್ವಾನ ಹೇಳಿದರು. ಕಡಬ ಮತ್ತು ಸುಳ್ಯ ತಾಲೂಕಿನಲ್ಲಿ ತೀವ್ರ ಮಳೆಯಾಗಿದ್ದು ಇದೂವರೆಗೆ ಒಟ್ಟು 30 ಮನೆಗಳಿಗೆ ಹಾನಿಯಾಗಿದೆ, 5 ಮನೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಪರ್ವತ ಮುಖಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದು […]