ಅಭಿವೃದ್ಧಿ ವೇಗ ಹೆಚ್ಚಿಸಲು ಎರಡೂ ಸದನಗಳಲ್ಲಿ ಬಹುಮತ ಬೇಕು: ಸದಾನಂದಗೌಡ
Tuesday, October 27th, 2020ಬೆಂಗಳೂರು: ಅಭಿವೃದ್ದೀಯ ವೇಗ ಹೆಚ್ಚಿಸಲು ಸರ್ಕಾರಕ್ಕೆ ಮೇಲ್ಮನೆಯಲ್ಲಿಯೂ ಬಹುಮತ ಬೇಕು. ಇಲ್ಲವಾದರೆ ಅನಗತ್ಯ ಅಡಚಣೆ ಉಂಟಾಗುತ್ತದೆ. ಈ ಮುಂಚೆ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದೆ ಅನೇಕ ಕ್ರಾಂತಿಕಾರಕ ಮಸೂದೆಗಳು ವಿಳಂಬಗೊಂಡವು. ಆ ಪರಿಸ್ಥಿತಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬರಬಾರದು. ಹಾಗಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಎಲ್ಲ ನಾಲ್ವರು ಅಭ್ಯರ್ಥಿಗಳನ್ನೂ ಗೆಲ್ಲಿಸಿ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಕರೆ ನೀಡಿದ್ದಾರೆ. […]