ದೈಹಿಕ ಅಸಾಮರ್ಥ್ಯ ಕುರಿತು ಕೊರಗುತ್ತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ: ಸಬಿತಾ ಮೊನಿಸ್
Friday, March 9th, 2018ಮಂಗಳೂರು: `ಹುಟ್ಟಿನಿಂದಲೇ ಎರಡೂ ಕೈಗಳಿಲ್ಲದೆ ಬೆಳೆದು ಬಂದವಳು ನಾನು. ಶಾಲೆಗೆ ಸೇರಲು ಕೂಡ ಹರಸಾಹಸ ಪಡಬೇಕಾಯಿತು. ಈ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿದೆ ಎಂದು ಮೂಡಬಿದಿರೆ ಆಳ್ವಾಸ್ ಮಹಾ ವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸಬಿತಾ ಮೊನಿಸ್ ಹೇಳಿಕೊಂಡಿದ್ದಾರೆ. ಏಳನೇ ತರಗತಿಯಿಂದ ಕಾಲಿನಲ್ಲಿ ಬರೆಯಲು ಆರಂಭಿಸಿದೆ. ಅದರಲ್ಲೂ ಯಶಸ್ವಿಯಾದೆ. ಸಮಾಜ ನನ್ನನ್ನು ಗುರುತಿಸಿ ನನ್ನ ಸಾಧನೆಗೆ ಮಾನ್ಯತೆ ನೀಡಿತು. ನಾನು ಒಂದು ವೇಳೆ ನನ್ನ ದೈಹಿಕ ಅಸಾಮರ್ಥ್ಯದ ಬಗ್ಗೆ ಕೊರಗುತ್ತಾ ಕೂತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ’ ಸಬಿತಾ ಮೊನಿಸ್ ಹೇಳಿದರು. […]