ಪಣಂಬೂರು ಸಮೀಪ ಸಮುದ್ರ ತೀರದಲ್ಲಿ ಭಾರೀ ಪ್ರಮಾಣದಲ್ಲಿ ತೈಲ ತ್ಯಾಜ್ಯ ಪತ್ತೆ
Friday, May 13th, 2022
ಸುರತ್ಕಲ್ : ಪಣಂಬೂರು ಸಮೀಪದ ಸುರತ್ಕಲ್ ದೊಡ್ಡ ಕೊಪ್ಪಲು ಸಮುದ್ರ ತೀರದಲ್ಲಿ ಶುಕ್ರವಾರ ಬೆಳಗ್ಗೆ ಭಾರೀ ಪ್ರಮಾಣದಲ್ಲಿ ತೈಲ ತ್ಯಾಜ್ಯ ಹರಿದುಬಂದಿದೆ. ಸಮುದ್ರ ಮಾರ್ಗವಾಗಿ ಸಂಚರಿಸುವ ಹಡಗುಗಳು ಅದಲ್ಲಿರುವ ತ್ಯಾಜ್ಯವನ್ನು ಸಮುದ್ರದಲ್ಲಿ ಸುರಿದಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಸಮುದ್ರದಲ್ಲಿ ಮುಳುಗಿರುವ ಹಡಗುಗಳಿಂದಲೂ ಇದು ಬಂದಿರುವ ಸಾಧ್ಯತೆ ಇದೆ. ಸುಮಾರು 2- 3 ಕಿ.ಮೀ. ವ್ಯಾಪ್ತಿಯ ಕಲಡ ಕಿನಾರೆಗೆ ತೈಲದ ಜಿಡ್ಡು ಅಪ್ಪಳಿಸುತ್ತಿದೆ. ಮಂಗಳೂರು ಬಂದರಿನಲ್ಲಿ ಲಂಗರು ಹಾಕುವ ಹಡಗುಗಳು ಬಂದರ್ ನಲ್ಲಿ ತ್ಯಾಜ್ಯ ವಿಲೇವಾರಿಗೆ ಶುಲ್ಕ ಪಾವತಿಸಬೇಕಿರುವ […]