ಭಂಡಾರಿ ಫೌಂಡೇಶನ್ ವತಿಯಿಂದ “ಗುರುವಂದನೆ”

Thursday, September 5th, 2024
Bhandary-Foundation

ಮಂಗಳೂರು: “ಶಿಕ್ಷಕರು ಸಮಾಜದಲ್ಲಿ ನಂಬಿಕೆ ಮತ್ತು ಅತ್ಯಂತ ಹೆಚ್ಚು ಗೌರವದ ಸ್ಥಾನಮಾನಕ್ಕೆ ಅರ್ಹರಾಗಿದವರು. ಆ ಸ್ಥಾನಮಾನ ಮುಂದೆಯೂ ಉಳಿಯುವಂತಾಗಲಿ“ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಅವರು ಗುರುವಾರ ಸಂಜೆ ಅಡ್ಯಾರ್ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಭಂಡಾರಿ ಫೌಂಡೇಶನ್ ವತಿಯಿಂದ ಜರುಗಿದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. “ಶಿಕ್ಷಕ ವೃತ್ತಿ ಎನ್ನುವುದು ಸನ್ಯಾಸತ್ವ ಸ್ವೀಕಾರ ಮಾಡಿದಂತೆ. ಒಬ್ಬ ಸ್ಫೂರ್ತಿ ತುಂಬುವ ಶಿಕ್ಷಕನ ಮೂಲಕ ಆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದಲ್ಲಿ […]

ವಿಧಾನ ಪರಿಷತ್‌ ಸ್ಪರ್ಧೆಗೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿಗೆ ಕಾಂಗ್ರೆಸ್ ಟಿಕೆಟ್

Monday, November 22nd, 2021
Manjunath Bhandary

ಮಂಗಳೂರು :  ವಿಧಾನ ಪರಿಷತ್‌ ಸ್ಪರ್ಧೆಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿ.10ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯ ಒಪ್ಪಿಗೆಯೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್‌ ವಾಸ್ನಿಕ್ ಸೋಮವಾರ ಅಭ್ಯರ್ಥಿಯಾಗಿ ಪ್ರಕಟಿಸಿದ್ದಾರೆ. ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕೆಮ್ಮಾಜೆಯ ಬಂಟ-ಕೃಷಿ ಕುಟುಂಬದಲ್ಲಿ ಜನಿಸಿದ ಮಂಜುನಾಥ್ ಭಂಡಾರಿ ‘ಪಂಚಾಯತ್ ರಾಜ್‌’ ವಿಷಯದಲ್ಲಿ ಎಂಪಿಎಲ್ ಮತ್ತು ಪಿಎಚ್‌ಡಿ ಮಾಡಿದ್ದಾರೆ. ರಾಜಕೀಯ […]

ನೋಟು ಅಮಾನ್ಯಗೊಳಿಸಿದ ಬಳಿಕ ದೇಶದ ಆರ್ಥಿಕ ಸ್ಥಿತಿ ಪ್ರಗತಿಯಾಗಿದೆ – ಮೆಘಾವಲ್

Thursday, May 18th, 2017
meghaval

ಮಂಗಳೂರು : ಕೇಂದ್ರ ಸರಕಾರದ ಕ್ರಾಂತಿಕಾರಿ ಆರ್ಥಿಕ ನೀತಿಯಿಂದ ನೋಟು ಅಮಾನ್ಯಗೊಳಿಸಿದ ಬಳಿಕ ದೇಶದ ಜಿಡಿಪಿಯಲ್ಲಿ ಕುಸಿತವಾಗಲಿದೆ, ಅಭಿವೃದ್ಧಿ ಕುಸಿತವಾಗಲಿದೆ ಎಂಬ ಟೀಕೆಗಳು ಕೆಲವರಿಂದ ಕೇಳಿ ಬಂತು. ಆದರೆ ಅದಕ್ಕೆ ಅಪವಾದ ಎನ್ನುವಂತೆ ದೇಶದ ಆರ್ಥಿಕ ಪ್ರಗತಿ ಸಾಧ್ಯವಾಗಿದೆ, ದೇಶದ ಅಭಿವೃದ್ಧಿ ಸೂಚ್ಯಂಕ ಶೇ.10ಕ್ಕೆ ಏರಿಕೆಯಾಗಲಿದೆ ಎಂದು ಕೇಂದ್ರ ವಿತ್ತ, ಕಾರ್ಪೋ ರೇಟ್ ವ್ಯವಹಾರ ಸಚಿವ ಅರ್ಜುನ್ ರಾಮ್ ಮೆಘಾವಲ್ ತಿಳಿಸಿದ್ದಾರೆ. ಅಡ್ಯಾರಿನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ದ.ಕ ಜಿಲ್ಲಾ […]