ಗ್ರಾಮ ಸಹಾಯಕವನ್ನು ‘ಡಿ’ ದರ್ಜೆ ನೌಕರರಾಗಿ ಖಾಯಂ ಗೊಳಿಸಲು ಒತ್ತಾಯಿಸಿ ಸಾಂಕೇತಿಕ ಮುಷ್ಕರ
Monday, October 7th, 2013ಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕರ.ರಿ. ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಮಂಗಳೂರು ಇವರ ವತಿಯಿಂದ ಸಾಂಕೇತಿಕ ಮುಷ್ಕರವನ್ನು ಅಕ್ಟೋಬರ್ 7, 2013ನೇ ಸೋಮವಾರ ಮಂಗಳೂರು ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಸಲಾಯಿತು. ಪರಮೇಶ್ವರ ನಾಯಕ್, ಕಂದಾಯ ಇಲಾಖೆ ನೌಕರರ ಸಂಘ ಅಧ್ಯಕ್ಷ ಮಾತನಾಡಿ ಸರಕಾರಿ ಆದೇಶ ಸಂಖ್ಯೆ : ಕಂ.ಇ.3.ಯು.ವಿ.ಎಸ್.77 ದಿನಾಂಕ 16/9/1998 ಮತ್ತು ಕಂ.ಇ.83.ಯು.ವಿ.ಎಸ್(1)82 ದಿನಾಂಕ 23/09/82ರ ಅನ್ವಯ ಸರಕಾರವು ರಾಜ್ಯದ 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. […]