ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಅಹ್ವಾನ

Friday, October 6th, 2023
Rajyotsava 2023

ಮಂಗಳೂರು : 2023-24ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಹಿತ್ಯ, ಶಿಕ್ಷಣ, ಸಂಗೀತ, ನೃತ್ಯ, ಕ್ರೀಡೆ, ಕೃಷಿ, ಲಲಿತ ಕಲೆಗಳು ಸಮಾಜ ಸೇವೆ, ಜನಪದ, ಪರಿಸರ-ವಿಜ್ಞಾನ, ವೈದ್ಯಕೀಯ ಸಂಶೋಧನೆ, ಪತ್ರಿಕೋದ್ಯಮ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ತಮ್ಮ ಸೇವೆ ಅಥವಾ ಸಾಧನೆಯ ಕ್ಷೇತ್ರ ಹಾಗೂ ಸಂಕ್ಷಿಪ್ತ ದಾಖಲೆ ವಿವರಣೆಗಳೊಂದಿಗೆ ಇದೇ ಅ.25ರಂದು ಸಂಜೆ 5 ಗಂಟೆಯೊಳಗೆ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಹಿತ್ಯ ರಚನೆಯಾದರೆ ಭಾಷೆಯೂ ಬೆಳೆದಂತೆ: ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ

Thursday, September 30th, 2021
Book Release

ಮಂಗಳೂರು: ಸಾಹಿತ್ಯ ಬೆಳೆದಂತೆ ಬಾಷೆಯೂ ಬೆಳೆಯುತ್ತದೆ. ಹೀಗಾಗಿ ಎಲ್ಲಾ ಪ್ರಾಕಾರಗಳಲ್ಲಿ ಸಾಹಿತ್ಯ ರಚನೆಯಾಗಬೇಕು, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಆಶಿಸಿದ್ದಾರೆ. ವಿ.ವಿ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾ ಭವನದಲ್ಲಿ ಗುರುವಾರ, ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ನಂದಾದೀಪ ಪ್ರಕಾಶನ ಕನ್ಯಾನ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ʼಬೇಲಿʼ ಹಾಗೂ ʼಸಾಪೊದ ಕಣ್ಣ್ʼ ನಾಟಕ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮೂಲತಃ ಹವ್ಯಕ ಬಾಷೆಯವರಾದ ಲೇಖಕಿ ಅಕ್ಷತಾರಾಜ್ ಪೆರ್ಲ ಅವರ […]

ಕ್ರಾಂತಿ ಎಂಬುದು ಅವ್ಯವಸ್ಥೆಯ ವಿರುದ್ಧವೇ ಹೊರತು ವ್ಯವಸ್ಥೆಯ ವಿರುದ್ಧವಲ್ಲ : ಮಹಮ್ಮದ್ ಬಡ್ಡೂರು

Sunday, August 29th, 2021
Badooru

ಮಂಗಳೂರು  : ‘ಕ್ರಾಂತಿ ನಮ್ಮಿಂದಲೇ ಆರಂಭವಾಗಬೇಕು.ಆಗ ಅದಕ್ಕಿಂದು ಮೌಲ್ಯ ಬರುತ್ತದೆ. ಸಾಹಿತಿಗಳಿಗೆ ತಮ್ಮ ಕಾವ್ಯವನ್ನು ಹೊರ ಹಾಕುವ ತುಡಿತ ಇದ್ದರೆ ಸಾಲದು ಸಾಹಿತ್ಯದ ಮೂಲ ಆಯಾಮಗಳನ್ನು ಕಲಿಯುವ ಮಿಡಿತಗಳೂ ಇರಬೇಕು. ಕ್ರಾಂತಿ ಎಂಬುದು ಅವ್ಯವಸ್ಥೆಯ ವಿರುದ್ಧವೇ ಹೊರತು ವ್ಯವಸ್ಥೆಯ ವಿರುದ್ಧವಲ್ಲ. ಮಾನವೀಯ ಮೌಲ್ಯ ಇರುವ, ಸಾಮಾಜಿಕ ಕಳಕಳಿಯಿರುವ ಎಲ್ಲಾ ಸಾಹಿತ್ಯಗಳಲ್ಲೂ ಕ್ರಾಂತಿಯ ಕಿಡಿ ಇದ್ದೇ ಇದೆ’ ಎಂದು ಹಿರಿಯ ಪಂಚಭಾಷಾ ಕವಿ ಮಹಮ್ಮದ್ ಬಡ್ಡೂರು ಅವರು ಹೇಳಿದರು. ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇವರು […]

ರಾಜ್ಯದ ಮುನ್ನಡೆಯ ಬಗ್ಗೆ ಸರ್ಕಾರದ ಚಿಂತನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Sunday, August 15th, 2021
basavaraja Bommai

ಬೆಂಗಳೂರು :  “75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಸೌಭಾಗ್ಯ ಒದಗಿಬಂದಿದೆ. ಕನ್ನಡ ನಾಡು, ನುಡಿ, ಸಾಹಿತ್ಯ, ಆಡಳಿತ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದೇಶದಲ್ಲೇ ಮಾದರಿಯಾಗಿದೆ. 75 ವರ್ಷ ನಡೆದು ಬಂದ ದಾರಿ, ಇನ್ನೂ ನಡೆಯಬೇಕಾದ ದಾರಿಯ ಬಗ್ಗೆ ಚಿಂತನೆ ಮಾಡಬೇಕಿದೆ. ನಮ್ಮ ಸರ್ಕಾರ ಕೂಡ ಅದೇ ದಿಕ್ಕಿನಲ್ಲಿ ಚಿಂತನೆ ಮಾಡುತ್ತಿದೆ”- ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು “ಕೋವಿಡ್ ಮಾರ್ಗಸೂಚಿ ಪ್ರಕಾರ, ಅಂತರ ಕಾಪಾಡಿಕೊಂಡು ಸ್ವಾತಂತ್ರ್ಯ ದಿನ […]

ಬಿಬಿಎಂಪಿ ಟ್ರಕ್ ಚಾಲಕನ ಎಡವಟ್ಟಿಗೆ ವಿದ್ಯಾರ್ಥಿಯೋರ್ವಳು ಬಲಿ

Tuesday, January 23rd, 2018
sahitya

ಬೆಂಗಳೂರು: ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಟ್ರಕ್ ಚಾಲಕನ ಎಡವಟ್ಟಿಗೆ ವಿದ್ಯಾರ್ಥಿಯೋರ್ವಳು ಬಲಿಯಾದ ಘಟನೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಜ.22 ರಂದು ಬೆಳಿಗ್ಗೆ ನಡೆದಿದೆ. ಖಾಸಗಿ ಕಾಲೇಜೊಂದರಲ್ಲಿ ಆರ್ಕಿಟೆಕ್ಚರ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಸಾಹಿತ್ಯ(24) ಮೃತ ದುರ್ದೈವಿ. ರಾಜಾಜೀನಗರದಲ್ಲಿ ವಾಸವಿರುವ ಸಾಹಿತ್ಯ, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಖಾಸಗಿ ಆರ್ಚಿಟೆಕ್ಟ್ ಕಂಪನಿಯೊಂದರಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದರು. ಬೆಳಿಗ್ಗೆ ಕಂಪನಿಗೆ ತಮ್ಮ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಬಿಬಿಎಂಪಿ ಟ್ರಕ್ ಆಕೆಯ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. […]

ಕಲೆ ಮತ್ತು ಸಾಹಿತ್ಯಗಳೆರಡರ ಕೌಶಲ ಪ್ರಕಾಶಕ್ಕೆ ಗಮಕ ಕಲೆ ಅವಕಾಶ ನೀಡುತ್ತದೆ

Friday, September 16th, 2016
kumbale

ಕುಂಬಳೆ: ನಾಡಿನ ಸಾಂಪ್ರದಾಯಿಕ ಕಲೆಯಾದ ಗಮಕ ಪ್ರಕಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಸಮೂಹ ಸ್ವ ಆಸಕ್ತಿಯಿಂದ ಮಾಡಬೇಕು. ಕಲೆ ಮತ್ತು ಸಾಹಿತ್ಯಗಳೆರಡರ ಕೌಶಲ ಪ್ರಕಾಶಕ್ಕೆ ಗಮಕ ಕಲೆ ಅವಕಾಶ ನೀಡುತ್ತದೆಯೆಂದು ಖ್ಯಾತ ಕಲಾವಿದ ಎಸ್ ಎನ್ ಪಂಜಾಜೆ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಹವ್ಯಕ ಭವನದಲ್ಲಿ ಇತ್ತೀಚೆಗೆ ನಡೆದ ೩ ದಿನಗಳ ಗಮಕ ಕಲಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಗಮಕ […]