ಸುರತ್ಕಲ್ ಬೀಚ್ ನಲ್ಲಿ ಸಮುದ್ರ ಪಾಲಾದ ಶಿವಮೊಗ್ಗ ಮೂಲದ ಬಾಲಕ

Tuesday, March 2nd, 2021
surathkal Beach

ಮಂಗಳೂರು :  ಶಿವಮೊಗ್ಗ ಮೂಲದ ಬಾಲಕನೋರ್ವ ಸುರತ್ಕಲ್  ಗುಡ್ಡೆಕೊಪ್ಲ ಬೀಚ್ನಲ್ಲಿ ಸಮುದ್ರ ಪಾಲಾದ ಘಟನೆ ಸೋಮವಾರ ನಡೆದಿದೆ. ಬಾಲಕನ ತಂದೆಯನ್ನು ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮುಬಾರಕ್ (15) ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ. ಈ ವೇಳೆ ಸಮುದ್ರ ವಿಹಾರಕ್ಕೆಂದು ಹೆತ್ತವರು ಹಾಗೂ ಸಂಬಂಧಿಕರೊಂದಿಗೆ ತೆರಳಿದ್ದ. ಸಮುದ್ರ ತೀರದಲ್ಲಿ ನೀರಿಗಿಳಿದು ಆಟವಾಡುತ್ತಿದ್ದಾಗ ಬೃಹತ್ ಗಾತ್ರದ ತೆರೆ ಅಪ್ಪಳಿಸಿ ಬಾಲಕ ಮುಬಾರಕ್ ನೀರು ಪಾಲಾಗಿದ್ದಾನೆ. ಈ ಸಂದರ್ಭ ಬಾಲಕನ ತಂದೆಯೂ ಅಲೆಯ ಸೆಳೆತಕ್ಕೆ ಸಿಲುಕಿದ್ದು, ತಕ್ಷಣ ಸ್ಥಳೀಯ […]

ಸುರತ್ಕಲ್ : ಬೀಚ್ ಗೆ ಇಳಿದ ನಾಲ್ವರು ನೀರುಪಾಲು, ಯುವತಿಗೆ ಗಂಭೀರ ಗಾಯ

Tuesday, January 21st, 2020
suratkal

ಮಂಗಳೂರು : ಇಲ್ಲಿಗೆ ಸಮೀಪದ ಎನ್ ಐಟಿಕೆ ಬೀಚಲ್ಲಿ ನೀರಾಟವಾಡುತ್ತಿದ್ದ ವೇಳೆ ನಾಲ್ವರು ನೀರು ಪಾಲಾಗಿದ್ದು ದೋಣಿಯಲ್ಲಿದ್ದ ಮೀನುಗಾರರು ಮೂವರ ರಕ್ಷಣೆ ಮಾಡಿದ್ದು ಈ ವೇಳೆ ಒಬ್ಬ ಯುವತಿ ಗಂಭೀರ ಗಾಯಗೊಂಡ ಘಟನೆ ದಿನಾಂಕ 20.01.2020 ರಂದು ನಡೆದಿದೆ. ಆಂಧ್ರ ಮೂಲದ ವಿದ್ಯಾರ್ಥಿಗಳ ತಂಡ ವಿಹಾರಕ್ಕೆ ಆಗಮಿಸಿದ್ದು ಈ ವೇಳೆ ಸಮುದ್ರದ ಆಳದ ಅರಿವಿಲ್ಲದೆ ಇಳಿದಿದ್ದು ಅಲೆಗಳ ಹೊಡೆತಕ್ಕೆ ಸಿಲುಕಿ ನಾಲ್ವರು ಕೊಚ್ಚಿಹೋಗಿದ್ದಾರೆ. ಈ ವೇಳೆ ಮೂವರನ್ನು ರಕ್ಷಿಸಿದ್ದು ಯುವತಿ ಗಂಭೀರ ಗಾಯಗೊಂಡಿದ್ದಾಳೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ […]