ಸಿಎಂ ತವರಿಗೆ ಸುವರ್ಣ ಭಾಗ್ಯ
Saturday, March 8th, 2014ಮೈಸೂರು: ಮೈಸೂರು ತಾಲೂಕು ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಒಂಬತ್ತೂವರೆ ತಿಂಗಳುಗಳಾಗಿದ್ದರೂ ಈವರೆಗೆ ಸ್ವಗ್ರಾಮಕ್ಕೆ ಭೇಟಿ ನೀಡಲು ಆಗಿಲ್ಲ. ಆದರೆ ಅಭಿವೃದ್ಧಿ ಭಾಗ್ಯ ದೊರೆತಿದೆ. ಸಿದ್ದರಾಮನಹುಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳನ್ನು ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ಅಭಿವೃದ್ಧಿಪಡಿಸಲು 9.60 ಕೋಟಿ ಬಿಡುಗಡೆ ಮಾಡಲಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯ 5ನೇ ಹಂತದಲ್ಲಿ ಮೈಸೂರು ತಾಲೂಕಿಗೆ ರಾಜ್ಯ ಸರ್ಕಾರ 6.86 ಕೋಟಿ ನಿಗದಿಪಡಿಸಿತ್ತು. ಇದಕ್ಕಾಗಿ ಒಟ್ಟು 32,845 ಜನಸಂಖ್ಯೆ ಇರುವ 16 ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ ಸಿದ್ದರಾಮನಹುಂಡಿ ಹಾಗೂ […]