ಸುಳ್ಯ : ವಿಧವೆ ಸೊಸೆಗೆ ಮರುಮದುವೆ ಮಾಡಿಸಿದ ಅತ್ತೆ

Tuesday, July 16th, 2019
Sushila

ಮಂಗಳೂರು :  ಸುಳ್ಯದಲ್ಲಿ ತನ್ನ ಮಗನ ಹೆಂಡತಿಗೆ  ಮರು ಮದುವೆ ಮಾಡಿಸುವ ಮೂಲಕ ಅತ್ತೆ ಸುದ್ದಿ ಯಾಗಿದ್ದಾರೆ. 3 ವರ್ಷಗಳ ಹಿಂದೆ ಸುಳ್ಯ ತಾಲ್ಲೂಕಿನ ಕಳಂಜ ಗ್ರಾಮದ ಗೋಪಾಲಕಜೆ ನಿವಾಸಿ ಶಾಂತಪ್ಪ ಗೌಡರ ಮಗಳು ಸುಶೀಲಾ ಅವರಿಗೆ ಅದೇ ಗ್ರಾಮದ ಪದ್ಮಯ್ಯ ಅವರ ಮಗ ಮಾಧವ ಎಂಬುವರ ಜತೆ ವಿವಾಹವಾಗಿತ್ತು. ಆದರೆ ಮದುವೆಯಾದ ವರ್ಷದೊಳಗೆ ರಸ್ತೆ ಅಪಘಾತವೊಂದರಲ್ಲಿ ಮಾಧವ ಮೃತಪಟ್ಟಿದ್ದರು. ಅದಾಗಲೇ ಗರ್ಭಿಣಿಯಾಗಿದ್ದ ಸುಶೀಲಾಗೆ ಪತಿ ಮಾಧವರ ಅಕಾಲಿಕ ಮರಣದಿಂದ ದಿಕ್ಕೇ ತೋಚದಂತಾಗಿತ್ತು. ಆದರೆ ಅತ್ತೆ ಕುಂಞಕ್ಕ […]

ಮಂಗಳೂರಲ್ಲಿ ಬೌದ್ಧ ಧರ್ಮಕ್ಕೆ 11 ಮಂದಿ ದಲಿತರ ಮತಾಂತರ

Thursday, March 15th, 2018
boudha-religion

ಮಂಗಳೂರು: ದಲಿತ ಸಮುದಾಯಕ್ಕೆ ಸೇರಿದ 11 ಮಂದಿ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲೂಕು ಸಂಘಟನಾ ಸಂಚಾಲಕ ಆನಂದ ಮಿತ್ತಬೈಲ್ ನೇತೃತ್ವದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕಡಬ ತಾಲೂಕಿನ ಆಲಂಕಾರು ತೋಟಂತಿಲ ಎಂಬಲ್ಲಿ ಪುಟ್ಟಣ್ಣ ಎಂಬವರು ನೂತನವಾಗಿ ನಿರ್ಮಿಸಿದ ‘ಮೈತ್ರಿ ವಿಹಾರ’ ಗೃಹ ಪ್ರವೇಶವನ್ನು ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾ(ರಿ.)ದ ಭಂತೇಜಿ ಮೈಸೂರು ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಪೂಜ್ಯ ಸುಗತಪಾಲ ಭಂತೇಜಿ ನೆರವೇರಿಸಿದರು. ಇದೇ ಸಂದರ್ಭ ಸುಗತಪಾಲ […]

ಆಸ್ಪತ್ರೆಯಲ್ಲಿ ಮಹಿಳೆಯೊರ್ವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Friday, August 12th, 2016
Susheela

ಮಂಗಳೂರು: ನಗರದ ಆಸ್ಪತ್ರೆಯಲ್ಲಿ ಮಹಿಳೆಯೊರ್ವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿಂದು ನಡೆದಿದೆ. ಸುಶೀಲಾ (67) ಎಂಬ ಅಸ್ತಮಾ ರೋಗಿ ಆತ್ಮಹತ್ಯೆಗೆ ಶರಣಾಗಿರುವ ವೃದ್ಧೆ ಎಂದು ತಿಳಿದುಬಂದಿದೆ. ಅಸ್ತಮಾ ಕಾಯಿಲೆಯಿಂದ ನರಳುತ್ತಿದ್ದ ಸುಶೀಲಾ ಅವರು ನಗರದ ಕೆ. ಎಸ್. ರಾವ್ ರಸ್ತೆಯಲ್ಲಿರುವ ಜಯಶ್ರೀ ಆಸ್ಪತ್ರೆಗೆ ಚಿಕಿತ್ಸೆಗಾಗಿ ನೆನ್ನೆ ದಾಖಲಾಗಿದ್ದರು. ರಾತ್ರಿ 11 ಗಂಟೆಯ ವೇಳೆಗೆ ಚಿಕಿತ್ಸೆಯನ್ನು ಪಡೆದಿದ್ದಾರೆ. ಇಂದು ಬೆಳಗ್ಗೆ ನರ್ಸ್‌ಗಳು ಚಿಕಿತ್ಸೆ ನೀಡಲು ಬಂದಾಗ ಬಾಗಿಲು ತೆರೆದಿಲ್ಲ. ಹೀಗಾಗಿ ಅನುಮಾನಗೊಂಡು ಬಾಗಿಲು ಮುರಿದು […]