ಜಿಪಿಎಲ್ ಉತ್ಸವದ ಕ್ರಿಕೆಟ್ ಸರಣಿಯ ಆಟಗಾರರ ಹರಾಜು

Tuesday, August 13th, 2019
GPL

ಮಂಗಳೂರು   :  ಫುಜ್ಲಾನಾ ಜಿಎಸ್ ಬಿ ಪ್ರೀಮಿಯರ್ ಲೀಗ್ (ಜಿಪಿಎಲ್) ಹರಾಜು ಪ್ರಕ್ರಿಯೆ 2020 ಮಂಗಳೂರಿನ ಟಿವಿ ರಮಣ್ ಪೈ ಕನ್ವೆನ್ಷನ್ ಸಭಾಂಗಣದಲ್ಲಿ ನಡೆಯಿತು. ಒಟ್ಟು ನೋಂದಾಯಿತ 366 ಆಟಗಾರರಲ್ಲಿ 272 ಮಂದಿ ಆಟಗಾರರನ್ನು ಒಟ್ಟು 16 ತಂಡಗಳ ಮಾಲೀಕರು ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಮಾಡುವ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಂಡರು. ಒಟ್ಟು 5 ಲಕ್ಷದ 18 ಸಾವಿರ ರೂಪಾಯಿ ಮೊತ್ತವನ್ನು 16 ತಂಡಗಳ ಮಾಲೀಕರು ವಿನಿಯೋಗಿಸಿದ್ದಾರೆ. ರಾಕೇಶ್ ಕಾಮತ್ ಎನ್ನುವ ಆಟಗಾರ ಅತೀ ಹೆಚ್ಚು ಮೊತ್ತ […]

ಡಿ ವೇದವ್ಯಾಸ ಕಾಮತ್ : ನೆರೆ ಸಂತ್ರಸ್ತರ ನೆರವಿಗೆ ಸ್ಪಂದಿಸಿ

Tuesday, August 13th, 2019
vedhavyas-kamath

ಮಂಗಳೂರು : ಕರಾವಳಿ ಸೇರಿದಂತೆ ರಾಜ್ಯದ ಜನ ಅತೀವೃಷ್ಠಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಜನತೆ ಅವರ ನೆರವಿಗೆ ಸ್ಪಂದಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ. ವಿಪರೀತ ಮಳೆ ಮತ್ತು ನೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ಬಹುಭಾಗ ಜಲಾವೃತವಾಗಿರುವುದರಿಂದ ಲಕ್ಷಾಂತರ ಜನರು ನಿತ್ಯಸಂಕಟವನ್ನು ಅನುಭವಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಲು ಶಾಸಕ ವೇದವ್ಯಾಸ ಕಾಮತ್ ಹಾಗೂ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ನೆರೆ […]

ಹಾರ ತುರಾಯಿಗಳ ಸನ್ಮಾನ ಸಾರ್ಥಕತೆಯನ್ನು ಪಡೆಯುವುದು ಕಡಿಮೆ : ಶಾಸಕ ವೇದವ್ಯಾಸ ಕಾಮತ್

Tuesday, June 12th, 2018
chetana-school

ಮಂಗಳೂರು : ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮತ್ತು ಭುವನೇಂದ್ರ ಸ್ವಾಮಿ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್ ಜಂಟಿಯಾಗಿ ಮಂಗಳೂರು ನಗರ ದಕ್ಷಿಣದ ನೂತನ ಶಾಸಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಸೋಮವಾರ ಬೆಳಿಗ್ಗೆ ಹಮ್ಮಿಕೊಂಡಿತ್ತು. ಮಂಗಳೂರಿನ ವಿಠೋಭ ದೇವಸ್ಥಾನ ರಸ್ತೆಯಲ್ಲಿರುವ ಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಮಾಜಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಸಾಮಾನ್ಯವಾಗಿ ಯಾವುದೇ ಸನ್ಮಾನ ಕಾರ್ಯಕ್ರಮ ಹಾರ ತುರಾಯಿಗಳ ಅಬ್ಬರದಲ್ಲಿಯೇ […]