ಸೈನಿಕನ ಮನೆಯವರೊಂದಿಗೆ ದೀಪಾವಳಿ ಆಚರಿಸಿದ ಬಿಜೆಪಿ ಮಂಗಳೂರು ಮಂಡಲ

Monday, November 16th, 2020
MudipuBJP

ಮಂಗಳೂರು : ಮುಡಿಪು ಹೂ ಹಾಕುವ ಕಲ್ಲಿನಲ್ಲಿರುವ ಮನೋಜ್ ಎಂಬವರು ಗಡಿ ಭದ್ರತಾ ಪಡೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಮ್ಮೆಯ ಸೈನಿಕರ ಮನೆಯಲ್ಲಿ ಅವರ ಹೆತ್ತವರನ್ನು ಸನ್ಮಾನಿಸಿ ಸಿಹಿತಿಂಡಿಗಳನ್ನು ಹಂಚುವ ಮೂಲಕ ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ದೀಪಾವಳಿಯನ್ನು ಆಚರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಮಂಡಲಾಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್, ಪ್ರಧಾನ ಕಾರ್ಯದರ್ಶಿಗಳಾದ ಹೇಮಂತ್ ಶೆಟ್ಟಿ, ನವೀನ್ ಪಾದಲ್ಪಾಡಿ, ಕಾರ್ಯದರ್ಶಿ ಸುಜಿತ್ ಮಾಡೂರು, ಮಾದ್ಯಮ ಪ್ರಮುಖ್ ಪುರುಷೋತ್ತಮ ಕಲ್ಲಾಪು, ಕುರ್ನಾಡ್ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಲೋಹಿತ್ […]

ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ಕನ್ನಡ ಪಠ್ಯದಲ್ಲಿ ಸೈನಿಕರ ಅವಹೇಳನ

Thursday, August 10th, 2017
baraguru

ಮಂಗಳೂರು : ಬರಗೂರು ರಾಮಚಂದ್ರಪ್ಪ ಅವರ `ಯುದ್ಧ ಒಂದು ಉದ್ಯಮ’ ಲೇಖನ ಪದಚಿತ್ತಾರ  ಪ್ರಸಕ್ತ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಪ್ರಥಮ ಬಿಸಿಎ ಕನ್ನಡ ಪಠ್ಯದಲ್ಲಿ ಗಡಿ ಕಾಯುವ ಸೈನಿಕರನ್ನು ಅತ್ಯಾಚಾರಿಗಳೆಂದು ಬಿಂಬಿಸಿರುವ ಕುರಿತು ತೀವ್ರವಾಗಿ  ಖಂಡನೆ ವ್ಯಕ್ತವಾಗಿದೆ. ಬರಗೂರು ಅವರು ತಮ್ಮ ಸೈನಿಕ ಸ್ನೇಹಿತನೊಬ್ಬನ ಅನುಭವವನ್ನು ಈ ಲೇಖನದಲ್ಲಿ  ಕೆಳಗಿನಂತೆ ಉಲ್ಲೇಖಿಸಿದ್ದಾರೆ. ಗಡಿ ಪ್ರದೇಶದಲ್ಲಿ ಪರಸ್ಪರ ಕೌರ್ಯ ಪ್ರದರ್ಶನ ಮಾಡುವ ಪರಾಕ್ರಮಿಗಳು ಇದ್ದೆ ಇರುತ್ತಾರೆಂಬುದು ನನ್ನ ಗೆಳೆಯನ ಅನುಭವದ ಅಭಿಪ್ರಾಯ. ಪರಸ್ಪರ ಮುತ್ತಿಗೆ ನಡೆದಾಗ ಗಡಿಯ ಗ್ರಾಮಗಳಲ್ಲಿ […]

ಕಾರ್ಗಿಲ್‌ ಹುತಾತ್ಮ ಸೈನಿಕರಿಗೆ ಮೋಂಬತ್ತಿ ಬೆಳಗಿ ನಮನ

Thursday, July 27th, 2017
Kargil

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಶ್ರೀ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ ಮತ್ತು ಲಯನ್ಸ್‌ ಜಿಲ್ಲೆ 317-ಡಿ ಸಹಯೋಗದಲ್ಲಿ ಬುಧವಾರ ನಗರದ ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್‌ ಹೋರಾಟದಲ್ಲಿ ಹುತಾತ್ಮರಾದ ಸೈನಿಕರಿಗೆ ಮೋಂಬತ್ತಿ ಬೆಳಗಿ, ಹೂ ಹಾಕಿ ನಮನ ಸಲ್ಲಿಸಲಾಯಿತು. ಕಾರ್ಗಿಲ್‌ ಹೋರಾಟದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸುವುದು ದೇಶವಾಸಿಗಳಾದ ಪ್ರತಿಯೊಬ್ಬರ ಕರ್ತವ್ಯ. ಸೈನಿಕರ ತ್ಯಾಗ, ಪರಿಶ್ರಮವನ್ನು ನೆನಪಿಸಿಕೊಂಡು ಗೌರವಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ವಿಧಾನ ಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಕ್ಯಾ| […]