ಕೋಮುವಾದದ ವಿರುದ್ಧ ದ.ಕ. ಜಿಲ್ಲಾ ಸೌಹಾರ್ದ ಸಮಾವೇಶ
Tuesday, December 13th, 2016ಮಂಗಳೂರು: ಸೌಹಾರ್ದದ ನೆಲೆಯಾಗಿದ್ದ ಕರಾವಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೋಮುವಾದ ತಳವೂರಿದ್ದು, ಕಾಂಗ್ರೆಸ್ಸಿಗಾಗಲೀ, ಪ್ರಾದೇಶಿಕ ಪಕ್ಷಗಳಿಗಾಗಲೀ ಇಂತಹ ದಾಳಿಗಳನ್ನು ತಡೆಯುವ ಶಕ್ತಿಯಿಲ್ಲ. ಏಕೆಂದರೆ ಅವುಗಳು ಅಧಿಕಾರಕ್ಕಾಗಿ ಕೋಮುವಾದಿ ಶಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿವೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದ್ದಾರೆ. ನಗರದ ಪುರಭವನದಲ್ಲಿ ಸಿಪಿಐ(ಎಂ) ದ.ಕ.ಜಿಲ್ಲಾ ಸಮಿತಿ ಏರ್ಪಡಿಸಿದ್ದ ಕೋಮುವಾದದ ವಿರುದ್ಧ ದ.ಕ. ಜಿಲ್ಲಾ ಸೌಹಾರ್ದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬೌದ್ಧಿಕ ಕೇಂದ್ರಗಳಾದ ವಿಶ್ವವಿದ್ಯಾನಿಲಯಗಳನ್ನು ನಾಶಗೊಳಿಸುವ ಪ್ರಯತ್ನ ನಡೆಯುತ್ತಿದೆ. […]