ನಗರದಲ್ಲಿ ಬಸ್ ಸಂಚಾರಿ ಮಾರ್ಗ ಬದಲಾವಣೆ, ಸಾರ್ವಜನಿಕರಿಂದ ದೂರು

Thursday, July 15th, 2021
Bus Route

ಮಂಗಳೂರು  : ನಗರದಲ್ಲಿ ಬಸ್ ಸಂಚಾರಿ ಮಾರ್ಗ ಬದಲಾವಣೆಯ ಕುರಿತು ಸಾರ್ವಜನಿಕವಾಗಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಟೇಟ್ ಬ್ಯಾಂಕ್ ಖಾಸಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಸಿಬ್ಬಂದಿಗಳಲ್ಲಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ‌ಶಾಸಕ ಕಾಮತ್, ಬಸ್ ಮಾಲಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ಪಾಲ್ಗೊಂಡು ಮಾರ್ಗ ಬದಲಾವಣೆಯ ಕುರಿತು ಒಪ್ಪಿಗೆ ಸೂಚಿಸಿದ ಬಳಿಕವೇ ಬಸ್ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ವರೆಗೆ […]

ಸ್ಟೇಟ್ ಬ್ಯಾಂಕ್‌ ಬಸ್‌ ನಿಲ್ದಾಣ ಅವ್ಯವಸ್ಥೆಗಳ ಆಗರ

Thursday, April 5th, 2018
state-bank

ಮಂಗಳೂರು: ನಗರದಲ್ಲಿ ಬಹುತೇಕ ಭಾಗಗಳಿಗೆ ಖಾಸಗಿ ಹಾಗೂ ಸರಕಾರಿ ಬಸ್‌ಗಳು ಸಂಚಾರ ಪ್ರಾರಂಭಿಸುವುದು ಸ್ಟೇಟ್‌ಬ್ಯಾಂಕ್‌ನಿಂದ. ಆದರೆ ಇಲ್ಲಿನ ದುಸ್ಥಿಃತಿ ಹೇಳತೀರದ್ದು. ಗಬ್ಬುನಾತ ದಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಸರ್ವಿಸ್‌ ಬಸ್‌ ನಿಲ್ದಾಣಕ್ಕೆ ಕಾಲಿಡುತ್ತಿದ್ದಂತೆ ದುರ್ನಾತ, ರಸ್ತೆಯ ಗುಂಡಿಗಳು, ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌, ಸಾರ್ವಜನಿಕ ಸ್ಥಳದಲ್ಲೇ ಮೂತ್ರ ವಿಸರ್ಜನೆ ಹೀಗೆ ಇಲ್ಲಿನ ನೂರಾರು ಸಮಸ್ಯೆಗಳು ಕಾಣಸಿಗುತ್ತವೆ. ಆಡಳಿತ ವ್ಯವಸ್ಥೆ ಇದನ್ನು ಕಂಡರೂ ಕಾಣದಂತೆ ಮೌನವಾಗಿದೆ. ಈ ಭಾಗದಲ್ಲಿ ನಿತ್ಯ ಓಡಾಡುವ ಜನರ ಸಮಸ್ಯೆ ಕೇಳುವವರು […]

ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಬೀದಿ ವ್ಯಾಪಾರಸ್ಥರ ತೆರವು

Saturday, December 31st, 2016
MCC

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಬಳಿ ವ್ಯಾಪಾರ ನಡೆಸುತ್ತಿದ್ದ ಬೀದಿ ವ್ಯಾಪಾರಸ್ಥರನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ನಗರದ ಸ್ಟೇಟ್ ಬ್ಯಾಂಕ್ ಬಳಿ ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳ ತರಕಾರಿ, ಹಣ್ಣು ಹಂಪಲುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಮುಂದೆ ಈ ಪ್ರದೇಶದಲ್ಲಿ ವ್ಯಾಪಾರ ನಡೆಸದಂತೆ ಎಚ್ಚರಿಕೆ ನೀಡಿದರು. ಮಂಗಳೂರು ಮಹಾನಗರ ಪಾಲಿಕೆಯಿಂದ ನಗರದ ಟೌನ್ ಹಾಲ್ ಬಳಿ ಬೀದಿ ವ್ಯಾಪಾರಿಗಳಿಗೆ ಸ್ಥಳ ನಿಗದಿಪಡಿಸಲಾಗಿದೆ. ಅಲ್ಲಿಗೆ ತೆರಳದೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಅಧಿಕಾರಿಗಳು ಈ ಕಾರ್ಯಚರಣೆ […]

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಸ್ಥಳಾಂತರ ಎಂಬ 40 ಕೋಟಿಗಳಷ್ಟು ಹೆಚ್ಚುವರಿ ಹೊರೆ ಬೇಕಿದೆಯೇ

Monday, September 14th, 2015
Dc Complex

ಮಂಗಳೂರು : ಯಾರಾದರೂ ಒಬ್ಬ ನಾಗರಿಕ ಬಂದು ನಿಮ್ಮ ಬಳಿ ದಯವಿಟ್ಟು ಜಿಲ್ಲಾಧಿಕಾರಿ ಕಚೇರಿಯನ್ನು ಮಂಗಳೂರಿನಿಂದ ಹೊರಗೆ ಎಲ್ಲಿಯಾದರೂ ದೂರ ಶಿಫ್ಟ್ ಮಾಡಿಬಿಡಿ. ನಮಗೆ ಇಲ್ಲಿ ಬರಲು ತುಂಬಾ ಕಷ್ಟವಾಗುತ್ತದೆ ಎಂದು ಬರೆದು ಕೊಟ್ಟಿದ್ದಾನಾ ಅಥವಾ ಮಂಗಳೂರು ಹೃದಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಗೆ ಬಂದರೆ ಹೆಜ್ಜೆಗಳ ಅಂತರದಲ್ಲಿ ಸಿಗುವ ಅಷ್ಟೂ ಕಚೇರಿಗಳನ್ನು ತೆಗೆದು ಬೇರೆಡೆ ಹಾಕಿದರೆ ಅದಕ್ಕಿಂತ ಬೇರೆ ಉಪಕಾರ ಇಲ್ಲ ಎಂದು ಮಂಗಳೂರಿನ ನಾಗರಿಕನಿಗೆ ಅನಿಸುತ್ತಿದೆಯಾ? ಅಥವಾ ಪುತ್ತೂರು, ಬೆಳ್ತಂಗಡಿ, ಸುಳ್ಯ ದ ಜನರಿಗೆ […]

ಸ್ಟೇಟ್ ಬ್ಯಾಂಕ್ ಬಳಿ ಓಮ್ನಿ ಕಾರಿಗೆ ಸಾರ್ಟ್ ಸರ್ಕ್ಯೂಟ್ ; ತಪ್ಪಿದ ಅನಾಹುತ

Wednesday, September 25th, 2013
Car-fair

ಮಂಗಳೂರು : ನಗರದ ಸ್ಟೇಟ್ ಬ್ಯಾಂಕ್  ಬಳಿ ಇರುವ ಹ್ಯಾಮಿಲ್ಟನ್ ಕಟ್ಟಡದ ಮುಂಬಾಗದಲ್ಲಿ ನಿಲ್ಲಿಸಿದ್ದ ಓಮ್ನಿ ಕಾರನ್ನು ಸಾರ್ಟ್ ಮಾಡುವಾಗ ಸಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡ ಘಟನೆ ಮಂಗಳವಾರ ಸಂಜೆ 3.30ಕ್ಕೆ ನಡೆದಿದೆ. KA 19 N 9475 ನಂಬರಿನ ಓಮ್ನಿ ಕಾರಿನಲ್ಲಿ ಕಾರಿನ ಮಾಲಿಕ ಮಹಮ್ಮದ್ ಪೈಗಂಬರ್ ರವರು ಕಂಕನಾಡಿಯಿಂದ ಮಂಗಳೂರಿನ ಹ್ಯಾಮಿಲ್ಟನ್ ಕಟ್ಟಡದ ವಕೀಲರಲ್ಲಿಗೆ ನೋಟರಿಗಾಗಿ ಬಂದಿದ್ದರು ಕಾರಿನ ಎಲ್ ಪಿಜಿ ಮುಗಿಯುವ ಹಂತದಲ್ಲಿದ್ದುದರಿಂದ ಮೂರು ಲೀಟರ್ ಪೆಟ್ರೋಲ್ ತುಂಬಿಸಿದ್ದರು. ನೋಟರಿ ಮುಗಿಸಿ ವಾಪಾಸಾಗುವಾಗ ಅವರ […]

ಡಿವೈಎಫ್ ಐ ನ ನೇತೃತ್ವದಲ್ಲಿ ವಿವಿದೋದ್ದೇಶ ಸಹಕಾರಿ ಸಂಘದ ಮೇಲೆ ಹೂಡಿಕೆದಾರರ ಮುತ್ತಿಗೆ

Thursday, May 16th, 2013
Cooperative society

ಮಂಗಳೂರು : ನಗರದ ಸ್ಟೇಟ್ ಬ್ಯಾಂಕ್ ನ ನೆಲ್ಲಿಕಾಯಿ ರಸ್ತೆ ಬಳಿಯ ವಿವಿದೋದ್ದೇಶ ಸಹಕಾರಿ ಸಂಘವೊಂದು ತನ್ನ ಹೂಡಿಕೆದಾರರಿಗೆ ಹಣ ಮರಳಿಸದೆ ಮೋಸ ಎಸಗಿರುವುದರಿಂದ  ಹೂಡಿಕೆದಾರರು  ಡಿವೈಎಫ್ ಐ ನ ನೇತೃತ್ವದಲ್ಲಿ ಸೊಸೈಟಿ ಮೇಲೆ ಮುತ್ತಿಗೆ ಹಾಕಿದ ಘಟನೆ ಗುರುವಾರ ನಡೆದಿದೆ. ಉದ್ಯಮಶೀಲ ವಿವಿದೊದ್ದೇಶ ಸಂಘ ಎಂಬ ಹೆಸರಿನ ಸಹಕಾರಿ ಸಂಘವು ನಗರದ ಪಂಪ್ ವೆಲ್ ಬಳಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದ್ದು ಪಿಗ್ಮಿ ಹೆಸರಲ್ಲಿ ಹಲವಾರು ಜನರಿಂದ ಹಣ ಸಂಗ್ರಹಿಸುತ್ತಿದ್ದರೆನ್ನಲಾಗಿದೆ. ಗ್ರಾಹಕರು ತಾವು ತೊಡಗಿಸಿದ ಹಣವನ್ನು […]