ಭಾರೀ ಮಳೆ – ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ

Monday, July 15th, 2024
kUMARADHARA

ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಪಶ್ಚಿಮ ಘಟ್ಟ ಪ್ರದೇಶ, ಕುಮಾರಪರ್ವತ ಸೇರಿದಂತೆ ಸುಬ್ರಹ್ಮಣ್ಯ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಬಾರಿಯ ಮಳೆಗೆ ಎರಡನೇ ಸಲ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಕುಮಾರಧಾರ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದ್ದು, ಕುಮಾರಧಾರ ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಸೂಚಿಸಲಾಗಿದೆ. ನಿರಂತರ ಸುರಿಯುತ್ತಿರುವ ಮಳೆಗೆ ಕುಮಾರಧಾರ ತುಂಬಿ ಹರಿಯುತ್ತಿದೆ. ಅಲ್ಲದೇ ಕುಮಾರಧಾರ ಉಪನದಿ ದರ್ಪಣ ತೀರ್ಥ […]

ಸುಬ್ರಹ್ಮಣ್ಯದಲ್ಲಿ ಕೆಂಬಣ್ಣಕ್ಕೆ ತಿರುಗಿ ತುಂಬಿ ಹರಿಯುತ್ತಿರುವ ಕಲ್ಮಕಾರು ಹೊಳೆ

Saturday, August 10th, 2019
subramanya

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಘಟ್ಟದ ಮೇಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ನದಿ ತೀರದ ಹಲವು ಮನೆಗಳು ಮುಳುಗುವ ಸ್ಥಿತಿಯಲ್ಲಿವೆ. ಕಲ್ಮಕಾರು ಭಾಗದಲ್ಲಿ ಬರೆ ಜರಿದು ಮನೆಗೆ ಹಾನಿಯಾಗಿದೆ. ಪ್ರವಾಹಕ್ಕೆ ಕುಮಾರಧಾರಾ ಸ್ನಾನಘಟ್ಟ ಶುಕ್ರವಾರವೂ ಸಂಪೂರ್ಣ ಮುಳುಗಡೆಗೊಂಡಿತ್ತು. ಗುರುವಾರ ಮುಳುಗಡೆಗೊಂಡಿದ್ದ ಪಕ್ಕದ ದರ್ಪಣ ತೀರ್ಥ ನದಿಯ ಸುಬ್ರಹ್ಮಣ್ಯ-ಮಂಜೇಶ್ವರ ಸಂಪರ್ಕ ಸೇತುವೆ ರಾತ್ರಿ ಸಂಚಾರಕ್ಕೆ ಮುಕ್ತವಾಗಿತ್ತು. ಶುಕ್ರವಾರ ಬೆಳಗ್ಗೆ ಮತ್ತೆ ಮುಳುಗಡೆಗೊಂಡಿದೆ. ಪಕ್ಕದಲ್ಲಿ ನದಿಯ ನೆರೆ ನೀರು ರಸ್ತೆಗೆ ಹರಿದು ಸಂಚಾರ ವ್ಯತ್ಯಯಗೊಂಡಿತು. ಸುಬ್ರಹ್ಮಣ್ಯ-ಕಾಣಿಯೂರು-ಪುತ್ತೂರು […]