ಸುಪ್ರೀಂಕೋರ್ಟಿನಲ್ಲಿ ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ

Wednesday, November 13th, 2019
Anarha-shasakaru

ನವದೆಹಲಿ : ಇಂದು ಸುಪ್ರೀಂ ಕೋರ್ಟಿನಲ್ಲಿ ಅನರ್ಹ 17 ಮಂದಿ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ರಾಷ್ಟ್ರ ರಾಜಕಾರಣಕ್ಕೆ ಮಹತ್ವದ ದಿನವಾಗಿದೆ. ರಾಜಕೀಯ ಇತಿಹಾಸದಲ್ಲಿಯೂ ಮೈಲುಗಲ್ಲಾಗಿ ಉಳಿಯುವ ದಿನ. ಅನರ್ಹತೆ ಪಟ್ಟ ಹೊತ್ತ 17 ಮಂದಿ ಶಾಸಕರ ಭವಿಷ್ಯ ನಿರ್ಧಾರ ಆಗುವ ದಿನ. ಅನರ್ಹ ಶಾಸಕರ ಅಂತಿಮ ತೀರ್ಪಿಗೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಇಂದು 17 ಮಂದಿ ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ. ಸ್ಪೀಕರ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತೀರ್ಪು ಪ್ರಕಟ ಆಗಲಿದೆ. […]

ಮಾತನಾಡಿಯೇ ಸಮಯ ವ್ಯರ್ಥ ಮಾಡಿದ ಸದನ – ರಾಜ್ಯಪಾಲರ ಡೆಡ್ ಲೈನ್ ಗೆ ಬೆಲೆಯೇ ನೀಡದ ಸ್ಪೀಕರ್

Friday, July 19th, 2019
Kswamy

ಬೆಂಗಳೂರು: ರಾಜ್ಯಪಾಲರು ಎರಡನೇ ಬಾರಿಗೆ ಡೆಡ್ ಲೈನ್ ನೀಡಿದ್ದರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ವಿಶ್ವಾಸ ಮತಯಾಚನೆ ಮಾಡಲಿಲ್ಲ. ಇನ್ನು ರಾತ್ರಿಯಾಗಿದ್ದರಿಂದ ಸ್ಪೀಕರ್ ರಮೇಶ್ ಕುಮಾರ್ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ರಾಜ್ಯಪಾಲರ ನಿರ್ದೇಶನ ಹಿನ್ನೆಲೆಯಲ್ಲಿ ಇಂದು ತಡರಾತ್ರಿಯಾದರು ಪರವಾಗಿಲ್ಲ ಎಂದು ಬಿಜೆಪಿ ಮೌನವಾಗಿ ಕಳುತಿತ್ತು. ಆದರೆ ತಡವಾಗಿದೆ ಅಂತ ಸ್ಪೀಕರ್ ರಮೇಶ್ ಕುಮಾರ್ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ಮಾಜಿ ಮುಖ್ಯಮಂತ್ರಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರು ಇನ್ನು ಮಾತನಾಡುವ ಶಾಸಕರು ಸಂಖ್ಯೆ ಜಾಸ್ತಿಯಿದೆ. ಹೀಗಾಗಿ […]

ಹಂಗಾಮಿ ಸ್ಪೀಕರ್ ಬೋಪಯ್ಯ ಉಸ್ತುವಾರಿಯಲ್ಲಿ ನೂತನ ಶಾಸಕರ ಪ್ರಮಾಣ ವಚನ

Friday, May 18th, 2018
KG Bopaiah

ಬೆಂಗಳೂರು: ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಶುಕ್ರವಾರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೆಜಿ ಬೋಪಯ್ಯ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಬೋಪಯ್ಯ ಅವರ ಉಸ್ತುವಾರಿಯಲ್ಲಿ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಹಾಗೂ ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದೆ. ವಿಶ್ವಾಸ ಮತಯಾಚನೆಯನ್ನು ರಹಸ್ಯ ಮತದಾನದ ಮೂಲಕ ಮಾಡಬೇಕೆಂದು ಬಿಜೆಪಿ ಬಯಸಿತ್ತು. ಆದರೆ, ಸುಪ್ರೀಂ ಕೋರ್ಟ್‌ ತನ್ನ ಲಿಖಿತ ಆದೇಶದಲ್ಲಿ, ನಾಳೆ ನಡೆಯುವ ವಿಶ್ವಾಸ ಮತ ಯಾಚನೆಯಲ್ಲಿ […]

ಡಿ.ಕೆ. ಶಿವಕುಮಾರ್ 224ನೇ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ

Thursday, June 13th, 2013
DK Shivakumar

ಬೆಂಗಳೂರು:  ಇಂದು ಸ್ಪೀಕರ್ ಕಚೇರಿಯಲ್ಲಿ 224ನೇ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಶಿವಕುಮಾರ್ ಅವರಿಗೆ ಬೆಳಗ್ಗೆ 10ಗಂಟೆಯ ಸುಮಾರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ವಿಧಾನಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ತಮಗೆ ಸಚಿವ ಸ್ಥಾನ ತಪ್ಪಿಸಲು, ಸ್ವಾತಂತ್ರ್ಯ ಹೋರಾಟಗಾರರು, ಬುದ್ಧಿಜೀವಿಗಳು ಹಾಗು ಮಾಧ್ಯಮಗಳು ಸಂಚು ರೂಪಿಸಿದ್ದವು ಎಂದು ಆರೋಪಿಸಿದರು. ಅಲ್ಲದೆ ಮೊದಲ ಹಂತದಲ್ಲಿ ಸಚಿವ ಸ್ಥಾನ ತಪ್ಪಿಸುವುದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ ಎಂದರು. ಇನ್ನು ಡಿಕೆಶಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ […]