ಜನಜಾಗೃತಿಗಾಗಿ ನದಿ ಪರಿಸರದಲ್ಲಿ ನಡೆಸುವ ಸ್ವಚ್ಚತಾ ಕಾರ್ಯಕ್ರಮ : ನಾಲ್ಕನೇ ಹಂತದ ಸಾಮೂಹಿಕ ಶ್ರಮದಾನ

Monday, February 24th, 2020
jana-jagruti

ಮಂಗಳೂರು : ದಿನಾಂಕ : 23.02.2020, ಭಾನುವಾರ, ಬೆಳಿಗ್ಗೆ 8.30 ರಿಂದ ಆರಂಭವಾಗಿ ಅಪರಾಹ್ನ ಸಹಭೋಜನದೊಂದಿಗೆ ಸಮಾರೋಪಗೊಂಡಿತು. ನದಿ ಪರಿಸರ ಸಂರಕ್ಷಣೆಗಾಗಿ ಉಳ್ಳಾಲ ನದಿ ತೀರ ಪ್ರದೇಶಗಳ ಸರ್ವಧರ್ಮೀಯ ನಾಗರಿಕರು (ಉಳಿಯ, ಹೊಯಿಗೆ, ಕಟ್ಟತ್ತಲೆ, ಮಾರ್ಗತಲೆ, ಕಕ್ಕೆತೋಟ, ಪಾಂಡೇಲ್ಪಕ್ಕ (ಬಂಡಸಾಲೆ), ಸೇನೆರೆಬೈಲು, ಕೋಡಿ ಮತ್ತು ಕೋಟೆಪುರ ಒಗ್ಗಟ್ಟಿನಿಂದ ಮುಂದೆ ಬಂದಿದ್ದು, ನದಿ ನಾಶದಿಂದ ಸಂಭವಿಸಿರುವ ಇಲ್ಲಿನ ಮುಖ್ಯ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರವನ್ನು ಕಂಡುಕೊಳ್ಳುವ ಪ್ರಕ್ರಿಯೆಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ, ಇದರ ಜತೆಗೆ ನದಿ ತಟದ […]

ಬಂಟ್ವಾಳ : ತಹಶೀಲ್ದಾರ್ ಕಾರ್ಯನಿರ್ವಹಕ ದಂಡಾಧಿಕಾರಿ ನೇತೃತ್ವದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮ

Wednesday, October 2nd, 2019
rashmi

ಬಂಟ್ವಾಳ : ಪ್ರತೀದಿನ ಕೈಯಲ್ಲಿ ಪೆನ್ನು ಹಿಡಿದುಕೊಂಡು ದಂಡಾಧಿಕಾರಿಯ ಖದರ್ ನಲ್ಲಿ ಕಾಣಿಸಿಕೊಳ್ಳುವ ಬಂಟ್ವಾಳ ತಹಶೀಲ್ದಾರರ ರಶ್ಮೀ ಎಸ್.ಆರ್ ರವರು, ಇಂದು ಬೆಳ್ಳಂಬೆಳಿಗ್ಗೆ ಕೈಯಲ್ಲಿ ಪೊರಕೆ ಹಿಡಿದುಕೊಂಡು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗಾಂಧಿ ಜಯಂತಿಯ ಅಂಗವಾಗಿ ಬುಧವಾರ ಬೆಳ್ಳಂಬೆಳಿಗ್ಗೆ ಕೈಯಲ್ಲಿ ಪೊರಕೆ ಹಿಡಿದುಕೊಂಡು ಮಿನಿವಿಧಾನ ಸೌಧದಲ್ಲಿ ಕಾಣಿಸಿಕೊಂಡ ತಹಶೀಲ್ದಾರ್ ರಶ್ಮೀ ಎಸ್.ಆರ್ ರವರು, ಸ್ವತಃ ತಾವೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಅವರ ಜೊತೆ ತಾಲೂಕು ಕಚೇರಿಯ ಇತರ ಉದ್ಯೋಗಸ್ಥರೂ ಕೈ ಜೋಡಿಸಿದರು. ಅಧಿಕಾರಿ- ಸಿಬ್ಬಂದಿಗಳೆಂಬ ಬೇಧ ಇಲ್ಲದೇ […]