ಹದಿನಾಲ್ಕು ವರ್ಷಗಳಿಂದ ಮನೆಯವರಿಂದ ದೂರವಾಗಿದ್ದ ವ್ಯಕ್ತಿ ಮರಳಿ ಮನೆ ಸೇರಿದ!
Monday, December 16th, 2024ಮಂಗಳೂರು : ಹದಿನಾಲ್ಕು ವರ್ಷಗಳ ಹಿಂದೆ ತನ್ನ ಕುಟುಂಬದಿಂದ ದೂರವಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಮನೆಸೇರಿದ ಘಟನೆ ವೈಟ್ಡೌಸ್ ಸಂಸ್ಥೆಯಿಂದ ನಡೆದಿದೆ. 2010ರಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡುವ ವೈಟ್ಡೌಸ್ ಸಂಸ್ಥೆ ಈತನನ್ನು ಇದುವರೆಗೆ ನೋಡಿಕೊಂಡಿದೆ. ಮಂಗಳೂರಿನ ಎಸ್ಪಿ ಕಚೇರಿ ಬಳಿಯಿದ್ದ ಈತನಿಗೆ ವೈಟ್ಡೌಸ್ ಸಂಸ್ಥಾಪಕಿ ಕೊರಿನ್ ರಸ್ಕಿನಾ ಆಸರೆ ನೀಡಿದ್ದರು. ಮಾನಸಿಕ ಸ್ವಾಸ್ಥ್ಯವಿಲ್ಲ, ಮಾತು ಕಡಿಮೆ, ಒಮ್ಮೊಮ್ಮೆ ಏಕಾಏಕಿ ಬೊಬ್ಬೆ ಹೊಡೆಯುವುದು ಬಿಟ್ಟರೆ ಬೇರೇನೂ ಇಲ್ಲ. ಆದ್ದರಿಂದ ಈತನ ಹಿನ್ನೆಲೆ ತಿಳಿಯಲು ವೈಟ್ಡೌಸ್ ಸಂಸ್ಥೆಗೆ […]