ನವರಾತ್ರಿ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಕರಾವಳಿಯಲ್ಲಿ ರಕ್ತಪಾತ ಮಾಡಲು ಉಗ್ರರಿಂದ ಸಿದ್ಧತೆ

Saturday, September 18th, 2021
lunch-box bomb

ಮಂಗಳೂರು :  ಕರಾವಳಿಯನ್ನು ಬೆಚ್ಚಿ ಬೀಳಿಸುವ ಮತ್ತೊಂದು ಸುದ್ದಿ ಹೊರಬಿದ್ದಿದೆ. ಕರಾವಳಿಯನ್ನು ಕೇಂದ್ರವಾಗಿರಿಸಿ ಲಂಚ್ ಬಾಕ್ಸ್ ಬಾಂಬ್ ಸ್ಫೋಟಗೊಳಿಸುವುದಕ್ಕೆ ಉಗ್ರಸಂಘಟನೆಗಳು ಸಂಚು ಹೂಡುತ್ತಿರುವುದಾಗಿ ಗುಪ್ತಚರ ವರದಿಗಳು ಎಚ್ಚರಿಸಿವೆ. ಅದರಲ್ಲೂ ಪಾಕ್‌ನ ಐಎಸ್‌ಐ ಕುಮ್ಮಕ್ಕಿನಲ್ಲಿ ಈ ರಹಸ್ಯ ಸಿದ್ಧತೆಗಳು ನಡೆಯುತ್ತಿರುವುದಾಗಿ ವರದಿಗಳು ತಿಳಿಸಿದ್ದು, ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚಿಸಿದೆ. ಹೆಚ್ಚು ಜನಸಂದಣಿ ಇರುವುದನ್ನು ನೋಡಿಕೊಂಡು ನವರಾತ್ರಿ, ದೀಪಾವಳಿ ಹೀಗೆ ಪ್ರಮುಖ ಹಿಂದು ಹಬ್ಬಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ಲಂಚ್ ಬಾಕ್ಸ್‌ಗಳಲ್ಲಿ ಸ್ಫೋಟಕವನ್ನಿರಿಸಿ ರಕ್ತಪಾತ  ಮಾಡುವುದು ಉಗ್ರರ ಗುರಿ ಎನ್ನಲಾಗಿದೆ. ಪಂಜಾಬ್‌ನ ಅಮೃತಸರದ ಬಳಿಯೂ […]

ಹಬ್ಬ, ಉತ್ಸವಗಳ ಹಿಂದಿನ ಶಾಸ್ತ್ರ ಮತ್ತು ಮಣ್ಣಿನ ಗಣೇಶ ಮೂರ್ತಿಯನ್ನು ಪೂಜಿಸುವುದರ ಮಹತ್ವ !

Monday, September 6th, 2021
Ganesha

ಮಂಗಳೂರು  : ಹಬ್ಬ, ಉತ್ಸವ ಇತ್ಯಾದಿಗಳೆಡೆ ಕೇವಲ ರೂಢಿಯೆಂದು ನೋಡಬೇಡಿ, ಅದರ ಹಿಂದಿನ ಗೂಢಾರ್ಥ ಮತ್ತು ಶಾಸ್ತ್ರವನ್ನು ಅರಿತುಕೊಳ್ಳಿ ! ಭಾರತದಲ್ಲಿ ಅನೇಕ ಹಬ್ಬ, ಉತ್ಸವ ಮತ್ತು ಪರಂಪರೆಗಳಿವೆ. ಬಹುತೇಕ ಜನರು ಅದರೆಡೆಗೆ ಕೇವಲ ರೂಢಿಯೆಂದು ನೋಡುತ್ತಾರೆ ಮತ್ತು ಆ ದೃಷ್ಟಿಯಿಂದಲೇ ಆಚರಿಸುತ್ತಾರೆ; ಅದರ ಹಿಂದಿನ ಗೂಢಾರ್ಥ ಮತ್ತು ಶಾಸ್ತ್ರವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಪ್ರಾದೇಶಿಕ-ಭಿನ್ನತೆ, ಜನಜೀವನ, ಉಪಾಸನೆಯ ಪದ್ಧತಿ ಇತ್ಯಾದಿಗಳಿಂದ ಹಬ್ಬ, ಉತ್ಸವಗಳನ್ನು ಆಚರಿಸುವಾಗ ವಿವಿಧೆಡೆಗಳಲ್ಲಿ ಲೋಕರೂಢಿಯಂತೆ ಕೆಲವೊಮ್ಮೆ ವ್ಯತ್ಯಾಸಗಳು ಕಂಡುಬರುತ್ತವೆ. ಶಾಸ್ತ್ರದ ಆಧಾರವಿಲ್ಲದಿರುವಾಗಲೂ ಕೇವಲ ಹಿಂದಿನ […]

ದೇವಿಯರ ಹಬ್ಬ “ನವರಾತ್ರಿ – ದಸರಾ”

Saturday, October 24th, 2020
Nava durge

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ನವರಾತ್ರಿ ಅಥವಾ `ದಸರಾ’ ಹಬ್ಬಕ್ಕೆ ತನ್ನದೇ ಆದ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ. ಭಾರತಾದ್ಯಂತ `ದಸರಾ’ ಹಬ್ಬವನ್ನು ತುಂಬಾ ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ 9 ದಿನಗಳಲ್ಲಿ ದುರ್ಗಾದೇವಿಯ ವಿಶಾಲವಾದ ಸುಂದರ ಮೂರ್ತಿಗಳನ್ನು ದೊಡ್ಡ ಪ್ರಮಾಣದಲ್ಲಿ, ಅಲಂಕೃತ ಮಂಟಪಗಳಲ್ಲಿ ಕೂರಿಸಿ ಪೂಜಿಸಲಾಗುತ್ತದೆ. ವಿಜಯದಶಮಿಯ ದಿನ ಭವ್ಯ ಮೆರವಣಿಗೆಯ ಮೂಲಕ ವಿಸರ್ಜಿಸಲಾಗುತ್ತದೆ. ಇದು ಬಂಗಾಳಿಯವರಿಗೆ ನಾಡಹಬ್ಬವಾಗಿದೆ, ಪಂಜಾಬ್ನಲ್ಲಿ ಭಕ್ತರು 7 ದಿನಗಳ ಕಾಲ ಉಪವಾಸ ಮಾಡಿದ ನಂತರ ಎಂಟನೇ ದಿನ ಪುಟ್ಟ್ […]

ಹಬ್ಬದ ದಿನ ಶಾಂತಿ ಕದಡುವ ಉದ್ದೇಶದಿಂದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ಸುಸಜ್ಜಿತ ದಾಳಿ

Wednesday, August 12th, 2020
miscrents

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಮಂಗಳವಾರ ರಾತ್ರಿ ಸುಸಜ್ಜಿತ ದಾಳಿಕೋರರ ಗುಂಪೊಂದು ಕಲ್ಲು ತೂರಾಟ ನಡೆಸಿ ಅಟ್ಟಹಾಸ ಮೆರೆದಿದ್ದಾರೆ.  ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 110 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನೂ ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ  ಈ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಿ ಪೊಲೀಸರನ್ನು ನಿಯೋಜಿಸಲಾಗಿದೆ. ಸುಮಾರು 500ಕ್ಕೂ ಹೆಚ್ಚು ಸುಸಜ್ಜಿತ ದಾಳಿಕೋರರು ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್‌ ಬೈರಸಂದ್ರದಲ್ಲಿ ಮಂಗಳವಾರ ರಾತ್ರಿ ವಾಹನಗಳಿಗೆ ಬೆಂಕಿ ಹಚ್ಚಿ  ಸಾರ್ವಜಿನಿಕ […]

ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತದೆ ಎಂದು ನಾಗರ ಪಂಚಮಿಯನ್ನು ಟೀಕಿಸಿದ ಸತೀಶ ಜಾರಕಿಹೊಳಿ !

Friday, July 24th, 2020
satish-Jarakiholi

ಮಂಗಳೂರು : ನಾಗರಪಂಚಮಿಯಂದು ಹಿಂದೂಗಳು ನಾಗದೇವರಿಗೆ ಹಾಲನ್ನು ಎರೆಯುವ ಸಂಪ್ರದಾಯವನ್ನು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಯವರು ಟೀಕಿಸುತ್ತಾ, ಇದು ಅವೈಜ್ಞಾನಿಕ ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತದೆ. ಹಾಗಾಗಿ ಅದನ್ನು ಬಡಮಕ್ಕಳಿಗೆ, ರೋಗಿಗಳಿಗೆ ನೀಡಿ ಎಂದು ಹಿಂದೂ ವಿರೋಧಿ ಕರೆ ನೀಡುವ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದೆ. ಅದಲ್ಲದೇ ಕರ್ನಾಟಕದಲ್ಲಿ ಪ್ರತಿ ವರ್ಷ 40 ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಮರಣ ಹೊಂದುತ್ತಿದ್ದಾರೆ, ನಾಗನಿಗೆ ಹಾಲು ಎರೆಯವ ಬದಲು, ಬಡಮಕ್ಕಳಿಗೆ ಹಾಲು ನೀಡಿ ಎಂದು ಕರೆ ನೀಡಿದ್ದಾರೆ. ಇದು […]

‘ಶ್ರಾವಣ ಸೋಮವಾರದ ವ್ರತವನ್ನು ಹೇಗೆ ಆಚರಿಸಬಹುದು ?

Monday, July 20th, 2020
sravana

ಮಂಗಳೂರು  :  ಸದ್ಯ ಜಗತ್ತಿನಾದ್ಯಂತ ಕೊರೋನಾ ಮಹಾಮಾರಿಯಿಂದ ಎಲ್ಲೆಡೆ ಜನರ ಸಂಚಾರಕ್ಕೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಭಾರತದಲ್ಲಿಯೂ ವಿವಿಧ ರಾಜ್ಯಗಳಲ್ಲಿ ಸಂಚಾರ ನಿರ್ಬಂಧವನ್ನು (ಲಾಕ್‌ಡೌನ್) ವಿಧಿಸಲಾಗಿದೆ. ಕೆಲವು ಸ್ಥಳಗಳಲ್ಲಿ ಕೊರೋನಾ ಸೋಂಕು ಕಡಿಮೆಯಿದ್ದರೂ, ಜನರು ಮನೆಯಿಂದ ಹೊರಗೆ ಬರಲು ಅನೇಕ ನಿರ್ಬಂಧಗಳು ಇದ್ದೇ ಇವೆ. ಇದರಿಂದ ಹಿಂದೂಗಳ ವಿವಿಧ ಹಬ್ಬ, ಉತ್ಸವ, ವ್ರತಗಳನ್ನು ಎಂದಿನಂತೆ ಸಾಮೂಹಿಕ ರೀತಿಯಲ್ಲಿ ಆಚರಿಸಲು ನಿರ್ಬಂಧಗಳಿವೆ. ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಹಿಂದೂ ಧರ್ಮವು ಧರ್ಮಾಚರಣೆಯಲ್ಲಿ ಕೆಲವೊಂದು ಪರ್ಯಾಯಗಳನ್ನು ತಿಳಿಸಿದೆ. ಇದನ್ನು ‘ಆಪದ್ಧರ್ಮ ಎಂದು […]