ದೇವದಾಸ್ ಕಾಪಿಕಾಡ್, ಹೇಮಾವತಿ ಹೆಗ್ಡೆ, ಹರಿಕೃಷ್ಣ ಪುನರೂರು ಅವರಿಗೆ ಗೌರವ ಡಾಕ್ಟರೇಟ್

Thursday, April 21st, 2022
doctorate

ಮಂಗಳೂರು : ತುಳು ಚಲನ ಚಿತ್ರ ನಟ, ರಂಗ ಭೂಮಿ ಕಲಾವಿದ ತೆಲಿಕೆದ ಬೊಳ್ಳಿ ಖ್ಯಾತಿಯ ದೇವದಾಸ್ ಕಾಪಿಕಾಡ್ ಅವರು ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆಯಾಗಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಕೊಡ ಮಾಡುವ ಈ ಪುರಸ್ಕಾರಕ್ಕೆ ತುಳು ನಾಟಕ ಹಾಗೂ ಸಿನಿಮಾ ಕ್ಷೇತ್ರದ ಸಾಧನೆಗಾಗಿ ಕಾಪಿಕಾಡ್ ಅವರನ್ನು ಆಯ್ಕೆ ಮಾಡಲಾಗಿದೆ. ಮಂಗಳೂರಿ ವಿಶ್ವ ವಿದ್ಯಾನಿಲಯದ ೪೦ನೇ ವರ್ಷದ ವಾರ್ಷಿಕ ಕೊನ್ವೊಕೇಷನ್ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಿ ವಿಶ್ವ ವಿದ್ಯಾನಿಲಯ ಗೌರವಿಸಲಿದೆ. ಇವರ ಜೊತೆಗೆ ಶಿಕ್ಷಣ ಹಾಗೂ ಸಾಮಾಜಿಕ ಸೇವೆಗಾಗಿ […]

ಚಂದ್ರಶೇಖರ ಪಾಟೀಲ ಅವರ ನಿಧನಕ್ಕೆ ಗಣ್ಯರ ಸಂತಾಪ

Monday, January 10th, 2022
champa

ಮಂಗಳೂರು  :  ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಸೋಮವಾರ  ಬೆಳಿಗ್ಗೆ 6.30 ಕ್ಕೆ ನಿಧನರಾಗಿದ್ದಾರೆ. ಕನ್ನಡದ ಹಿರಿಯ ಸಾಹಿತಿ, ಭಾಷಾತಜ್ಞ, ಭಾಷಾ ಹೋರಾಟಕಾರ ಚಂದ್ರಶೇಖರ ಪಾಟೀಲ (ಚಂಪಾ)ಅವರ ನಿಧನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಸಂಚಾಲಕ ಎಂ.ಜಿ.ಆರ್ ಅರಸ್, ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ್, ಉಡುಪಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕಾ.ವೀ.ಕೃಷ್ಣದಾಸ್, ಗೌರವಾಧ್ಯಕ್ಷೆ ತಾರಾ ಆಚಾರ್ಯ, ದಕ್ಷಿಣ ಕನ್ನಡ ಜಿಲ್ಲಾ […]

ಯಕ್ಷಗಾನಕ್ಕೆ ಜಾಗತಿಕ ಮನ್ನಣೆ ಅಗತ್ಯವಿದೆ: ಡಾ.ಜೋಷಿ

Friday, December 25th, 2020
Nirpaje Bhim Bhat

ಬಂಟ್ವಾಳ:  ಕಾರ್ಪೊರೆಟ್ ಮತ್ತು ಎಲೆಕ್ಟ್ರಾನಿಕ್ ಯುಗದಲ್ಲಿ ಯಕ್ಷಗಾನ ಕಲೆಗೆ ಹಿರಿಯ ಕವಿ ಡಾ.ಶಿವರಾಮ ಕಾರಂತರ ಕನಸಿನಂತೆ ‘ಜಾಗತಿಕ ಮನ್ನಣೆ’ ಸಿಗಲು ಪ್ರಯತ್ನ ಮುಂದುವರಿಬೇಕು ಎಂದು ಹಿರಿಯ ವಿದ್ವಾಂಸ, ಅರ್ಥಧಾರಿ, ಸಂಶೋಧಕ ಡಾ. ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ. ಇಲ್ಲಿನ ಬಿ.ಸಿ.ರೋಡು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ವತಿಯಿಂದ ಶುಕ್ರವಾರ ಸಂಜೆ ‘ಕನ್ನಡ ಕಲ್ಲಣ ನೀರ್ಪಾಜೆ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು. ರಾಜ್ಯದಲ್ಲಿ ಕನ್ನಡ ಶಾಲೆ ಉಳಿಯದೆ ಯಕ್ಷಗಾನಕ್ಕೆ […]

ರಾಜ್ಯ ಸಾಹಿತ್ಯ ಪರಿಷತ್ ನ ಅಧ್ಯಕ್ಷರನ್ನು ಪದತ್ಯುತಗೊಳಿಸಿಸಲು ಒತ್ತಾಯ

Saturday, September 12th, 2020
Veereshwara Bhat

ಮಂಗಳೂರು : ಕರ್ನಾಟಕ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಮನು  ಬಳಿಗಾರ್ ರವರ ಅಧಿಕಾರ ಅವಧಿಯು ಈಗಾಗಲೇ ಮುಗಿದಿದ್ದು ತಕ್ಷಣಕ್ಕೆ ಪದತ್ಯುತಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಗಡಿನಾಡು ಕಾಸರಗೋಡಿನ ಕನ್ನಡ ಹೋರಾಟಗಾರ ಜಿ ವೀರೇಶ್ವರ ಭಟ್ ಕರ್ಮರ್ಕರ್ ಒತ್ತಾಯಿಸಿದ್ದಾರೆ. ಶನಿವಾರ ನಗರದ  ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಸರಗೋಡಿನ ಕನ್ನಡಿಗರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಬೇಕು, ಕಾಸರಗೋಡಿನಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ಬೆಂಬಲಿಸಬೇಕು, ಕನ್ನಡಿಗರ ಮೇಲೆ ದೌರ್ಜನ್ಯ ವನ್ನು‌ ನಿಲ್ಲಿಸಬೇಕು, ಕಾಸರಗೋಡಿನ ಕನ್ನಡಿಗರಿಗೆ ಕರ್ನಾಟಕದಲ್ಲಿ ಕಡ್ಡಾಯವಾಗಿ […]

ತುಳು ಕಾವ್ಯಯಾನ ಭಾಷೆಯ ಬೆಳವಣಿಗೆಗೆ ಪೂರಕ : ಹರಿಕೃಷ್ಣ ಪುನರೂರು

Tuesday, February 4th, 2020
tulu-world

ಮಂಗಳೂರು : ತುಳುವರ್ಲ್ಡ್ ಸಂಸ್ಥೆಯು ತುಳು ಕಾವ್ಯಯಾನವನ್ನು ಆರಂಭಿಸಿರುವುದು ಶ್ಲಾಘನೀಯ ತುಳು ಕಾವ್ಯಗಳ ಅಧ್ಯಯನ ಮತ್ತು ವಾಚನ ಪ್ರವಚನಗಳಿಂದ ತುಳುಭಾಷೆಯ ವ್ಯಾಕರಣ ಮತ್ತು ಶಬ್ದಭಂಡಾರ ಗಳ ಪರಿಚಯ ಆಗುತ್ತದೆ ಎಂದು ಹರಿಕೃಷ್ಣ ಪುನರೂರು ಅವರು ಅಭಿಪ್ರಾಯಪಟ್ಟರು. ಅವರು ತುಳುವಿನ ಮಹಾ ಕವಿಗಳಲ್ಲಿ ಒಬ್ಬರಾದ ಕೆದಂಬಾಡಿ ಜತ್ತಪ್ಪ ರೈಗಳ ಅಸನಿ ಯಾಗ ಕಾಂತಗ ಜೋಗಿ ಕಾವ್ಯದ ವಾಚನ ಮತ್ತು ಪ್ರವಚನ ಕಾರ್ಯಕ್ರಮವನ್ನು ಮಂಗಳೂರಿನ ಪೊಲೀಸ್ ಲೇನ್ನಲ್ಲಿರುವ ಮುನೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತುಳುವರ್ಲ್ಡ್ ಮಂಗಳೂರು ನೇತೃತ್ವದಲ್ಲಿ ನಡೆದ ತುಳು ಕಾವ್ಯಯಾನ […]

ದ.ಕ. ಜಿಲ್ಲಾ ಮಟ್ಟದ ಪತ್ರಕರ್ತರ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆ

Tuesday, June 18th, 2019
press-invitation

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಜು.1ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿರುವ ‘ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಮ್ಮೇಳನ 2019’ರ ಆಮಂತ್ರಣ ಪತ್ರಿಕೆ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಬಿಡುಗಡೆಗೊಂಡಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಪತ್ರಿಕಾ ಬರವಣಿಗೆ ಮೂಲಕ ನಾಡನ್ನು ತಿದ್ದುವ, ಜನರಲ್ಲಿ ತಿಳಿವಳಿಕೆ ಮೂಡಿಸುವ ಪತ್ರಕರ್ತರಿಗೆ ಇಂದು ರಕ್ಷಣೆ ಬೇಕಾಗಿದೆ. ಒಳ್ಳೆಯ ವಿಚಾರವನ್ನು ಸಮಾಜದ ಮುಂದಿಡುವ ಜತೆಗೆ […]

ಮಕ್ಕಳಿಗೆ ಸಾಹಿತ್ಯದ ಒಲವು ಮೂಡಿಸಿದರೆ ಮಾತ್ರ ಸಾಹಿತ್ಯ ಬೆಳವಣಿಯಾಗಲು ಸಾಧ್ಯ : ಪುನರೂರು

Monday, July 2nd, 2018
Punarooru

ಮಂಗಳೂರು : ಚಿಕ್ಕಮಕ್ಕಳಿಗೆ ಸಾಹಿತ್ಯದ ಒಲವು ಮೂಡಿಸಿದರೆ ಮಾತ್ರ ಸಾಹಿತ್ಯ, ಸಂಸ್ಕೃತಿ ಬೆಳವಣಿಯಾಗಲು ಸಾಧ್ಯ. ಇಂಗ್ಲಿಷ್ ಭಾಷೆ ಎಲ್ಲೆಡೆ ಪ್ರಭುತ್ವ ಸಾಧಿಸಿದರೂ ಕೂಡ ತಾಯಿ ಭಾಷೆಯಲ್ಲಿ ಓದಲು, ಬರೆಯಲು ಕಲಿಯುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹೆತ್ತವರು ಪ್ರೋತ್ಸಾಹ ನೀಡಬೇಕಿದೆ ಎಂದು  ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ರಾಜ್ಯ ಯುವ ಬರಹಗಾರರ ಒಕ್ಕೂಟದ ಕೇಂದ್ರ ಸಮಿತಿ ಬೆಂಗಳೂರು ಇದರ ವತಿಯಿಂದ ವಿವಿಧ ಸಾಧಕರಿಗೆ ಕುದ್ಮಲ್ ರಂಗರಾವ್ ರಾಜ್ಯ […]

ಯಕ್ಷಗಾನಕ್ಕೆ ಗಣೇಶ್‌ ಕೊಲೆಕಾಡಿ ಕೊಡುಗೆ ಅನನ್ಯ

Thursday, January 25th, 2018
yakshagana

ಮೂಲ್ಕಿ: ಯಕ್ಷಗಾನದ ಹೊಸ ಅವಿಷ್ಕಾರದ ಪ್ರಯೋಗಗಳಿಂದ ಯಕ್ಷಗಾನದ ಮೂಲ ವಸ್ತುವಿನ ಸ್ವರೂಪಕ್ಕೆ ಧಕ್ಕೆ ಉಂಟಾಗಬಹುದು ಎಂಬ ಆತಂಕದ ವಾತಾವರಣ ಜನರಲ್ಲಿ ನಿರ್ಮಾಣವಾಗಿದೆ ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಡಾ| ಭಾಸ್ಕರಾನಂದ ಕುಮಾರ್‌ ಹೇಳಿದರು. ಅವರು ಮೂಲ್ಕಿಯ ಕುಂಜಾರುಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಸಾಧಕ,ಕವಿ ಹಾಗೂ ಛಂದಸ್ಸು ಪ್ರವೀಣಾ ಯಕ್ಷಗುರು ಗಣೇಶ್‌ ಕೊಲೆಕಾಡಿಯವರಿಗೆ ಅವರ ಅಭಿಮಾನಿಗಳಿಂದ ನಡೆದ ಸಮ್ಮಾನ ಹಾಗೂ ಗೌರವಾರ್ಪಣೆಯ ಸಮಾರಂಭದಲ್ಲಿ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದರು. ಗಣೇಶ್‌ ಕೊಲೆಕಾಡಿ ಅವರು ಯಕ್ಷಗಾನ […]

ಪಲಿಮಾರು ಪರ್ಯಾಯ: ಮಂಗಳೂರಲ್ಲಿ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ಉದ್ಘಾಟನೆ

Wednesday, January 10th, 2018
paryaya-udupi

ಉಡುಪಿ: ಪಲಿಮಾರು ಮಠದ ಪರ್ಯಾಯದ ಅಂಗವಾಗಿ ಮಂಗಳೂರಿನ ಶರವು ಶ್ರೀ ಮಹಾಗಣಪತಿದೇವಸ್ಥಾನದಲ್ಲಿ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ಇಂದು ಉದ್ಘಾಟನೆಗೊಂಡಿತು. ಶ್ರೀ ಕ್ಷೇತ್ರಕಟೀಲಿನ ಲಕ್ಷ್ಮೀ ನಾರಾಯಣಆಸ್ರಣ್ಣಕೇಂದ್ರವನ್ನು ದೀಪಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಪರ್ಯಾಯ ಮಹೋತ್ಸವಕ್ಕೆ ಸರ್ವರ ಸಹಕಾರವನ್ನು ಯಾಚಿಸಿದರು, ಕಟೀಲುಅನಂತಆಸ್ರಣ್ಣ ಮಾತನಾಡಿ ಪರ್ಯಾಯ ಶ್ರೀಗಳ ಹುಟ್ಟೂರುಕಟೀಲು ಸಮೀಪದ ಶಿಬರೂರು ಆದ್ದರಿಂದ ಹುಟ್ಟೂರು ನೆಲೆಯಲ್ಲಿ ಭಕಾದಿಗಳು ಈ ನಾಡಹಬ್ಬದ ಯಶಸ್ವಿನಲ್ಲಿ ಪೂರ್ಣರೀತಿಯಲ್ಲಿ ಸಹಕರಿಸಬೇಕೆಂದು ವಿನಂತಿಸಿದರು. ಶರವುಕ್ಷೇತ್ರದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶ್ರೀ ರಾಘವೇಂದ್ರ ಶಾಸ್ತ್ರಿ ಶುಭ ಹಾರೈಸಿದರು. ಈ […]

8ನೇ ಸಾಲಿನ ವಾರ್ಷಿಕ ಕಲ್ಲಚ್ಚು ಪ್ರಶಸ್ತಿ 2017

Saturday, December 16th, 2017
kallachu

ಮಂಗಳೂರು: ಕಲ್ಲಚ್ಚು ಪ್ರಕಾಶನವು ಕೊಡಮಾಡುವ 8ನೇ ಸಾಲಿನ ವಾರ್ಷಿಕ ಕಲ್ಲಚ್ಚು ಪ್ರಶಸ್ತಿ 2017 ಪ್ರದಾನ ಸಮಾರಂಭವು ಇಂದು ನಗರದ ದಿ ಕ್ಯಾಂಪಸ್ ಕೆರಿಯರ್ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪ್ರಶಸ್ತಿ ಸ್ವೀಕರಿಸಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಬಿ. ಎ. ಮುಹಮ್ಮದ್ ಅಲಿ ಅಭಿನಂದನಾ ಮಾತುಗಳನ್ನಾಡಿದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, […]