ಕಾರುಣ್ಯ’ದ ಕೈ ಹಿಡಿದ ವಿಶ್ವ ಬಂಟರ ಸಂಘ

Monday, November 12th, 2018
bantara-sangha

ಮಂಗಳೂರು: ಮಂಗಳೂರಿನ ಎಂ.ಫ್ರೆಂಡ್ಸ್ ಸಂಸ್ಥೆ ಕಳೆದ 2017 ಡಿಸೆಂಬರ್ ನಲ್ಲಿ ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಿತು. ಮಂಗಳೂರಿನಲ್ಲಿರುವ ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ರೋಗಿಗಳ ಜೊತೆಗಾರರಿಗೆ ದಿನನಿತ್ಯ ರಾತ್ರಿಯ ಡಿನ್ನರ್ ನೀಡುವ ಯೋಜನೆಯದು. ಈ ಯೋಜನೆಗೆ 2018 ಡಿಸೆಂಬರ್’ಗೆ ಒಂದು ವರ್ಷ ತುಂಬುತ್ತದೆ. ಎಂ.ಫ್ರೆಂಡ್ಸ್ ಸಂಸ್ಥೆಯಲ್ಲಿರುವ ಸದಸ್ಯರು ಹಾಗೂ ಊರ ಕೆಲವೊಂದು ದಾನಿಗಳಿಂದ ಮುಂದುವರೆಯುತ್ತಿದ್ದ ‘ಕಾರುಣ್ಯ’ ಯೋಜನೆಗೆ ಆರ್ಥಿಕ ಮುಗ್ಗಟ್ಟು ತಲೆದೋರಿದ ಸಂದರ್ಭ ಅದರ ಕೈ ಹಿಡಿದು ಮುಂದುವರೆಸುವಂತೆ ಪ್ರೇರೇಪಿಸಿದ್ದು ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ […]

ಬಜರಂಗದಳ ಕಾರ್ಯಕರ್ತ ಹರೀಶ್ ಶೆಟ್ಟಿ ಕೊಲೆ ಪ್ರಕರಣ: ಮೂವರ ಬಂಧನ

Thursday, October 4th, 2018
harish

ಮಂಗಳೂರು: ಮಂಗಳೂರು ಹೊರವಲಯದ ಸೂರಲ್ಪಾಡಿ ಬಳಿ ಸೆ.24ರಂದು ನಡೆದ ಬಜರಂಗದಳ ಕಾರ್ಯಕರ್ತ ಹರೀಶ್ ಶೆಟ್ಟಿ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಕಲಾಯಿ ಮದೀನಾ ಮಸೀದಿಯ ಬಳಿ ನಿವಾಸಿ ಮೊಹಮ್ಮದ್ ಶರೀಫ್ ಅಲಿಯಾಸ್ ಶರೀಫ್ (24), ಮಂಗಳೂರು ತಾಲೂಕು ಬಜಪೆ ಕಂದಾವರ ಗ್ರಾಮದ ಕಂದಾವರ ಪಂಚಾಯತ್ ಬಳಿ ನಿವಾಸಿ ಶಿಫಾಜ್ (21), ಬಜಪೆ ಕಂದಾವರ ಗ್ರಾಮದ ಚರ್ಚ್ ರಸ್ತೆ ನಿವಾಸಿ ಮೊಹಮ್ಮದ್ ಆರಿಫ್ (28) […]

ಬಿಜೆಪಿ ಸಂಸ್ಥಾಪನಾ ದಿನ

Friday, April 6th, 2018
janatha-party

ಮಂಗಳೂರು: ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತವನ್ನು ಇಡೀ ರಾಷ್ಟ್ರವೇ ಒಪ್ಪಿಕೊಂಡಿರುವುದಕ್ಕೆ ಪಕ್ಷ ಬೆಳೆಯುತ್ತಿರುವ ರೀತಿಯೇ ಸಾಕ್ಷಿ. ಕರ್ನಾಟಕದಲ್ಲಿಯೂ ಗೆಲ್ಲುವ ಮೂಲಕ ಬಿಜೆಪಿಯ ಶಕ್ತಿಯನ್ನು ತೋರಿಸಲು ಕಾರ್ಯಕರ್ತರು ಉತ್ಸುಕರಾಗಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ಅವರು ಬಿಜೆಪಿ ಸಂಸ್ಥಾಪನಾ ದಿನದಂದು ಅಳಪೆ ಉತ್ತರದ 51 ನೇ ವಾರ್ಡಿನ ಬೂತ್ ಸಂಖ್ಯೆ 174 ರಲ್ಲಿ ಬಿಜೆಪಿ ಸ್ಥಾಪಕ ದಿನಾಚರಣೆಯ ಸಲುವಾಗಿ ಕಾರ್ಯಕರ್ತರ ಮನೆಯ ಮಹಡಿಯಲ್ಲಿ ಬಿಜೆಪಿ ಧ್ವಜಾರೋಹಣದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. […]

ಮಹಿಳೆಯರಿಂದ ಗ್ರಾಮದ ಅಭಿವೃದ್ಧಿಯ ಕ್ರಾಂತಿ ಸಾಧ್ಯ: ಹರೀಶ್ ಶೆಟ್ಟಿ

Wednesday, September 7th, 2016
Amtadi-village

ಬಂಟ್ವಾಳ: ಅಮ್ಟಾಡಿ ಗ್ರಾಮವನ್ನು ಸ್ವಚ್ಚ ಗ್ರಾಮ ಮತ್ತು ಮದ್ಯಮುಕ್ತ ಗ್ರಾಮವನ್ನಾಗಿ ಮಾಡಲು ವಿಶೇಷವಾಗಿ ಮಹಿಳೆಯರ ಸಹಕಾರ ಅಗತ್ಯವಾಗಿ ಬೇಕು ಎಂದು ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಹೇಳಿದರು. ಅವರು ಗ್ರಾ.ಪಂ.ಅಮ್ಟಾಡಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಮ್ಟಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಮಹಿಳಾ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಂದ ಗ್ರಾಮದ ಅಭಿವೃದ್ಧಿಯ ಕ್ರಾಂತಿ ಸಾಧ್ಯ. ಆ ನಿಟ್ಟಿನಲ್ಲಿ ಗ್ರಾಮದ ಬೆಳವಣಿಗೆಯಲ್ಲಿ ಮಹಿಳೆಯರು ವಿಶೇಷ ಮುತುವರ್ಜಿ ವಹಿಸಿ, ಅಮ್ಟಾಡಿ ಗ್ರಾಮವನ್ನು […]