ಆಳ್ವಾಸ್ ತುಳು ರಂಗ್-ಅಂತರ್ ಕಾಲೇಜು ತುಳು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

Saturday, March 31st, 2018
alwas-tulu

ಮೂಡುಬಿದಿರೆ: ಭಾಷೆ ನಾಶವಾಗುತ್ತದೆ ಎಂಬುದು ಭ್ರಮೆ. ಮನೆಯಲ್ಲಿ, ಒಡನಾಡಿಗಳಲ್ಲಿ ತುಳುವಿನಲ್ಲೇ ಮಾತನಾಡುವ ಮನೋಭಾವ ಬೆಳೆಸಬೇಕು. ತುಳುವಿನಲ್ಲಿ ಮಾತನಾಡಿದಾಗ ಮಾತ್ರ ನಮ್ಮಲ್ಲಿ ಆಪ್ತತೆ ಮೂಡುತ್ತದೆ. ಮನೆಯ ಹಿರಿಯರ ಅಂತರಂಗಕ್ಕೆ ಹತ್ತಿರವಾಗುತ್ತೇವೆ. ಬಳಸಿದರೆ ಭಾಷೆ ಉಳಿಯುತ್ತದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ನುಡಿದರು. ಮೂಡುಬಿದಿರೆ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ಅಂತರ್ ಕಾಲೇಜು ತುಳು ಸಾಂಸ್ಕೃತಿಕ ಸ್ಪರ್ಧೆ ಮತ್ತು ಪ್ರದರ್ಶನ ಮೇಳ ಆಳ್ವಾಸ್ ತುಳು ರಂಗ್ 2018 ಅನ್ನು ಸೇರಿಗೆ ಭತ್ತ ತುಂಬಿಸುವ ಮೂಲಕ ಉದ್ಘಾಟಿಸಿ […]

ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿ ಹರ್ಷಿತಾ ಮುಗ್ದುಂ

Monday, November 15th, 2010
ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿ

ಬೆಂಗಳೂರು : ಸಾಧನೆಗೆ ವಯಸ್ಸು ಅಡ್ಡಿಯಲ್ಲ, ಸಾಧಿಸುವ ಛಲ ಇದ್ದರೆ ಎಂತಹ ಮಹಾನ್ ಸಾಧನೆಯನ್ನೂ ಎಳೆಯ ಹರೆಯದಲ್ಲೇ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ ಬೆಂಗಳೂರಿನ ಬಾಲಕಿ ಹರ್ಷಿತಾ ಮುಗ್ದುಂ. ಏಳನೇ ತರಗತಿಯಲ್ಲಿ ಓದುತ್ತಿರುವ ಈಕೆ “ರೂಬಿ ರಷ್” ಹೆಸರಿನ ಇಂಗ್ಲಿಷ್ ಕಾದಂಬರಿ ಬರೆದು ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯಲಹಂಕದ ಡಿಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಓದುತ್ತಿರುವ ಹರ್ಷಿತಾಗೆ ಈಗ 12 ವರ್ಷ. ಪುಸ್ತಕವೇ ಈಕೆಯ ಪ್ರಾಣ. ತನ್ನ ಬಳಿ ಸ್ವಂತ ಕಿರು ಗ್ರಂಥಾಲಯವನ್ನೇ […]