ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ನಂದಿನಿ ನದಿಯಲ್ಲಿ ಯುವಕನ ಶವ ಪತ್ತೆ

Friday, September 29th, 2023
ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ನಂದಿನಿ ನದಿಯಲ್ಲಿ ಯುವಕನ ಶವ ಪತ್ತೆ

ಮುಲ್ಕಿ: ಮುಲ್ಕಿಯ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಮೀಪದ ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ನಂದಿನಿ ನದಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಹಳೆಯಂಗಡಿ ಪೂಜಾ ಫ್ರೆಂಡ್ಸ್ ನ ಸದಸ್ಯರು ಸ್ಥಳಕ್ಕೆ ಧಾವಿಸಿ ಶವವನ್ನು ಆಂಬುಲೆನ್ಸ್ ಮೂಲಕ ಮೂಲ್ಕಿ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಯುವಕನ ವಯಸ್ಸು ಸುಮಾರು 19 ರಿಂದ 20 ವರ್ಷದ ಒಳಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ದಿನಗಳ ಹಿಂದೆ ಇದೇ ಪರಿಸರದ ಚೇಳಾಯರು ಅಣೆಕಟ್ಟಿನ ಬಳಿ ಯುವಕನೊಬ್ಬ ನಾಪತ್ತೆಯಾಗಿದ್ದು, ಈ ಶವ […]

ಆನಂದ ಪೂಜಾರಿ ಹಳೆಯಂಗಡಿ ನಿಧನ

Friday, August 27th, 2021
Ananda Poojary

ಮುಂಬಯಿ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಹಳೆಯಂಗಡಿ ಸಾಯಿಕೃಪಾ ನಿವಾಸಿ, ಕೊಡುಗೈದಾನಿ, ಸಾಮಾಜಿಕ ಚಿಂತಕ ಆನಂದ ಪೂಜಾರಿ (85.) ಇಂದು ಸಂಜೆ ಹಳೆಯಂಗಡಿ ಅಲ್ಲಿನ ನಿವಾಸದಲ್ಲಿ ನಿಧನರಾದರು. ಮುಂಬಯಿ ಅಲ್ಲಿನ ಹೆಸರಾಂತ ಸಾಯಿಕೇರ್ ಸಂಸ್ಥೆಯ ಆಡಳಿತ ನಿರ್ದೇಶಕ, ಮದರ್ ಇಂಡಿಯಾ ನೈಟ್ ಹೈಸ್ಕೂಲ್ ಫೋರ್ಟ್ (ಮುಂಬಯಿ) ಇದರ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟç ಸಲಹಾ ಸಮಿತಿ ಸದಸ್ಯ ಸುರೇಂದ್ರ ಎ.ಪೂಜಾರಿ ಸೇರಿದಂತೆ ಮೃತರು ಏಳು ಗಂಡು, ಒಂದು ಹೆಣ್ಣು ಹಾಗೂ ಅಪಾರ ಬಂಧು […]

ಸರಕಾರಿ ಬಸ್ಸುಗಳ ನಡುವೆ ಅಪಘಾತ, 12 ಜನರಿಗೆ ಗಂಭೀರ ಗಾಯ

Monday, October 5th, 2020
ksrtc

ಮಂಗಳೂರು  : ಹಳೆಯಂಗಡಿ ಕೆನರಾ ಬ್ಯಾಂಕ್ ಎದುರುಗಡೆ ಸರಕಾರಿ ಬಸ್ಸುಗಳ ನಡುವೆ ಅಪಘಾತ ನಡೆದಿದ್ದು, ಹನ್ನೆರಡು ಜನ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಬಳಿ ಮಂಗಳೂರು ಡಿಪೋ ಸರಕಾರಿ ಬಸ್ಸಿನ (ಕೆ ಎ 19 ಎಫ್ 3376) ಹಿಂಭಾಗಕ್ಕೆ ಉತ್ತರ ಕರ್ನಾಟಕದ ಸರಕಾರಿ ಬಸ್ (ಕೆ17 f19 28) ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಂಗಳೂರು ಡಿಪೋ ಬಸ್ಸು ಹೆದ್ದಾರಿಯಿಂದ ಚರಂಡಿಗೆ ಸರಿದಿದ್ದು, ಸ್ಥಳೀಯ ರಿಕ್ಷಾ […]

ಹಳೆಯಂಗಡಿ : ಪಿಡಿಒ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹ

Tuesday, February 18th, 2020
haleyangady

ಮಂಗಳೂರು : ಹಳೆಯಂಗಡಿ ಪಿಡಿಒ ಪೂರ್ಣಿಮಾ ಎಂಬುವರ ಮೇಲೆ‌ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘದಿಂದ ಮೌನ ಪ್ರತಿಭಟನೆ ನಡೆಸಲಾಯಿತು. ಹಲ್ಲೆ ಖಂಡಿಸಿ ಜಿಲ್ಲೆಯಾದ್ಯಂತ ಪಿಡಿಒ, ಕಾರ್ಯದರ್ಶಿ ಹಾಗೂ ಲೆಕ್ಕಸಹಾಯಕರು ಸೇರಿದಂತೆ ಪಂಚಾಯತ್ ರಾಜ್ ಇಲಾಖೆಯ ಎಲ್ಲ ಸರ್ಕಾರಿ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು. ಹಳೆಯಂಗಡಿ ಗ್ರಾಪಂನ ಇಂದಿರಾ ನಗರದಲ್ಲಿ ನೀರಿನ ಪಂಪ್ ಚಾಲಕ‌ ತಾತ್ಕಾಲಿಕ‌ ಗೈರು ಹಾಜರಾಗಿರೋದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ನೀರು ಸರಬರಾಜು […]

ಹಳೆಯಂಗಡಿ : ಮಾರುಕಟ್ಟೆಯನ್ನು ನವೀಕರಣಗೊಳಿಸಲು ಸಚಿವರಿಗೆ ಮನವಿ

Thursday, September 19th, 2019
haleyangady

ಹಳೆಯಂಗಡಿ : ಪಟ್ಟಣವಾಗಿ ಬೆಳೆಯುತ್ತಿರುವ ಹಳೆಯಂಗಡಿಯ ಮಾರುಕಟ್ಟೆಯನ್ನು ಆಧುನಿಕ ರೀತಿಯಲ್ಲಿ ನವೀಕರಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿಯವರಲ್ಲಿ ದ.ಕ. ಜಿ. ಪಂ. ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಸಚಿವರು ಕಾರ್ಯ ನಿಮಿತ್ತ ಮಂಗ ಳೂರಿಗೆ ತೆರಳುತ್ತಿದ್ದಾಗ ಹಳೆಯಂಗಡಿಯ ಪೇಟೆಯಲ್ಲಿ ವಿವಿಧ ಸಂಘ - ಸಂಸ್ಥೆಗಳ ಪ್ರಮುಖರೊಂದಿಗೆ ಸೌಹಾರ್ದ ಭೇಟಿ ನೀಡಿದ ಸಂದರ್ಭದಲ್ಲಿ ಜಿ.ಪಂ. ಸದಸ್ಯರು ಮನವಿ ನೀಡಿದರು. ಬಹಳ ವರ್ಷ ಗಳಿಂದ ದುಸ್ಥಿತಿಯಲ್ಲಿ ಇರುವ ಮೀನು ಮಾರುಕಟ್ಟೆಯನ್ನು ಸಂಪೂರ್ಣವಾಗಿ ನವೀಕರಿಸಿ, […]

ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ ರಿಕ್ಷಾ ಡ್ರೈವರ್

Saturday, August 24th, 2019
Riksha Driver

ಮುಲ್ಕಿ: ಹಳೆಯಂಗಡಿ ಕೊಪ್ಪಲ ಬಳಿಯ ರೈಲ್ವೇ ಹಳಿಯ ಮೇಲೆ ಸ್ಥಳೀಯ ರಿಕ್ಷಾ ಚಾಲಕರೊಬ್ಬರ ಶವ ಪತ್ತೆಯಾಗಿದೆ. ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೊಳುವೈಲು ನಿವಾಸಿ ನವೀನ್ ಕರ್ಕಡ (44) ಎಂಬ ವ್ಯಕ್ತಿಯೇ ಮೃತಪಟ್ಟವರಾಗಿದ್ದಾರೆ. ಇವರು ಹಳೆಯಂಗಡಿಯಲ್ಲಿ ರಿಕ್ಷಾ ಚಾಲನಾ ವೃತ್ತಿಯನ್ನು ನಡೆಸಿಕೊಂಡಿದ್ದರು. ನವೀನ್ ಅವರು ಕೆಲವು ಸಮಯಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಐದು ವರ್ಷಗಳ ಹಿಂದೆ ಇವರ ಪತ್ನಿ ಮೃತಪಟ್ಟಿದ್ದರು. ಇವರಿಗೆ ಇಬ್ಬರು ಪುತ್ರರಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಾಪ್ತಿ ಮೀರಿ ಸೇವೆ ನೀಡುತ್ತಿರುವ ಆಸ್ಪತ್ರೆ

Thursday, January 11th, 2018
Hospital

ಮೂಲ್ಕಿ : ಜಿಲ್ಲೆ ಬದಲಾಯ್ತು, ತಾಲೂಕು ಬದಲಾಯ್ತು ಆದರೆ ಪಶುಸಂಗೋಪನಾ ಇಲಾಖೆಯ ಪಶು ವೈದ್ಯಾಲಯ ಮಾತ್ರ ಅದೇ ಇದೆ. ಹೌದು ಸುಮಾರು ಆರು ದಶಕಗಳ ಹಿಂದೆ ಅವಿಭಜಿತ ದ.ಕ. ಜಿಲ್ಲೆಯ ವ್ಯಾಪ್ತಿಗೆ ಸೇರಿದ್ದ ಮೂಲ್ಕಿ ಸಮೀಪದ ಕಾರ್ನಾಡಿನಲ್ಲಿದ್ದ ಪಶು ಸಂಗೋಪನಾ ಇಲಾಖೆಯ ಪಶು ವೈದ್ಯಾಲಯ ಮಂಗಳೂರು ತಾಲೂಕು ಹಾಗೂ ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೂ, ಉಡುಪಿ ಜಿಲ್ಲೆಯ ಜನರಿಗೆ ಸೇವೆಯನ್ನು ಒದಗಿಸುತ್ತಿದೆ. ಉಡುಪಿ ಜಿಲ್ಲೆಯ ಪಡುಬಿದ್ರಿ, ಹೆಜಮಾಡಿ ಮತ್ತು ಪಲಿಮಾರು ಪ್ರದೇಶದ ಜನರು ತಮ್ಮ ಸಾಕು ಪ್ರಾಣಿ, ಜಾನುವಾರುಗಳಿಗೆ ಚಿಕಿತ್ಸೆ […]

ಹಳೆಯಂಗಡಿ: ನೂತನ ಸೇತುವೆಯಿಂದ ಏಕಾಏಕಿ ನಂದಿನಿ ನದಿಗೆ ಹಾರಿದ ಯುವಕ

Friday, October 6th, 2017
haleyangadi

ಮಂಗಳೂರು: ಸಸಿಹಿತ್ಲು- ಕದಿಕೆಯ ನೂತನ ಸೇತುವೆಯಿಂದ ಅಪರಿಚಿತ ಯುವಕನೋರ್ವ ನಂದಿನಿ ನದಿಗೆ ಹಾರಿದ್ದಾನೆ ಎಂಬ ಮಾಹಿತಿಯಿಂದ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ತೀವ್ರ ಶೋಧ ನಡೆಸಿದ ಘಟನೆ ಅ. 5ರಂದು ನಡೆದಿದೆ. ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನೂತನ ಸೇತುವೆಯಿಂದ ಏಕಾಏಕಿ ಯುವಕನೋರ್ವ ನದಿಗೆ ಹಾರಿದ್ದನ್ನು ಮಹಿಳೆಯೋರ್ವರು ನೋಡಿದ್ದಾರೆ ಎಂದು ಮೂಲ್ಕಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿತ್ತು. ತತ್‌ಕ್ಷಣ ಪೊಲೀಸರು ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಡಿದರು ಆನಂತರ ಮಂಗಳೂರಿನಿಂದ ಬಂದ ಅಗ್ನಿಶಾಮಕ ದಳದವರು […]