ಕುಂದಾಪುರ : ಮದುವೆ ದಿನವೇ ವಧು ನಾಪತ್ತೆ; ಪ್ರಿಯಕರನೊಂದಿಗೆ ಮದುವೆಯಾಗಿ ಬಂದ ಯುವತಿ
Tuesday, December 3rd, 2019ಕುಂದಾಪುರ : ಎರಡು ಕುಟುಂಬದವರು ಸೇರಿ ನಿಶ್ಚಯ ಮಾಡಿದ ಮದುವೆ ದಿಕ್ಕರಿಸಿ ಮದುವೆ ದಿನವೇ ಮನೆಯಿಂದ ಯುವತಿಯೊಬ್ಬಳು ನಾಪತ್ತೆಯಾದ್ದರಿಂದ ಮದುವೆ ಮುರಿದು ಬಿದ್ದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಮದುವೆ ಧಿಕ್ಕರಿಸಿ ನಾಪತ್ತೆಯಾದ ಮರವಂತೆಯ ಯುವತಿಯೋರ್ವಳು ಪ್ರಿಯಕರನ ಕೈಹಿಡಿದು ಪ್ರತ್ಯಕ್ಷವಾಗಿದ್ದಾಳೆ. ತ್ರಾಸಿಯ ಸಭಾಭವನದಲ್ಲಿ ಮರವಂತೆಯ ಯುವತಿ ಹಾಗೂ ತ್ರಾಸಿ ಮೂಲದ ಯುವಕನ ಹೆತ್ತವರು ಹಾಗೂ ಸಂಬಂಧಿಕರೆಲ್ಲ ಸೇರಿ ಗೊತ್ತುಪಡಿಸಿದ ಹುಡುಗನೊಂದಿಗೆ ಹಸೆಮಣೆ ಏರಬೇಕಿದ್ದ ವಧುವೊಬ್ಬಳು ಬೆಳ್ಳಂಬೆಳ್ಳಗ್ಗೆ ಗಂಗೊಳ್ಳಿ ಮೂಲದ ಸದ್ಯ ತೆಕ್ಕಟ್ಟೆ ಆಸುಪಾಸಿನ […]