ಯುವತಿಯೊಂದಿಗಿದ್ದ ಅನ್ಯ ಕೋಮಿನ ಯುವಕನಿಗೆ ಹಲ್ಲೆ : ಎಂಟು ಶಂಕಿತರು ವಶಕ್ಕೆ

Friday, April 2nd, 2021
Shashikumar

ಮಂಗಳೂರು : ಬೆಂಗಳೂರಿಗೆ ಕೆಲಸ ಹುಡುಕಲು ಅನ್ಯ ಕೋಮಿನ ಯುವಕನೊಂದಿಗೆ ಗುರುವಾರ ರಾತ್ರಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಯುವತಿಯೊಂದಿಗಿದ್ದ ಇದ್ದ ಯುವಕನ ಮೇಲೆ ಹಿಂದೂ ಸಂಘಟನೆಗಳು ಹಲ್ಲೆ ನಡೆಸಿದ  ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ  ಎನ್.ಶಶಿಕುಮಾರ್,  ಕಂಕನಾಡಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ತಡೆದು ಅದರಲ್ಲಿ ಯುವತಿಯೊಂದಿಗೆ ಪ್ರಯಾಣಿಸುತ್ತಿದ್ದ ಯುವಕನ ಮೇಲೆ ಹಲ್ಲೆ ಮಾಡಿದ್ದು, ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ,  ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 8 ಶಂಕಿತರನ್ನು ವಿಚಾರಣೆಗಾಗಿ […]

ಗುಡ್ಡದ ಮೇಲೆ ಮಜಾ ಮಾಡುತ್ತಿದ್ದ ಅನ್ಯಕೋಮಿನ ಜೋಡಿ, ಥಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು

Thursday, February 4th, 2021
mudipu gudda

ಮಂಗಳೂರು :  ಮುಡಿಪು ಗುಡ್ಡೆಯಲ್ಲಿ ಮಜಾ ಮಾಡುತ್ತಿದ್ದ ಅನ್ಯಕೋಮಿನ ಜೋಡಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಹಿಡಿದು ಪೊಲೀಸರರಿಗೆ ಒಪ್ಪಿಸಿದ ಘಟನೆ ನಡೆದಿದೆ. ಮೂಡಬಿದಿರೆಯ ಜುನೈದ್ ಎಂಬಾತ ಕೈರಂಗಳ ವಿದ್ಯಾನಗರದ ಹಿಂದೂ ಯುವತಿಯೊಂದಿಗೆ ಮುಡಿಪು ಬೆಟ್ಟದಲ್ಲಿ ಒಟ್ಟಿಗೆ ಇದ್ದಾಗ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಸಿಕ್ಕಿಬಿದ್ದಿದ್ದು, ಇಬ್ಬರಿಗೂ ಥಳಿಸಿ ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಗೆ ಇನ್ಸ್ಟಾಗ್ರಾಂ ಮೂಲಕ ಈ ಯುವಕನ ಪರಿಚಯವಾಗಿತ್ತು ಎನ್ನಲಾಗಿದೆ. ಕಳೆದ ಒಂದು ವಾರದಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಮೂರು ಘಟನೆಗಳು ನಡೆದಿದ್ದು ಬೋಳಿಯಾರ್ ಬಳಿ ಯುವಕನಿಂದ […]

ಕನ್ನಡಪರ ಸಂಘಟನೆಗಳು ಬಂದ್ ಮಾಡಲು ಬಂದಲ್ಲಿ ಅವರಿಗೆ ಕಲ್ಲು ಹೊಡೆದು ಕಳುಹಿಸಿ : ಕಾಳಿಮಠದ ರಿಷಿ ಕುಮಾರ ಸ್ವಾಮೀಜಿ

Monday, November 23rd, 2020
Rishi Kumara Swamy

ಮಂಗಳೂರು :  ಕನ್ನಡಪರ ಸಂಘಟನೆಗಳು ಡಿಸೆಂಬರ್ 5ರಂದು ಬಂದ್ ಮಾಡಲು ಬಂದಲ್ಲಿ ಅವರಿಗೆ ಕಲ್ಲು ಹೊಡೆದು ಕಳುಹಿಸಿ ಎಂದು ಕಾಳಿಮಠದ ರಿಷಿ ಕುಮಾರ ಸ್ವಾಮೀಜಿ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮಂಗಳೂರಿಲ್ಲಿ ಸೋಮವಾರ  ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಕೊರೋನಾದಿಂದ ತತ್ತರಿಸಿದೆ, ಕನ್ನಡಪರ ಸಂಘಟನೆಯವರು ಪ್ರತಿಯೊಂದಕ್ಕೂ ಬಂದ್ ಎಂದು ಹೇಳುತ್ತಾರಲ್ಲಾ, ಕರ್ನಾಟಕ ಏನು ಅವರ ಅಪ್ಪನ ಆಸ್ತಿಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮರಾಠರಿಗೆ ಅಭಿವೃದ್ಧಿ ಪ್ರಾಧಿಕಾರ ಮಾಡಿದರೆ ಕನ್ನಡಪರ ಸಂಘಟನೆಗಳಿಗೆ ಏನು ನಷ್ಟ?. ಕರ್ನಾಟಕದ […]

ಹಿಂದೂ ರಾಷ್ಟ್ರದ ನಿರ್ಮಾಣ ಮತ್ತು ಹಿಂದೂ ಸಂಘಟನೆಗಳ ಐಕ್ಯತೆಗಾಗಿ ಮಂಗಳೂರಿನಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ

Friday, February 7th, 2020
hindhu-jana-jagruti

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಾಂತೀಯ ಹಿಂದೂ ಅಧಿವೇಶನ ಮಂಗಳೂರಿನಲ್ಲಿ ನಡೆಯಲಿದೆ. ಈ ಪ್ರಾಂತೀಯ ಹಿಂದೂ ಅಧಿವೇಶನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ಮಾಡುವ 50 ಕ್ಕೂ ಅಧಿಕ ಹಿಂದೂ ಸಂಘಟನೆಗಳ 100 ಕ್ಕೂ ಅಧಿಕ ಹಿಂದೂ ಸಂಘಟನೆಯ ಪದಾಧಿಕಾರಿಗಳು, 100 ಕ್ಕೂ ಅಧಿಕ ರಾಷ್ಟ್ರ ಪ್ರೇಮಿ ವಕೀಲರು, ಸಾಮಾಜಿಕ ಹೋರಾಟಗಾರರು ಮತ್ತು ಹಿಂದೂ ಧಾರ್ಮಿಕ ಮುಖಂಡರು, ಉದ್ಯಮಿಗಳು ಭಾಗಿಯಾಗುವವರಿದ್ದಾರೆ. ಈ ಅಧಿವೇಶನದಲ್ಲಿ ಪೌರತ್ವ […]

ಮಹಿಳಾ ಪ್ರವೇಶ ವಿರೋಧಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ

Monday, October 22nd, 2018
protest

ಪುತ್ತೂರು: ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ಕೇರಳ ಸರ್ಕಾರವು ಕೂಡಲೇ ಸುಗ್ರಿವಾಜ್ಞೆ ಹೊರಡಿಸಿ ಶಬರಿಮಲೆ ಕ್ಷೇತ್ರದ ಪರಂಪರೆಯ ರಕ್ಷಣೆ ಮಾಡಬೇಕು. ಪುತ್ತೂರಿನಲ್ಲಿ ನಡೆದ ರಾಷ್ಟ್ರೀಯ ಹಿಂದೂ ಆಂದೊಲನದಲ್ಲಿ ಒಕ್ಕೊರಲಿನ ಒತ್ತಾಯ. ಪುತ್ತೂರು, ಅ. 22 ಕೊಟ್ಯಾಂತರ ಹಿಂದೂಗಳ ಶ್ರದ್ಧಾಕೇಂದ್ರವಾದ ಶಬರಿಮಲೆಯ ಪರಂಪರೆಗೆ ಸರ್ವೋಚ್ಚ ನ್ಯಾಯಾಲಯದ ಮಹಿಳೆಯರ ಪ್ರವೇಶದ ತೀರ್ಪಿನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟುಗಿದೆ. ಧಾರ್ಮಿಕ ವಿಷಯಗಳ ತೀರ್ಪು ನೀಡುವಾಗ ಶಬರಿಮಲೆ ದೇವಸ್ಥಾನದ ತಂತ್ರಿಗಳ, ರಾಜಮನೆತನ ಮತ್ತು ಹಿಂದೂ ಧರ್ಮಚಾರ್ಯರ ಅಬಿಪ್ರಾಯ ಪಡೆಯದಿರುವುದು ದುರದೃಷ್ಟಕರವಾಗಿದೆ. ಇಂದು ದೇಶದಲ್ಲಿ […]

ಹಿಂದೂ ಸಂಘಟನೆಗಳ ವತಿಯಿಂದ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ

Monday, July 16th, 2018
hindu

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಹಿಂದೂ ಸಂಘಟನೆಗಳ ವತಿಯಿಂದ ಶನಿವಾರ ಮಹಾನಗರದ ಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಗೌರಿ ಲಂಕೇಶ್ ಹತ್ಯಾ ಪ್ರಕರಣದಲ್ಲಿ ಅಮಾಯಕ ಯುವಕರನ್ನು ಬಂಧಿಸಿ ಚಿತ್ರಹಿಂಸೆ ನೀಡಿ ಹೇಳಿಕೆಯನ್ನು ಪಡೆಯುವ ವಿಶೇಷ ತನಿಖಾ ದಳದ ತನಿಖೆಯನ್ನು ಖಂಡಿಸಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡುವಂತೆ, ’ಹಜ್ ಹೌಸ್’ ಗೆ ಹಿಂದೂಗಳ ಮೇಲೆ ಅಪರಿಮಿತ ಅತ್ಯಾಚಾರ ಮಾಡಿರುವ ಟಿಪ್ಪು ಸುಲ್ತಾನನ ಹೆಸರನ್ನು ಕೊಟ್ಟು ಅವನ ಉದಾತ್ತೀಕರಣ ಮಾಡುವ ನಿರ್ಣಯವನ್ನು ಸರ್ಕಾರವು ರದ್ದು ಪಡಿಸಬೇಕು […]

9ನೇ ತರಗತಿಯಲ್ಲಿ ವಿವಾದಾತ್ಮಕ ಪಠ್ಯ, ಹಿಂದೂ ಸಂಘಟನೆಗಳ ಆಕ್ರೋಶ

Monday, June 4th, 2018
social-science

ಮಂಗಳೂರು: ರಾಜ್ಯದಲ್ಲಿ ಶಾಲೆ ಆರಂಭವಾಗಿವೆ. ಮಕ್ಕಳಿಗೆ ಸಮರ್ಪಕವಾಗಿ ಪಠ್ಯ ಪುಸ್ತಕಗಳೂ ಸರಬರಾಜಾಗಿವೆ . ಅದರ ಬೆನ್ನಲೇ ವಿವಾದಗಳು ಕೂಡ ಸುತ್ತಿಕೊಳ್ಳಲಾರಂಭಿಸಿವೆ. ಈ ಬಾರಿಯ 9 ನೇ ತರಗತಿಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಸಮಾಜ ವಿಜ್ಞಾನ ಪುಸ್ತಕದಲ್ಲಿ ಕ್ರೈಸ್ತ ಹಾಗು ಇಸ್ಲಾಂ ಧರ್ಮಗಳನ್ನು ವೈಭವೀಕರಿಸುವ ಪ್ರಯತ್ನಗಳು ನಡೆದಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಈ ಕುರಿತು ಹಿಂದೂ ಸಂಘಟನೆಗಳು ಖಂಡನೆ ವ್ಯಕ್ತಪಡಿಸಿದ್ದು ರಾಜ್ಯ ಸರಕಾರದ ವಿರುದ್ದ ಹೋರಾಟಕ್ಕೆ ಅಣಿಯಾಗುತ್ತಿವೆ. 9ನೇ ತರಗತಿಯ ಪ್ರಥಮ ಅಧ್ಯಾಯದಲ್ಲೇ ಇಸ್ಲಾಂ ಹಾಗೂ ಕ್ರಿಶ್ಚಿಯನ್ […]

ಹಿಂದೂ ಸಂಘಟನೆಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ದಿಟ್ಟ ಯುವತಿ

Wednesday, January 10th, 2018
hindu-girl

ಮಂಗಳೂರು: ವಿದ್ಯಾರ್ಥಿ ಸಂಘಟನೆಯ ಯುವತಿ ಮತ್ತು ಅನ್ಯ ಕೋಮಿನ ವಿದ್ಯಾರ್ಥಿ ಮುಖಂಡರೊಬ್ಬರು ಜತೆಯಾಗಿದ್ದ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಹಲ್ಲೆ ನಡೆಸುವ ಬೆದರಿಕೆ ಹಾಕಿರುವ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇದರ ವಿರುದ್ಧ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿ ಸಂಘಟನೆ ಮುಖಂಡರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಂಗಳೂರಿನ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳಾದ ಮಾಧುರಿ ಬೋಳಾರ ಹಾಗೂ ಹಂಝ ಕಿನ್ಯಾ ಸೇರಿದಂತೆ ಸಂಘಟನೆಯ ಮುಖಂಡರು ಇತ್ತೀಚೆಗೆ ದಾವಣಗೆರೆಯ ಸಮ್ಮೇಳನಕ್ಕೆ ತೆರಳಿದ್ದರು. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎಲ್ಲರ […]

ಮುಸ್ಲಿಂ ವ್ಯಕ್ತಿಯ ಮೇಲೆ ಹಿಂದೂ ಯುವಕರಿಂದ ಹಲ್ಲೆ ಆರೋಪ

Friday, January 5th, 2018
hindu-parishath

ಉಡುಪಿ: ಹಿಂದೂ ಸಂಘಟನೆಗೆ ಸೇರಿದ ಕೆಲ ಸದಸ್ಯರು ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಉಡುಪಿಯಲ್ಲಿ ವರದಿಯಾಗಿದೆ. ಕಾರ್ಕಳದ ಬಂಗ್ಲೆಗುಡ್ಡೆ ಸಮೀಪ ಗುರುವಾರ ಸಂಜೆ ಮೊಹಸಿನ್ ಎಂಬುವರ ಮೇಲೆ ಹಿಂದೂ ಸಂಘಟನೆಗಳ ಕೆಲವು ಯುವಕರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಸಾಂದರ್ಭಿಕ ಚಿತ್ರ ಗಾಯಗೊಂಡಿರುವ ಮೊಹಸಿನ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಯ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ದುಷ್ಕರ್ಮಿಗಳು ಬಳಸಿದ ವಾಹನದ ಸಂಖ್ಯೆಯನ್ನು ಗಾಯಾಳು ಮೊಹಸಿನ್ ನೀಡಿದ್ದಾರೆ. ಅದರ ಆಧಾರದ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. […]

ನ್ಯೂ ಇಯರ್‌ ಪಾರ್ಟಿಗೆ ಹಿಂದೂ ಸಂಘಟನೆಗಳ ಎಚ್ಚರಿಕೆ!!

Friday, December 29th, 2017
New-year

ಮಂಗಳೂರು : ಡ್ರಗ್ಸ್‌ ಮಾಫಿಯಾ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು ಹೊಸ ವರ್ಷದ ಪಾರ್ಟಿಗಳಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಬಲೆಗೆ ಹಾಕಿಕೊಳ್ಳುವ ಸಂಚು ಹೂಡಲಾಗಿದ್ದು, ಪಾರ್ಟಿಗಳಿಗೆ ಕಡಿವಾಣ ಹಾಕಬೇಕು ಎಂದು ಹಿಂದೂ ಪರ ಸಂಘಟನೆಗಳು ಪೊಲೀಸ್‌ ಕಮಿಷನರ್‌ಗೆ ಮನವಿ ಸಲ್ಲಿಸಿದ್ದಾರೆ. ‘ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್‌ ಸ್ವೇಚ್ಛಾಚಾರದಿಂದ ಕೂಡಿದ,ಡ್ರಗ್ಸ್‌ ಹಂಚುವ ಅಶ್ಲೀಲ ಪಾರ್ಟಿಗಳಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ’ ಎಂದು ಜಗದೀಶ್‌ ಶೇಣವ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 12 ಗಂಟೆಯ ಬಳಿಕ ಪಾರ್ಟಿಗಳಿಗೆ ಅವಕಾಶ ನೀಡಬಾರದು ಎಂದು ಸಂಘಟನೆಗಳು […]