ದೇಶದ ಮೊದಲ 3ಡಿ ತಾರಾಲಯ ಮಂಗ್ಳೂರಲ್ಲಿ ಮಾರ್ಚ್ 2ರಿಂದ ಆರಂಭ
Tuesday, February 27th, 2018ಮಂಗಳೂರು: ನಭೋಮಂಡಲದ ವಿಸ್ಮಯಗಳನ್ನು ಪ್ರದರ್ಶಿಸಲು ಮಂಗಳೂರಿನಲ್ಲಿ ಅಪರೂಪದ ತಾರಾಲಯವೊಂದು ನಿರ್ಮಾಣಗೊಂಡಿದೆ. ಇದು ದೇಶದಲ್ಲಿಯೇ ಪ್ರಥಮವಾಗಿರುವ ವಿಶಿಷ್ಟ ಸೌಲಭ್ಯಗಳನ್ನು ಹೊಂದಿರುವ 3ಡಿ ತಾರಾಲಯ. ಭಾರತದ ಮೊದಲ 3ಡಿ 8ಕೆ ಯುಎಚ್ ಡಿ ಹೈಬ್ರಿಡ್ ತಂತ್ರಜ್ಞಾನದ ತಾರಾಲಯ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಮಂಗಳೂರು ಹೊರವಲಯದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ಸ್ವಾಮಿ ವಿವೇಕಾನಂದ ತಾರಾಲಯ ಭಾರತದ ಪ್ರಥಮ 3ಡಿ ತಾರಾಲಯವಾಗಿದೆ. ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುದಾನದಿಂದ ನಿರ್ಮಾಣವಾಗಿದೆ. ಸ್ವಾಮಿ […]