ಸರ್ಫಿಂಗ್ ವೇಳೆ ಅಪಘಾತ: ಆಸೀಸ್ ಮಾಜಿ ಆಟಗಾರ ಹೇಡನ್ಗೆ ಗಂಭೀರ ಗಾಯ
Monday, October 8th, 2018ಕ್ವೀನ್ಸ್ಲ್ಯಾಂಡ್: ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಮ್ಯಾಥ್ಯೂ ಹೇಡನ್ ಅವರಿಗೆ ಅಪಘಾತವಾಗಿದ್ದು ಕುತ್ತಿಗೆಗೆ ಗಂಭೀರ ಗಾಯವಾಗಿದೆ. ಹೇಡನ್ ಕುಟುಂಬದೊಂದಿಗೆ ವೀಕೆಂಡ್ ಎಂಜಾಯ್ ಮಾಡಲು ಅವರು ಕ್ವೀನ್ಸ್ಲೆಂಡ್ಗೆ ತೆರಳಿದ್ದರು. ಸಮುದ್ರದಲ್ಲಿ ಮಗನೊಂದಿಗೆ ಸರ್ಫಿಂಗ್ ಆಟವಾಡುತ್ತಿದ್ದ ವೇಳೆ ಹೇಡನ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅಪಘಾತಕ್ಕೀಡಾದ ತಕ್ಷಣವೇ ಹೇಡನ್ ಅವರನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಪಘಾತವಾದ ಸಂದರ್ಭದ ಫೋಟೋವೊಂದನ್ನು ಹೇಡನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಆ ಫೋಟೋದಲ್ಲಿ ಹೇಡನ್ ತಲೆ ಭಾಗಕ್ಕೆ ಗಾಯವಾಗಿದ್ದು, ರಕ್ತದ ಕಲೆ ಕಾಣಿಸುತ್ತಿದೆ. […]