ಕಲ್ಕಿ ಭಗವಾನ್ ಅಧಿಕ ಮೌಲ್ಯದ ಅಘೋಷಿತ ಆಸ್ತಿ ಪತ್ತೆ : ಐಟಿ ಅಧಿಕಾರಿಗಳಿಂದ 43.90 ಕೋಟಿ ರೂ. ನಗದು ವಶ

Saturday, October 19th, 2019
kalki-bhagavan

ಹೈದರಾಬಾದ್ : ವಿವಾದಿತ ಸ್ವಯಂಘೋಷಿತ ದೇವಮಾನವ ಕಲ್ಕಿ ಭಗವಾನ್ಗೆ ಸೇರಿದ ವಿವಿಧ ಪ್ರದೇಶಗಳಲ್ಲಿ ಬುಧವಾರ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 500 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ. ಕಲ್ಕಿ ಭಗವಾನ್ಗೆ ಸೇರಿದ ಚಿತ್ತೂರಿನ ಆಶ್ರಮ, ಆಂಧ್ರ ಮತ್ತು ಕರ್ನಾಟಕದ ವಿವಿಧೆಡೆ ಹಾಗೂ ಕಲ್ಕಿ ಭಗವಾನ್ ಪುತ್ರ ತಮಿಳುನಾಡಿನಲ್ಲಿ ಹೊಂದಿದ್ದ ವಹಿವಾಟಿನ ಸ್ಥಳಗಳು ಸೇರಿ 40 ಕಡೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಸುಮಾರು 409 ಕೋಟಿ […]

ಇಂದು ಕೆಸಿಆರ್​ಗೆ ಪಟ್ಟಾಭಿಷೇಕ… ಎರಡನೇ ಬಾರಿ ಸಿಎಂ ಆಗಿ ಪ್ರಮಾಣವಚನ

Thursday, December 13th, 2018
chandrashekar-rao

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಕೆ. ಚಂದ್ರಶೇಖರ ರಾವ್ ಅವರು ಇಂದು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಲಿದ್ದಾರೆ. ಅವಧಿಗೆ ಮುನ್ನ ವಿಧಾನಸಭೆ ವಿಸರ್ಜಿಸಿಯೂ ತೆಲಂಗಾಣದಲ್ಲಿ ಬಹುಮತ ಪಡೆದ ಏಕೈಕ ಪಕ್ಷವಾಗಿ ಟಿಆರ್ಎಸ್ ಇತಿಹಾಸ ನಿರ್ಮಿಸಿದೆ. ರಾಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆದು, ಜಯ ಸಾಧಿಸಿರುವ ಕೆಸಿಆರ್ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 1:30ಕ್ಕೆ ರಾಜಭವನದಲ್ಲಿ ನಡೆಯುವ ಪ್ರಮಾಣವಚನ ಸಮಾರಂಭದಲ್ಲಿ ಕೆಸಿಆರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಜೊತೆ ಮತ್ತಿಬ್ಬರು ಸಚಿವರು ಪ್ರಮಾಣವಚನ ಸ್ವೀಕರಿಸುವ […]

ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಒತ್ತು ಸಮಗ್ರ ಅಭಿವೃದ್ಧಿ ಸೂಚ್ಯಂಕ ಪರಿಷ್ಕರಣೆ ಖಾಲಿ ಹುದ್ದೆಗಳ ಭರ್ತಿ ಕ್ರಮ: ಕೃಷ್ಣ ಭೈರೆಗೌಡ

Wednesday, December 12th, 2018
bore-gouda

ಬೆಳಗಾವಿ: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಸಂವಿಧಾನದ ಪರಿಚ್ಛೇಧದ 371 (ಜೆ) ಅಡಿಯಲ್ಲಿ ಕಲ್ಪಿಸಲಾಗಿರುವ ವಿಶೇಷ ಆದ್ಯತೆ ನೀಡಿ ಶಿಕ್ಷಣ, ಆರೋಗ್ಯ, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸಮಗ್ರ ಅಭಿವೃದ್ಧಿ ಸೂಚ್ಯಂಕವನ್ನು ಪರಿಷ್ಕರಣೆ ಮಾಡಲು ಕ್ರಮ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಅವರು ರಾಜ್ಯ ವಿಧಾನಪರಿಷತ್ತಿನಲ್ಲಿ ಮಂಗಳವಾರ ್ರಕಟಿಸಿದರು. ಕೆ. ಸಿ. ಕೊಂಡಿಯ್ಯ ಮತ್ತು ಶರಣಪ್ಪ ಮಟ್ಟರ್ ಅವರು ನಿಯಮ 330 ರ […]

ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣಪತ್ರ ಸ್ವೀಕರಿಸಲು ಕೆ. ಚಂದ್ರಶೇಖರ್​ ರಾವ್​ ತಯಾರಿ

Wednesday, December 12th, 2018
chandrashekar-rao

ಹೈದರಾಬಾದ್: ಅವಧಿಗೂ ಮುನ್ನ ವಿಧಾನಸಭೆ ವಿಸರ್ಜನೆ, ರಾಷ್ಟ್ರ ನಾಯಕರ ಅಬ್ಬರದ ಪ್ರಚಾರ ಇಷ್ಟೆಲ್ಲಾ ಸವಾಲುಗಳ ನಡುವೆಯೂ ಗೆದ್ದು ಬೀಗಿದ ಕೆ. ಚಂದ್ರಶೇಖರ್ ರಾವ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಗಾದಿಗೇರುವ ತಯಾರಿಯಲ್ಲಿದ್ದಾರೆ. ಇಂದು ಅಧಿಕೃತವಾಗಿ ಅವರು ಶಾಸಕಾಂಗದ ಪಕ್ಷದ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬೆಳಗ್ಗೆ 11:30ಕ್ಕೆ ಶಾಸಕಾಂಗ ಪಕ್ಷದ ಸಭೆ ಆರಂಭವಾಗಲಿದ್ದು, ಈ ಪ್ರಕ್ರಿಯೆ ನಡೆಯಲಿದೆ. ಇನ್ನು ಪ್ರಮಾಣವಚನ ಸ್ವೀಕಾರದ ಕುರಿತಾಗಿ ಚರ್ಚೆ ನಡೆಸಲು ಅವರು ನಾಳೆ ಸಭೆ ನಡೆಸುವುದಾಗಿ ತಿಳಿದುಬಂದಿದೆ. ಮತ್ತೆ ಕೆಲ […]

ಚುನಾವಣೆ ಬಂದಾಗ ಮಾತ್ರ ರಾಹುಲ್​ರಿಂದ ರಾಮ ನಾಮ ಜಪ: ಸ್ಮೃತಿ ಇರಾನಿ

Wednesday, December 5th, 2018
smriti-irani

ಹೈದರಾಬಾದ್: ಚುನಾವಣೆಗಾಗಿ ಮಾತ್ರ ರಾಹುಲ್ ಗಾಂಧಿ ರಾಮ ನಾಮ ಜಪಿಸುತ್ತಾರೆ, ಅಲ್ಲದೆ ಶಿವ ಭಕ್ತರೂ ಆಗ್ತಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು. ರಾಮಗುಂಡಂನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಇನ್ನೆಷ್ಟು ದಿನಗಳ ಕಾಲ ನೀವು (ಕಾಂಗ್ರೆಸ್) ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತೀರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿ ರಾಮ ಇರಲೇ ಇಲ್ಲ ಎಂದು ವಾದಿಸಿದ್ದರು. ಈಗ ಚುನಾವಣೆಗಾಗಿ ಅವರು ರಾಮ ನಾಮ ಮಾತ್ರ ಜಪಿಸುತ್ತಿಲ್ಲ, ಜತೆಗೆ […]

ಪ್ರಧಾನಿ ಮೋದಿ ಮೊದಲು ಸಂವಿಧಾನ ಓದಲಿ: ಅಸಾದುದ್ದೀನ್​ ಓವೈಸಿ

Tuesday, December 4th, 2018
narendra-modi

ಹೈದರಾಬಾದ್: ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಎಐಎಂಐಎಂನ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಸಂವಿಧಾನವನ್ನು ಓದಬೇಕಾದ ಅಗತ್ಯವಿದೆ ಎಂದು ತಿರುಗೇಟು ನೀಡಿದ್ದಾರೆ. ಹೈದಾರಾಬಾದ್ನಲ್ಲಿ ಸೋಮವಾರ ಬಿಜೆಪಿ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಮಾತನಾಡಿದಕ್ಕೆ ಟಾಂಗ್ ನೀಡಿರುವ ಓವೈಸಿ, ನಿಮಗೆ ಸಂವಿಧಾನ ಗೊತ್ತಿಲ್ಲದೇ ಇದ್ದಲ್ಲಿ ಆ ಬಗ್ಗೆ ಗೊತ್ತಿರುವವರ ಸಹಾಯವನ್ನಾದರೂ ಪಡೆಯಿರಿ ಎಂದು ಕುಟುಕಿದ್ದಾರೆ. ನೀವು ಸಂವಿಧಾನದ 15 ಹಾಗೂ 16 ನೇ ವಿಧಿಯಗಳನ್ನು ಓದಲೇಬೇಕು. ಮಾರಾಠರಿಗೆ, ಜಾಟರಿಗೆ ಹಾಗೂ ಗುಜ್ಜಾರ್ಗಳಿಗೆ ಮೀಸಲಾತಿ […]

ಭಾರತದ ಸ್ಪಿನ್​ ಮಾಂತ್ರಿಕ ಆರ್ ಅಶ್ವಿನ್ ಗೆ ​ಇಂದು 33ನೇ ಹುಟ್ಟು ಹಬ್ಬದ ಸಂಭ್ರಮ 

Monday, September 17th, 2018
ashwin

ಹೈದರಾಬಾದ್: ಭಾರತದ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಇಂದು 33ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ನಡುವೆ ಅಶ್ವಿನ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸ್ಪಿನ್ ಮೆಜೀಶಿಯನ್ಗೆ ಹ್ಯಾಪಿ ಬರ್ತ್ಡೇ ಆ್ಯಶ್ ಎಂದು ಶುಭಾಶಯಗಳನ್ನ ಕೋರುತ್ತಿದೆ. ಇದಕ್ಕೆ ವಿರಾಟ್ ಕೊಹ್ಲಿ ಕೂಡಾ ಅಶ್ವಿನ್ಗೆ ವಿಶ್ ಮಾಡಿದ್ದಾರೆ. ಇದುವರೆಗೆ 62 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ ಒಟ್ಟು 327 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಇನ್ನು 111 ಏಕದಿನ ಪಂದ್ಯಗಳನ್ನಾಡಿ 150 ವಿಕೆಟ್ […]

ತಂದೆಯೇ ನನ್ನ ಗಂಡನನ್ನು ಕೊಲೆ ಮಾಡಿದ್ದೂ: ಮಗಳ ಆರೋಪ

Saturday, September 15th, 2018
murder

ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ವೊಂದು ಸಿಕ್ಕಿದೆ. ನನ್ನ ಗಂಡನನ್ನು ಕೊಲೆ ಮಾಡಿದ್ದು ಯಾರು ಅಲ್ಲ ನಮ್ಮ ತಂದೆಯೇ ಎಂದು ಮಗಳೊಬ್ಬಳು ಆರೋಪಿಸಿದ್ದಾರೆ. ಮನೆಯವರ ವಿರುದ್ಧದ ನಡವೆಯೂ ಅಮೃತ ವರ್ಷಗಳ ಹಿಂದೆ ಪ್ರಣಯ್ನ ಜೊತೆ ಸಪ್ತಪದಿ ತುಳಿದಿದ್ದರು. ಪ್ರಣಯ್ ಜೊತೆ ಸುಖ ಸಂಸಾರ ನಡೆಸುತ್ತಿದ್ದ ಅಮೃತ ಐದು ತಿಂಗಳ ಗರ್ಭಿಣಿ ಸಹ ಆಗಿದ್ದರು. ‘ನಾನು ಮದುವೆ ಆಗಿರುವುದಾಗಲಿ ಮತ್ತು ಗರ್ಭಿಣಿಯಾಗಿದ್ದಾಗಲಿ ನಮ್ಮ ತಂದೆಗೆ ಇಷ್ಟವಿರಲಿಲ್ಲ. ನಾನು ಗರ್ಭಿಣಿ ಆಗಿರುವ ಸುದ್ದಿ […]

ಜಿಲ್ಲೆಯಲ್ಲಿ ಮೀನಿಗೆ ರಾಸಾಯನಿಕ ಬಳಕೆ ಮಾಡಿ ಮಾರಾಟ ವದಂತಿ..ಮೀನು ಮಾರಾಟಗಾರರು ಸಂಕಷ್ಟ!

Tuesday, June 26th, 2018
fish

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನಿಗೆ ರಾಸಾಯನಿಕ ಬಳಕೆ ಮಾಡಿ ಮಾರಾಟ ಮಾಡುತ್ತಾರೆ ಎನ್ನುವ ವದಂತಿ ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿರುವುದರಿಂದ ಮೀನು ಮಾರಾಟಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮೀನಿಗೆ ರಾಸಾಯನಿಕ ಸಿಂಪಡಣೆ ಮಾಡಿ ಮಾರಾಟ ಮಾಡುತ್ತಾರೆ ಎನ್ನುವ ಆಕ್ಷೇಪಣೆಯನ್ನು ಮಾಡುವ ಓರ್ವ ಗ್ರಾಹಕ ಮೀನು ಮಾರಾಟಗಾರರ ಬಳಿ ವಾಗ್ವಾದ ಮಾಡುವುದನ್ನು ಒಳಗೊಂಡ ವಿಡಿಯೋವೊಂದನ್ನು ವಾಟ್ಸಪ್ ಗುಂಪಿನಲ್ಲಿ ಹರಿಯಬಿಡಲಾಗಿದೆ. ಈ ಸಂಭಾಷಣೆಯಲ್ಲಿ ಗ್ರಾಹಕರು ಮೀನು ಮಾರಾಟಗಾರರನ್ನು ಆಕ್ಷೇಪಿಸುತ್ತಿದ್ದಾರೆ. ಮೀನು ಮಾರಾಟಗಾರ ತಾನು ಆ […]

ನನ್ನನ್ನು ಯಾರೂ ಈ ನಿಟ್ಟಿನಲ್ಲಿ ಸಂಪರ್ಕ ಮಾಡಿಲ್ಲ… ಆ ಧೈರ್ಯ ಯಾರಿಗೂ ಇಲ್ಲ: ಎಚ್. ವಿಶ್ವನಾಥ್

Friday, May 18th, 2018
H-vishwanath;

ಹೈದರಾಬಾದ್: ರಾಜ್ಯ ಸರ್ಕಾರ ರಚನೆ ಕಸರತ್ತಿನ ಹಿನ್ನೆಲೆಯಲ್ಲಿ ಬಹುಮತ ಸಾಬೀತಿಗೆ ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ನಾಳೆ ದಿನಾಂಕ ನಿಗದಿಪಡಿಸಿದೆ. ಈ ನಡುವೆ ಬಿಜೆಪಿಯಿಂದ ಕುದುರೆ ವ್ಯಾಪಾರ ನಡೆಯಲು ಪ್ರಯತ್ನ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ನನ್ನನ್ನು ಯಾರೂ ಈ ನಿಟ್ಟಿನಲ್ಲಿ ಸಂಪರ್ಕ ಮಾಡಿಲ್ಲ. ಆ ಧೈರ್ಯ ಯಾರಿಗೂ ಇಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. ತಮ್ಮ ತಂದೆಯವರನ್ನು ಖರೀದಿ ಮಾಡುವ ಪ್ರಯತ್ನ ಸಫಲವಾಗುವುದಿಲ್ಲ ಎಂದು ಶಾಸಕ ವಿಶ್ವನಾಥ್ ಅವರ ಪುತ್ರ ಹಾಕಿರುವ […]