ರೆಂಜಿಲಾಡಿಯಲ್ಲಿ ಪತಿ, ಪತ್ನಿ ಮೇಲೆ ಚಿರತೆ ದಾಳಿ

Friday, February 12th, 2021
chita

ಕಡಬ : ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿ ಎಂಬಲ್ಲಿ ಚಿರತೆ ದಾಳಿಯಿಂದ ಪತಿ, ಪತ್ನಿ ಗಾಯಗೊಂಡ ಘಟನೆ ಕಡಬ ತಾಲೂಕಿನ  ಶುಕ್ರವಾರ ಬೆಳಗಿನ ಜಾವ ನಡೆದಿದೆ. ರೆಂಜಿಲಾಡಿಯ ಹೇರ ನಿವಾಸಿಗಳಾದ ಚಂದ್ರಶೇಖರ್ ಕಾಮತ್ ಹಾಗೂ ಅವರ ಪತ್ನಿ ಸೌಮ್ಯಾ ಕಾಮತ್ ಎಂಬವರು ಗಾಯಗೊಂಡಿದ್ದಾರೆ. ಇವರಿಬ್ಬರು ತೋಟದಲ್ಲಿ ಸ್ಪಿಂಕ್ಲರ್ ಬದಲಾಯಿಸಲೆಂದು ಶುಕ್ರವಾರ ಮುಂಜಾವ 1:304 ಸುಮಾರಿಗೆ ತೆರಳಿದ್ದ ವೇಳೆ ಚಿರತೆ ದಾಳಿ ನಡೆಸಿದೆಯೆನ್ನಲಾಗಿದೆ. ಚಿರತೆ ಮೊದಲು ಚಂದ್ರಶೇಖರ್ ಅವರ ಮೇಲೆ ದಾಳಿ ನಡೆಸಿದೆ. ಈ ವೇಳೆ ಅವರ ರಕ್ಷಣೆಗೆ ಧಾವಿಸಿದ ಸೌಮ್ಯಾರ […]

ಕುಕ್ಕೆ ಸುಬ್ರಹ್ಮಣ್ಯ ಮಠದ ಬಳಿ ಬೆಂಗಳೂರು ಮೂಲದ ಯುವಕ ಆತ್ಮಹತ್ಯೆ

Sunday, October 18th, 2020
Ranganath

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದ ಉತ್ತರಾದಿ ಮಠದ ಬಳಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಮದ್ಯಾಹ್ನ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬೆಂಗಳೂರು ಮೂಲದ ರಂಗನಾಥ್ (25) ಎಂದು ಗುರುತಿಸಲಾಗಿದೆ. ಈತ ವಾರದ ಹಿಂದೆ ಮನೆ ಬಿಟ್ಟು ಸುಬ್ರಹ್ಮಣ್ಯಕ್ಕೆ ಬಂದಿದ್ದ ಎಂದು ತಿಳಿದು ಬಂದಿದೆ. ಈತನ ಆತ್ಮಹತ್ಯೆ ಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಮೃತ ದೇಹವನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೋಲಿಸರು ಭೇಟಿ ನೀಡಿ […]

ಕಡಬ : ಕಾರು-ದ್ವಿಚಕ್ರ ವಾಹನ ಢಿಕ್ಕಿ : ಸವಾರ ಗಂಭೀರ

Wednesday, October 30th, 2019
kadaba

ಕಡಬ : ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ಕಡಬದ ಕಾಲೇಜು ಕ್ರಾಸ್ ಬಳಿ ಬುಧವಾರ ಸಂಜೆ ನಡೆದಿದೆ. ಗಾಯಾಳು ಸವಾರನನ್ನು ಕಡಬ ಸಮೀಪದ ಪಣೆಮಜಲು ನಿವಾಸಿ ನಾರಾಯಣ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ತನ್ನ ದ್ವಿಚಕ್ರ ವಾಹನದಲ್ಲಿ ಸರ್ಕಾರಿ ಕಾಲೇಜು ಕಡೆಯಿಂದ ಮುಖ್ಯ ರಸ್ತೆಗೆ ಬರುತ್ತಿದ್ದ ವೇಳೆ ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಮಾರುತಿ ಎ-ಸ್ಟಾರ್ ಕಾರು ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ […]

ಬೆಳುವಾಯಿ ಆರೋಗ್ಯ ಕೇಂದ್ರಕ್ಕೆ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನ ಸಂಘಟನೆಯ ಸದಸ್ಯರ ಭೇಟಿ

Wednesday, September 21st, 2016
health-centre

ಮಂಗಳೂರು: ಅವ್ಯವಸ್ಥೆ ಹಾಗೂ ಸಮಸ್ಯೆಗಳ ಆಗರವಾಗಿರುವ ಬೆಳುವಾಯಿ ಮತ್ತು ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳೂರು ತಾಲೂಕು ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನ ಸಂಘಟನೆಯ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳುವಾಯಿ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರತ ವೈದ್ಯರು ಇಲ್ಲ. ಆಸ್ಪತ್ರೆಗೆ ಬಂದ ಹಲವಾರು ರೋಗಿಗಳು ಚಿಕಿತ್ಸೆ ಇಲ್ಲದೆ ವಾಪಸ್‌ ತೆರಳುತ್ತಿರುವುದು ಇಲ್ಲಿ ಸಾಮಾನ್ಯದಂತಾಗಿತ್ತು. ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆ ಹಾಗೂ ಆವರಣದಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿವೆ. ಕಲ್ಲಮುಂಡ್ಕೂರು ಆಸ್ಪತ್ರೆಯ ವೈದ್ಯಾಧಿಕಾರಿ ತರಬೇತಿಗೆ ತೆರಳಿರುವ […]

ಮನಾಪದ ಮಲೇರಿಯಾ ನಿಯಂತ್ರಣ ತಂತ್ರಾಂಶದ ಬಿಡುಗಡೆ

Sunday, October 18th, 2015
malaria software

ಮಂಗಳೂರು: ಮಂಗಳೂರು ಮೆಡಿಕಲ್‌ ರಿಲೀಫ್‌ ಸೊಸೈಟಿ, ಐ ಪಾಯಿಂಟ್‌ ಕನ್ಸಲ್ಟಂಟ್‌, ಕೋಟ್‌ ಕ್ರಾಫ್ಟ್‌ ಟೆಕ್ನಾಲಜಿ, ಕರ್ಣಾಟಕ ಬ್ಯಾಂಕ್‌, ಕಾರ್ಪೊರೇಶನ್‌ ಬ್ಯಾಂಕ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಮಲೇರಿಯಾ ನಿಯಂತ್ರಣ ತಂತ್ರಾಂಶವನ್ನು ಸಚಿವ ಯು.ಟಿ. ಖಾದರ್‌ ಶನಿವಾರ ಮನಪಾ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು. ಮಲೇರಿಯಾ ನಿಯಂತ್ರಣ ತಂತ್ರಾಂಶ ಅಭಿವೃದ್ಧಿಪಡಿಸುವುದರ ಮೂಲಕ ಆರೋಗ್ಯವಂತ ಮಂಗಳೂರು ನಿರ್ಮಾಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ದೇಶದಲ್ಲೇ ಪ್ರಥಮ ಹೆಜ್ಜೆ ಇರಿಸಿದೆ. ಮುಂದಿನ ಮೂರು ವರ್ಷದೊಳಗೆ ನಗರದಲ್ಲಿ ಮಲೇರಿಯಾ ಸಂಪೂರ್ಣ ನಿಯಂತ್ರಣವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಚಿವ ಯು.ಟಿ. ಖಾದರ್‌ […]

ಕಾನೂನು ಸಚಿವ ಎಂ.ವೀರಪ್ಪ ಮೊಲಿಯವರಿಂದ ನೂತನ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ

Friday, April 29th, 2011
ಕಾನೂನು ಸಚಿವ ಎಂ.ವೀರಪ್ಪ ಮೊಲಿಯವರಿಂದ ನೂತನ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು : ಮಂಜನಾಡಿ ಗ್ರಾಮದ ನಾಟೆಕಲ್ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಮಂಜನಾಡಿ, ರಕ್ಷಾ ಸಮಿತಿ ಪ್ರಾಥಮಿಕ ಆರೋಗ್ಯ ಕೇಂದ್ರ ನಾಟೆಕಲ್ ಇಲ್ಲಿ ಸುಮಾರು 1ಕೋಟಿ. ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡಕ್ಕೆ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಲಿ ಶಂಕುಸ್ಥಾಪನೆಗೈದರು. ಬಳಿಕ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಮುದ್ರ ಸೇರುವ ನದಿ ನೀರಿಗೆ ಅಲ್ಲಲ್ಲಿ ಅಣೆಕಟ್ಟು ನಿರ್ಮಿಸಿ, ಸಂಗ್ರಹವಾದ ನೀರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ವ್ಯರ್ಥವಾಗಿ ಪೋಲಾಗುವ ನದಿ ನೀರನ್ನು […]

ಹರಿಷಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಜಿ ಸಚಿವ ಹಾಲಪ್ಪ ಹಲ್ಲೆ

Wednesday, February 16th, 2011
ಹಾಲಪ್ಪ ಉಮಾಪತಿ

ಶಿವಮೊಗ್ಗ : ಸೊರಬದ ಹರಿಷಿ ಗ್ರಾಮದ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಹರಿಷಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಮಾಪತಿಯವರ ಮೇಲೆ ಹಾಲಪ್ಪ ಬೂಟು ಕಾಲಿನಿಂದ ಹಲ್ಲೆ ನಡೆಸಿದ್ದಾರೆ. ಬೂಟು ಕಾಲಿನಿಂದ ಎದೆಗೆ ಒದ್ದು ಹಲ್ಲೆ ನಡೆಸಿರುವ ಘಟನೆಯಿಂದ ಉಮಾಪತಿ ಸೊರಬ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಹಾಲಪ್ಪ ಆರೋಗ್ಯ ಕೇಂದ್ರದ ಕೋಣೆಗಳಿಗೆ ಬೀಗ ಹಾಕಿರುವುದನ್ನು ಪ್ರಶ್ನಿಸಿದ್ದರು. ಆರೋಗ್ಯದ ಕೇಂದ್ರದ ಕೆಲಸ ಪೂರ್ಣವಾಗಿಲ್ಲ ಎಂದು ಅಧ್ಯಕ್ಷ ಉಮಾಪತಿ ಬೀಗ ಹಾಕಿದ್ದರು. ಇದರಿಂದ […]

ವಳಾಲು ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಮಕ್ಕಳು ಅಸ್ವಸ್ಥ.

Thursday, September 23rd, 2010
ವಳಾಲು ಶಾಲೆ

ಪುತ್ತೂರು: ಮಧ್ಯಾಹ್ನ ಬಿಸಿಯೂಟ ಮಾಡಿದ 45 ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾದ ಘಟನೆ ಪುತ್ತೂರು ತಾಲೂಕಿನ ವಳಾಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ. ಅಸ್ವಸ್ಥ ಮಕ್ಕಳನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿದೆ. ಕೆಲವು ಮಕ್ಕಳನ್ನು ಖಾಸಗಿ ಆಸ್ವತ್ರೆಗೆ ಸೇರಿಸಲಾಗಿದೆ. ಸಹಾಯಕ ಕಮಿಷನರ್ ಡಾ| ಹರೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಮತ್ತು ಶಾಲೆಯಲ್ಲಿ ತಯಾರಿಸಲಾದ ಬಿಸಿಯೂಟದ ಸ್ಯಾಂಪಲ್ನ್ನು ಆರೋಗ್ಯ ಇಲಾಖೆಯ ಮೂಲಕ ಪ್ರಯೋಗಾಲಯಕ್ಕೆ […]